ಜಾಲಿ ಸೈಕಲ್ ಸವಾರಿ ಎಂಜಾಯ್ ಮಾಡುತ್ತಿದೆ ಈ ಗೊರಿಲ್ಲಾ !! | ಆಯತಪ್ಪಿ ಕೆಳಗೆ ಬಿದ್ದ ಬಳಿಕ ಗೊರಿಲ್ಲಾ ಮಾಡಿದ್ದೇನು ಗೊತ್ತಾ !??

ಗೊರಿಲ್ಲಾ ಹಲವು ವಿಷಯಗಳಲ್ಲಿ ಮನುಷ್ಯನನ್ನು ಅನುಕರಿಸುವ ಪ್ರಾಣಿ ಎಂದೇ ಹೇಳಬಹುದು. ಮನುಷ್ಯರಂತೆ ಕೀಟಲೆ ಮಾಡುವುದನ್ನು ಕೂಡ ನೀವು ನೋಡಿರಬಹುದು. ಆದರೆ, ನೀವು ಎಂದಾದರೂ ಸೈಕಲ್ ಸವಾರಿ ಮಾಡುವ ಗೊರಿಲ್ಲಾ ನೋಡಿದ್ದೀರಾ..? ಹಾಗಾದ್ರೆ ನೀವು ಈ ವೀಡಿಯೋ ನೋಡಲೇಬೇಕು. ಯಾಕಂದ್ರೆ ಸೈಕಲ್ ಸವಾರಿ ಮಾಡೋ ಗೊರಿಲ್ಲಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಧೂಳೆಬ್ಬಿಸುತ್ತಿದೆ.

ಹೌದು. ಈ ವೈರಲ್ ಆದ ವೀಡಿಯೋದಲ್ಲಿ ಗೊರಿಲ್ಲಾ ಮನುಷ್ಯರಂತೆಯೇ ಸೈಕಲ್ ಸವಾರಿ ಮಾಡುತ್ತದೆ. ಈ ವಿಡಿಯೋ ನೋಡಿದ್ರೆ ನೀವು ಸಹ ಆಶ್ಚರ್ಯಪಡುವುದರಲ್ಲಿ ಎರಡು ಮಾತಿಲ್ಲ. ವೈರಲ್ ಆಗಿರುವ ಈ ವೀಡಿಯೋವನ್ನು ಐಎಫ್​ಎಸ್​ ಅಧಿಕಾರಿ ಸಾಮ್ರಾಟ್​ ಗೌಡ ಎಂಬುವರು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆದರೆ ಸೈಕಲ್​​ ಸವಾರಿ ಎಂಜಾಯ್ ಮಾಡುತ್ತಿದ್ದ ಗೊರಿಲ್ಲಾ ಸ್ವಲ್ಪ ಹೊತ್ತಿನಲ್ಲಿ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದಿದೆ.

ಯಾವಾಗ ಗೊರಿಲ್ಲಾ ಕೆಳಗೆ ಬಿತ್ತೋ ಕೂಡಲೇ ತುಂಬಾ ಕೋಪಗೊಂಡಿದೆ. ಕೋಪದಿಂದ ನನಗೆ ಸೈಕಲ್ ಸಹವಾಸವೇ ಬೇಡವೆಂದು ಅದನ್ನು ದೂರ ಎಸೆಯುತ್ತದೆ. ಈ ದೃಶ್ಯ ತುಂಬಾನೇ ಮಜಾ ನೀಡುವಂತಿದೆ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವೀಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಸೈಕಲ್ ಸವಾರಿ ಮಾಡುವ ಗೊರಿಲ್ಲಾ ಕಂಡು ನೆಟಿಜನ್‍ಗಳು ಅಚ್ಚರಿಪಟ್ಟಿದ್ದಾರೆ. ಅಲ್ಲದೆ ಸೈಕಲ್ ಸವಾರಿ ಮಾಡಲು ಹೋಗಿ ಬಿದ್ದಿದ್ದಕ್ಕೆ ಮರುಕ ವ್ಯಕ್ತಪಡಿಸಿದ್ದಾರೆ. ಕೇವಲ 9 ಸೆಕೆಂಡುಗಳಿರುವ ಈ ವೀಡಿಯೋ ನೋಡಿದ್ರೆ ನೀವು ಕೂಡ ಮುಗುಳ್ನಗೆ ಬೀರುತ್ತೀರಿ.

ಗೊರಿಲ್ಲಾ ಸೈಕಲ್​ ಸವಾರಿ ಮಾಡುವ ವೀಡಿಯೋ ವೀಕ್ಷಿಸಿದ ಪ್ರತಿಯೊಬ್ಬರೂ ಫಿದಾ ಆಗಿದ್ದಾರೆ. ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿ ಮನುಷ್ಯನಂತೆಯೇ ಗೊರಿಲ್ಲಾಗಳಿಗೂ ಎಲ್ಲಾ ರೀತಿಯ ಕೌಶಲ್ಯಗಳಿರುತ್ತವೆ. ಇದಕ್ಕೆ ಅಲ್ವಾ ‘ಮಂಗನಿಂದ ಮಾನವ’ ಅನ್ನೋದು ಎಂದೆಲ್ಲಾ ಚರ್ಚಿಸಿದ್ದಾರೆ.

https://twitter.com/IfsSamrat/status/1534384931698364416?s=20&t=89tpRuvr8jhWYuoRupJkGg

Leave A Reply

Your email address will not be published.