ಮೂರು ವರ್ಷ ಸೇನೆಯಲ್ಲಿ ಕೆಲ್ಸ ಮಾಡಿ ನಾವೆಲ್ಲಿ ಹೋಗ್ಲಿ !??: ಅಗ್ನಿ ಪಥ್ – ಭಾರೀ ಪ್ರತಿಭಟನೆ
ನವದೆಹಲಿ: ಕೇಂದ್ರ ಸರ್ಕಾರ ಘೋಷಿಸಿರುವ ಅಲ್ವಾವಧಿಯ ಸೇನಾ ನೇಮಕಾತಿ ಅಗ್ನಿಪಥ ಯೋಜನೆ ವಿರೋಧಿಸಿ ಪ್ರತಿಭಟನೆ ಭುಗಿಲೆದ್ದಿದೆ. ಬಿಹಾರ, ಜಾರ್ಖಂಡ್ ಸೇರಿದಂತೆ ದೇಶದ ಹಲವೆಡೆ ಪ್ರತಿಭಟನೆ ನಡೆಯುತ್ತಿದೆ. ಬಿಹಾರದ ಚಾಪ್ರಾದಲ್ಲಿ ಪ್ರತಿಭಟನೆ ನಡೆಸಿದ ಯುವಕರು, ಟೈರ್ ಗೆ ಬೆಂಕಿ ಹಚ್ಚಿಗೆ ಆಕ್ರೋಶ ವ್ಯಕ್ತಪಡಿಸಿದರು. ಬಸ್ ವೊಂದನ್ನು ಧ್ವಂಸಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ನಾವು ಕಷ್ಟಪಟ್ಟು ವ್ಯಾಯಾಮ ಮಾಡಿ ಸೇನೆ ಸೇರುತ್ತೇವೆ. ಅಲ್ಲಿ ಕೆಲ ತಿಂಗಳು ತರಬೇತಿ ಮತ್ತು ರಜೆಯೊಂದಿಗೆ ನಂತರ ಹೇಗೆ ನಾಲ್ಕು ವರ್ಷ ಸೇವೆ ಸಲ್ಲಿಸಲು ಸಾಧ್ಯ? ತರಬೇತಿ ಪಡೆದ ನಂತರ ಕೇವಲ ಮೂರು ವರ್ಷದಲ್ಲಿ ಮತ್ತೆ ನಮಗೆ ಕೆಲಸ ಇರೋದಿಲ್ಲ. ತರಬೇತಿ ಪಡೆದ ನಂತರ ಕೇವಲ ಮೂರು ವರ್ಷದಲ್ಲಿ ದೇಶ ರಕ್ಷಿಸಲು ಸಾಧ್ಯವಾ ? ಆದುದರಿಂದ ಈ ಯೋಜನೆಯನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕೆಂದು ಅವರು ಒತ್ತಾಯಿಸಿದರು.
ನಾಲ್ಕು ವರ್ಷ ಸೇವೆ ಸಲ್ಲಿಸಿದ ನಂತರ ನಾವು ಮನೆಗೆ ಹೋಗಬೇಕಾ? ನಾಲ್ಕು ವರ್ಷ ಕಳೆದ ನಂತರ ಕೆಲಸಕ್ಕಾಗಿ ನಾವು ಎಲ್ಲಿಗೆ ಹೋಗಬೇಕು ಎಂದು ಮತ್ತೋರ್ವ ಪ್ರತಿಭಟನಾಕಾರ ಕೇಳಿದರು. ಆದ್ದರಿಂದ ನಾವು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದರು.
ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿಯೂ ಪ್ರತಿಭಟನೆ ನಡೆಸಲಾಯಿತು. ಜೂನ್ 10 ರಂದು ಹಿಂಸಾಚಾರದ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ನಿಷೇಧಾಜ್ಞೆಯನ್ನು ಮುಂದುವರೆಸಲಾಗಿದೆ.
ಏನಿದು ಅಗ್ನಿಪಥ್ :
ಇದು ಅಲ್ಪಾವಧಿಯ ಸೇನಾ ನೇಮಕಾತಿ ಯೋಜನೆ. ಈ ಯೋಜನೆಯ ಪ್ರಕಾರ ಸೇನೆಯ ಟ್ರೇನಿಂಗ ಪಡೆದು ಮೂರು ವಾರೇಶಗಳ ಕಾಲ ಕೆಲಸ ಮಾಡಬೇಕು. ನಂತರ ಆಯ್ದ ಪ್ರತಿಭಾವಂತರನ್ನು, ಅಲ್ಲಿ ರೆಗ್ಯುಲರ್ ಸೇನೆಗೆ ಸೇರಿಸಿಕೊಳ್ಳಲಾಗುತ್ತದೆ. ಉಳಿದವರನ್ನು ಆದ್ಯತೆಯ ಮೇರೆಗೆ ಇತರ ವಿವಿಧ ಸಂಸ್ಥೆಗಳಲ್ಲಿ ಭರ್ತಿ ಮಾಡಲು ಪ್ರಯತ್ನಿಸಲಾಗುವುದು. ಆದರೆ ಅದು ಖಚಿತವಿಲ್ಲ. ಜತೆಗೆ, ಕಾರ್ಪೊರೇಟ್ ಸಂಸ್ಥೆಗಳಿಗೂ ಅಗ್ನಿಪಥ್ ಟ್ರೇನಿಂಗ ಆಗಿ ಬಂದವರನ್ನು ಸೇರಿಸಲು ಹಲವು ಸಂಸ್ಥೆಗಳೊಂದಿಗೆ ಮಾತುಕತೆ ನಡೆಯುತ್ತಿದೆಯಂತೆ. ಈಗ ಅಗ್ನಿಪಥ್ ಯೋಜನೆಗೆ ದೇಶದ ಕೆಲ ಭಾಗದ ಜನರಲ್ಲಿ ವಿರೋಧ ಎದ್ದಿದೆ.