ಕೋವಿಡ್ ಕೇಸ್ ಹೆಚ್ಚಳ; ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ !! | ಮಾರ್ಗಸೂಚಿಯಲ್ಲೇನಿದೆ ??

ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಮತ್ತೆ ಏರುಗತಿಯಲ್ಲಿ ಸಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿ ಪ್ರಕಟವಾಗಿದೆ.

ಮಾರ್ಗಸೂಚಿಯಲ್ಲೇನಿದೆ ??


Ad Widget

Ad Widget

Ad Widget

Ad Widget

Ad Widget

Ad Widget

*ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇಡಬೇಕು.
*ಹೊರ ದೇಶದಿಂದ ಬರುವವರಿಗೆ ರ‍್ಯಾಂಡಮ್ ಸ್ಕ್ರೀನಿಂಗ್ ಮಾಡಬೇಕು ಮತ್ತು ಆರ್‌ಟಿ-ಪಿಸಿಆರ್‌ ಪರೀಕ್ಷೆ ಕಡ್ಡಾಯವಾಗಿದೆ.
*ಪಾಸಿಟಿವ್ ಆದ ಎಲ್ಲಾ ಸ್ವಾಬ್‌ಗಳನ್ನು ಜಿನೋಮ್‌ ಸೀಕ್ವೆನ್ಸಿಂಗ್‌ಗಾಗಿ ರವಾನೆ ಮಾಡಬೇಕು.
*ಪಾಸಿಟಿವ್ ಆಗಿದ್ರೆ ಅಥವಾ ರಿಪೋರ್ಟ್ ಬರುವವರಿದ್ದರೆ, ಆ ವ್ಯಕ್ತಿಯನ್ನು ಕ್ವಾರಂಟೈನ್ ಮಾಡಬೇಕು. ಕ್ವಾರಂಟೈನ್ ಅವಧಿ ಮುಗಿಯುವವರೆಗೂ ವೈದ್ಯರು ನಿಗಾ ಇಡಬೇಕು.
*ಎಲ್ಲಾ ಐಎಲ್‌ಐ ಸ್ಯಾರಿ ಕೇಸ್‌ಗಳ ಡೇಟಾವನ್ನು ಐಡಿಎಸ್‌ನಲ್ಲಿ ಅಪ್ಲೋಡ್ ಮಾಡಬೇಕು.
*ಆಸ್ಪತ್ರೆಗಳಿಗೆ ಐಎಲ್‌ಐ ಕೇಸ್‌ಗಳು ದಾಖಲಾದರೆ ಆರ್‌ಟಿ-ಪಿಸಿಆರ್ ಟೆಸ್ಟ್ ಮಾಡಬೇಕು.
*ಕ್ಲಸ್ಟರ್‌ಗಳಲ್ಲಿ ಪಾಸಿಟಿವ್ ಬಂದ ಸ್ವಾಬ್‌ಗಳನ್ನು ಕಡ್ಡಾಯವಾಗಿ ಜಿನೋಮ್‌ ಸೀಕ್ವೆನ್ಸಿಂಗ್‌ಗೆ ಕಳಿಸಬೇಕು. *ಬೆಂಗಳೂರು ಮತ್ತು ಇತರೆ ಜಿಲ್ಲೆಗಳಲ್ಲಿ ನಡೆಯುವ ಟೆಸ್ಟಿಂಗ್ ಕೇಂದ್ರಗಳಿಂದ ಆಯ್ದ ಸ್ವಾಬ್‌ಗಳನ್ನು ಜಿನೋಮ್‌ ಸೀಕ್ವೆನ್ಸಿಂಗ್‌ಗೆ ರವಾನೆ ಮಾಡಬೇಕು.
*ಸಮುದಾಯ ಮಟ್ಟದಲ್ಲಿ ಕೇಸ್ ಬ್ರೇಕ್ ಥ್ರೂ ಆಗಿದ್ದರೆ ಅಲ್ಲಿ ಸ್ಯಾಂಪಲ್ ಅನ್ನು ಜಿನೋಮ್‌ ಸೀಕ್ವೆನ್ಸಿಂಗ್‌ಗಾಗಿ ರವಾನೆ ಮಾಡಬೇಕು.
*ಅಂತಾರಾಷ್ಟ್ರೀಯ ಪ್ರಯಾಣಿಕರ ಸ್ಯಾಂಪಲ್ ಅನ್ನು ಕಡ್ಡಾಯವಾಗಿ ಜಿನೋಮ್‌ ಸೀಕ್ವೆನ್ಸಿಂಗ್‌ಗೆ ರವಾನೆ ಮಾಡಬೇಕು.

ಮಕ್ಕಳಿಗೆ ಸೆರೋ ಸರ್ವೇ

ಎಲ್ಲಾ ಜಿಲ್ಲೆಗಳಲ್ಲಿ ಅಧಿಕಾರಿಗಳು ತಂಡ ರಚನೆ ಮಾಡಿಕೊಂಡು ಸೆರೋ ಸರ್ವೆ ಮಾಡಲು ಸೂಚನೆ ನೀಡಲಾಗಿದೆ. 6 ರಿಂದ 14 ವರ್ಷದ ಮಕ್ಕಳಿಗೆ ರೋಗನಿರೋಧಕ ಶಕ್ತಿ ಹೇಗಿದೆ. ಈಗಾಗಲೇ ಕೋವಿಡ್ ಬಂದು ಹೋಗಿದೆಯಾ ಎಂದು ತಿಳಿದುಕೊಳ್ಳಲು ಸೆರೋ ಸರ್ವೆ ಮಾಡಲು ಸರ್ಕಾರ ನಿರ್ಧರಿಸಿದ್ದು, ನಿಗದಿತ ಸಮಯದಲ್ಲಿ ಸೆರೋ ಸರ್ವೆ ಮಾಡಲು ಸೂಚನೆ ನೀಡಿದೆ.

error: Content is protected !!
Scroll to Top
%d bloggers like this: