ಚಿಕ್ಕವಯಸ್ಸಿನಲ್ಲೇ ದೇಶ ಸುತ್ತಿ ಯೂಟ್ಯೂಬ್ ನಲ್ಲಿ ಹೆಸರು ಮಾಡಿದ ಡಾ. ಬ್ರೋ! ಆತ ಯಾರು ಗೊತ್ತೆ ?

ನಮಸ್ಕಾರ​ ದೇವ್ರು.. ಇದನ್ನು ಕೇಳಿದ ಕೂಡಲೇ ನಿಮ್ಮ ತಲೆಯಲ್ಲಿ ಒಬ್ಬನ ಮುಖ ನೆನೆಪಿಗೆ ಬರುತ್ತೆ ಅವನೇ ಯುಟ್ಯೂಬ್ ನಲ್ಲಿ ಡಾ .ಬ್ರೋ ಅಂತಾನೆ ಫೇಮಸ್  ಆಗಿರುವ  ಯುವಕ‌.‌ ಈತ ಚಿಕ್ಕವಯಸ್ಸಿನಲ್ಲೇ ಹಲವಾರು ದೇಶ ಸುತ್ತುತ್ತಿದ್ದಾನೆ ಅಷ್ಟೇ ಅಲ್ಲ ಕನ್ನಡಿಗರಿಗೇ ಅಂಗೈನಲ್ಲೆ ಇಡೀ ಜಗತ್ತನೇ  ತೋರಿಸುತ್ತಾನೆ. 


Ad Widget

Ad Widget

Ad Widget

Ad Widget

Ad Widget

Ad Widget

ಯೂ ಟ್ಯೂಬ್ ನೋಡುವವರಿಗೆ, ಸೋಶಿಯಲ್ ಮೀಡಿಯಾ ಹೆಚ್ಚಾಗಿ ಬಳಸುವವರಿಗೆ ಈ ಡಾ ಬ್ರೋ ಚಿರಪರಿಚಿತ ವ್ಯಕ್ತಿ. ಆತನ ವಿಡಿಯೋ ಈಗ ಎಲ್ಲೇಡೆ ವೈರಲ್ . ಜನ ಆತನ ನಿರೂಪಣಾ ಶೈಲಿ , ಆತ ನೀಡುವ ಮಾಹಿತಿ ಮಾತಿಗೆ ಫಿದಾ ಆಗಿದ್ದಾರೆ.

ಡಾಕ್ಟರ್​ ಬ್ರೋ ಯಾರು? ಎಲ್ಲಿಯವನು? ದೇಶ ವಿದೇಶ ಸುತ್ತಲು ಇವನಿಗೆ ಹಣ ಎಲ್ಲಿಂದ ಬರುತ್ತೆ? ಈತನ ತಿಂಗಳ ಆದಾಯವಾದರೂ ಎಷ್ಟು?  ಗೊತ್ತೆ ?

ಡಾಕ್ಟರ್​​ ಬ್ರೋ ಹೆಸರು ಗಗನ್. ಈತನ ತಂದೆಯ ಹೆಸರು ಶ್ರೀನಿವಾಸ್​. ಇವರು ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಾರೆ. ತಾಯಿಯ ಹೆಸರು ಪದ್ಮಾ. ಲೈಸೆನ್ಸ್ ಇಲ್ಲದೇ ಹೋದರೂ ತನ್ನ ಹದಿನಾರನೆ ವಯಸ್ಸಿಗೆ ‌ಕಾರು ಓಡಿಸಲು ಶುರು ಮಾಡಿದ್ದ. ಭರತನಾಟ್ಯ ಕಲಿತು ಅದರ ಕ್ಲಾಸ್‌ ನಡೆಸಿದ್ದ, ಫೋಟೋಗ್ರಫಿ, ವಿಡಿಯೂ ಗ್ರಫಿ ಕಲಿತ. 2016 ರಲ್ಲಿ ತನ್ನದೇ ಆದ ಯೂ ಟ್ಯೂಬ್‌ ಚಾನೆಲ್ ಶುರು ಮಾಡಿದ್ದ. ಅದುವೇ ಡಿ ಆರ್ ಬ್ರೋ ಅಂದರೆ ಡಾ ಬ್ರೋ.

ಗಗನ್‌ ಒಂದೇ ಒಂದು ರೂಪಾಯಿ ತನ್ನ‌ ಹೆತ್ತವರಿಂದಾಗಲಿ ಇನ್ಯಾರ ಬಳಿಯಿಂದಲೂ ಪಡೆದಿಲ್ಲ. ತಾನೇ ದುಡಿದ ಹಣದಿಂದ ಈ ಸಾಧನೆ ಮಾಡಿದ್ದಾನೆ ಹಾಗು ದೇಶ ವಿದೇಶ ತಿರುಗಿ ಜನರಿಗೆ ವಿಡಿಯೋ ಮೂಲಕ ತೋರಿಸುತ್ತಾನೆ ಗಗನ್.‌

error: Content is protected !!
Scroll to Top
%d bloggers like this: