ಮಂಗಳೂರು : SSLC ವಿದ್ಯಾರ್ಥಿನಿ 5 ನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು ಸಾವು !

ಮಂಗಳೂರು: ಮನೆಯ ಹಾಲ್‌ಗೆ ತಾಗಿಕೊಂಡಿರುವ ಬಾಲ್ಕನಿಯ ಸೈಡ್ ಕರ್ಟನ್‌ಗಳನ್ನು ಸರಿ ಮಾಡುತ್ತಿರುವ ಸಂದರ್ಭದಲ್ಲಿ ಆಯತಪ್ಪಿ ಬಾಲಕಿಯೋರ್ವಳು ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ನಿನ್ನೆ ಮಂಗಳೂರಿನ ಕಂಕನಾಡಿಯಲ್ಲಿ ನಡೆದಿದೆ.

ಸೆಹರ್ ಇಮ್ತಿಯಾಜ್ (15) ಮೃತಪಟ್ಟ ಬಾಲಕಿ. ಸೆಹರ್ ಬಿಜೈ ಖಾಸಗಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾಭ್ಯಾಸ ಮಾಡುತ್ತಿದ್ದಳು.

ಕಂಕನಾಡಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸವಿದ್ದ ಅಬ್ದುಲ್ ಖಾದರ್ ಎಂಬುವವರ ಮಗಳು ಸೆಹರ್ ಇಮ್ತಿಯಾಜ್ ಹಾಲ್‌ಗೆ ತಾಗಿಕೊಂಡಿರುವ ಬಾಲ್ಕನಿಯ ಸೈಡ್ ಕರ್ಟನ್‌ಗಳನ್ನು ಸರಿ ಮಾಡುತ್ತಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಆಯತಪ್ಪಿ ಬಿದ್ದಿದ್ದಾಳೆ. ಬಾಲಕಿ 5ನೇ ಮಹಡಿಯಿಂದ ಕಟ್ಟಡದ ಕೆಳಗೆ ಬಿದ್ದಾಗ, ಪ್ರಜ್ಞಾಹೀನಳಾಗಿದ್ದಾಳೆ. ಕೂಡಲೇ ಆಕೆಯನ್ನು ಮನೆಯವರು ಮತ್ತು ಅಪಾರ್ಟೆಂಟ್ ಜನರು ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು.

ಆದರೆ ಆಕೆ ಸುಮಾರು 50ರಿಂದ 60 ಅಡಿ ಎತ್ತರದಿಂದ ಕೆಳಗೆ ಬಿದ್ದ ಪರಿಣಾಮ ಎಡಕಾಲು ಮುರಿತವಾಗಿದ್ದು ತಲೆಗೆ ಮತ್ತು ಮೈಕೈಗೆ ಒಳಪೆಟ್ಟುಗಳಾಗಿತ್ತು. ಆದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಂಜೆ ಸಾವನ್ನಪ್ಪಿದ್ದಾರೆ.

ಈ ಕುರಿತು ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.