ದೇಶದಲ್ಲಿ 5G ಇಂಟರ್ನೆಟ್ ಸೇವೆ ಆರಂಭ ಯಾವಾಗ ??
ದೇಶ ತಂತ್ರಜ್ಞಾನದ ವಿಷಯದಲ್ಲಿ ತುಂಬಾ ಮುಂದುವರೆದಿದೆ. ದೇಶದಲ್ಲಿ 5ಜಿ ಇಂಟರ್ನೆಟ್ ಸೇವೆ ಶೀಘ್ರದಲ್ಲೇ ಆರಂಭವಾಗಲಿದ್ದು, ಅದರ ಹರಾಜಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಕುರಿತು ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ಇಂದು ಮಾಹಿತಿ ಹೊರಹಾಕಿದ್ದಾರೆ.
ಹೌದು. 5ಜಿ ಹರಾಜಿಗೆ ಅರ್ಜಿ ಸಲ್ಲಿಕೆ ಜುಲೈ 8ರಿಂದ ಆರಂಭವಾಗಲಿದ್ದು, ಜುಲೈ 26ರಿಂದ ಹರಾಜು ಪ್ರಕ್ರಿಯೆ ಆರಂಭವಾಗಲಿದೆ. ಈ ವರ್ಷದ ಅಕ್ಟೋಬರ್ನಿಂದ 5G ಸೇವೆಯನ್ನು ಪ್ರಾರಂಭಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಟೆಲಿಕಾಂ ಸೇವಾ ಪೂರೈಕೆದಾರರಿಗೆ ವ್ಯಾಪಾರ ಮಾಡುವ ವೆಚ್ಚವನ್ನು ಕಡಿಮೆ ಮಾಡಲು IMT/5G ಸ್ಪೆಕ್ಟ್ರಮ್ ಹರಾಜಿಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. 5G ಸೇವೆಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ. 72 GHz ಗಿಂತ ಹೆಚ್ಚಿನ ಸ್ಪೆಕ್ಟ್ರಮ್, 4G ಗಿಂತ ಸುಮಾರು 10 ಪಟ್ಟು ವೇಗವನ್ನು 20 ವರ್ಷಗಳ ಅವಧಿಗೆ ಹರಾಜು ಮಾಡಲಾಗುತ್ತದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಸ್ಪೆಕ್ಟ್ರಮ್ ಹರಾಜಿಗಾಗಿ ದೂರಸಂಪರ್ಕ ಇಲಾಖೆಯ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಇದರ ಅಡಿಯಲ್ಲಿ ಸಾರ್ವಜನಿಕರಿಗೆ ಮತ್ತು ಉದ್ಯಮಗಳಿಗೆ 5G ಸೇವೆಗಳನ್ನು ಒದಗಿಸಲು ಯಶಸ್ವಿ ಬಿಡ್ಡರ್ಗಳಿಗೆ ಸ್ಪೆಕ್ಟ್ರಮ್ ಅನ್ನು ಹಂಚಲಾಗುತ್ತಿದೆ.
ಜುಲೈ ಅಂತ್ಯದ ವೇಳೆಗೆ ಸರ್ಕಾರವು 20 ವರ್ಷಗಳ ಮಾನ್ಯತೆಯೊಂದಿಗೆ ಒಟ್ಟು 72097.85 MHz ತರಂಗಾಂತರವನ್ನು ಹರಾಜು ಮಾಡಲಿದೆ. ಇದಲ್ಲದೆ, ವಿವಿಧ ಕಡಿಮೆ, ಮಧ್ಯಮ ಮತ್ತು ಹೆಚ್ಚಿನ ಆವರ್ತನ ಬ್ಯಾಂಡ್ಗಳಿಗೆ ಸ್ಪೆಕ್ಟ್ರಮ್ ಹರಾಜು ಕೂಡ ನಡೆಯಲಿದೆ.