ಬ್ರಿಟನ್ ರಾಣಿ ಈಗ ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಕಾಲ ಆಳಿದ ದೊರೆ

ಬ್ರಿಟನ್ ರಾಣಿ ಎಲಿಜೆಬೆತ್ 2 ಥಾಯ್ಲೆಂಡ್‌ನ ರಾಜನನ್ನು ಹಿಂದಿಕ್ಕಿ ಫ್ರಾನ್ಸ್ ಲೂಯಿಸ್ XIV ರ ನಂತರ ಇತಿಹಾಸದಲ್ಲಿ ವಿಶ್ವದ ಎರಡನೇ ಅತಿ ಹೆಚ್ಚು ಕಾಲ ಆಳಿದ ದೊರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

 

ಕಳೆದ ವಾರಾಂತ್ಯದಲ್ಲಿ ನಡೆದ ಭವ್ಯವಾದ ಕಾರ್ಯಕ್ರಮದಲ್ಲಿ ರಾಷ್ಟ್ರಕ್ಕೆ 70 ವರ್ಷಗಳ ಸೇವೆಯನ್ನು ಗುರುತಿಸಲು 96 ವರ್ಷದ ರಾಣಿ 2ನೇ ಎಲಿಜಬೆತ್‌ ಪ್ಲಾಟಿನಂ ಜುಬಿಲಿ ಯನ್ನು ಆಚರಿಸಿತು.

1927 ರಿಂದ 2016ರ ನಡುವಿನ 70ವರ್ಷ 126 ದಿನಗಳ ಕಾಲ ಆಳ್ವಿಕೆ ನಡೆಸಿದ ಥಾಯ್ಲೆಂಡ್‌ನ ದೊರೆ ಭೂಮಿಬೋಲ್ ಅವರನ್ನು ಹಿಂದಿಕ್ಕಿ ಎರಡನೇ ಎಲಿಜಬೆತ್‌ ರಾಣಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.

1953 ರಲ್ಲಿ ಪಟ್ಟಾಭಿಷೇಕವಾದ ನಂತರ ಎರಡನೇ ರಾಣಿ ಎಲಿಜೆಬೆತ್ ಸಪ್ಟೆಂಬರ್ 2015ರಲ್ಲಿ ಮುತ್ತಜ್ಜಿ ರಾಣಿ ವಿಕ್ಟೋರಿಯಾರನ್ನು ಮೀರಿಸಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಬ್ರಿಟಿಷ್ ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರಾಣಿ ಎಲಿಜಬೆತ್ ಪ್ರತಿಸ್ಪರ್ಧಿ ಫ್ರಾನ್ಸ್ ನ ಲೂಯಿಸ್ XIV ಅವರು 1643 ರಿಂದ 1715 ರವರೆಗೆ 72 ವರ್ಷ ಮತ್ತು 110 ದಿನಗಳ ಆಳ್ವಿಕೆ ಯೊಂದಿಗೆ ದೀರ್ಘಾವಧಿಯ ರಾಜನಾಗಿ ಉಳಿದಿದ್ದಾರೆ.

Leave A Reply

Your email address will not be published.