ವಿಟ್ಲ: ಅಕ್ರಮ ಸ್ಫೋಟಕ ದಾಸ್ತಾನಿಗೆ ಪೊಲೀಸರ ದಾಳಿ!! ಸುಮಾರು ಮೌಲ್ಯದ ಸ್ಫೋಟಕ ವಸ್ತು ಪೊಲೀಸರ ವಶಕ್ಕೆ-ಮುಂದುವರಿದ ತನಿಖೆ

ವಿಟ್ಲ: ಪಾಳು ಬಿದ್ದ ಮನೆಯೊಂದರ ಬಳಿಯ ಪೊದೆಯೊಂದರಲ್ಲಿ ಅಕ್ರಮವಾಗಿ ಸ್ಫೋಟಕ ಇರಿಸಿರುವ ಖಚಿತ ಮಾಹಿತಿಯ ಮೇರೆಗೆ ವಿಟ್ಲ ಪೊಲೀಸರು ದಾಳಿ ನಡೆಸಿ ಸುಮಾರು ಆರು ಸಾವಿರ ಮೌಲ್ಯದ ಸ್ಫೋಟಕವನ್ನು ವಶಕ್ಕೆ ತೆಗೆದುಕೊಂಡ ಘಟನೆ ಜೂನ್ 16ರ ಮುಂಜಾನೆ ಠಾಣಾ ವ್ಯಾಪ್ತಿಯ ಪುಣಚ ಗ್ರಾಮದ ಎರ್ಮೆತೊಟ್ಟಿ ಎಂಬಲ್ಲಿ ನಡೆದಿದೆ.

ಎರ್ಮೆತೊಟ್ಟಿ ನಿವಾಸಿ ದೇವಪ್ಪ ನಾಯ್ಕ್ ಎಂಬವರಿಗೆ ಸೇರಿದ ಜಮೀನಿನಲ್ಲಿ ಕಪ್ಪು ಕಲ್ಲು ಕೋರೆಯ ಕಲ್ಲುಗಳನ್ನು ಒಡೆಯುವ ಉದ್ದೇಶದಿಂದ ಕೋರೆಯ ಮಾಲೀಕ ಮಹಮ್ಮದ್ ಕುಂಞ ಮತ್ತು ಅಶೋಕ್ ಎಂಬವರು ದಾಸ್ತಾನು ಇರಿಸಿರುವುದು ಎನ್ನಲಾಗಿದ್ದು,ಸುಮಾರು ಆರು ಸಾವಿರ ಮೌಲ್ಯದ ಅಕ್ರಮ ಸ್ಫೋಟಕಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಕಾರ್ಯಾಚರಣೆಯಲ್ಲಿ ವಿಟ್ಲ ಠಾಣಾ ಎಸ್.ಐ ಸಂದೀಪ್ ಕುಮಾರ್, ಸಿಬ್ಬಂದಿಗಳಾದ ಪ್ರಸನ್ನ, ಜಯಕುಮಾರ್, ಹೇಮರಾಜ್ ಪಾಲ್ಗೊಂಡಿದ್ದರು.

Leave A Reply

Your email address will not be published.