ಹೈದ್ರಾಬಾದ್ ನ ಚಾರ್ಮಿನಾರ್ ಬಳಿ 500 ನೋಟುಗಳ ಸುರಿಮಳೆ ಆಗಿದ್ದೇಕೆ?

ಕೆಲವೊಂದು ಮದುವೆಗಳಲ್ಲಿ ಹುಚ್ಚುತನದ ಪ್ರದರ್ಶನವೂ ಆಗುತ್ತದೆ.ಇಂತಹ ಹುಚ್ಚುತನದ ಪ್ರಕರಣಗಳ ಸಾಲಿಗೆ ಹೈದ್ರಾಬಾದ್ ನಲ್ಲಿ ನಡೆದ ಘಟನೆ ಸೇರಿದೆ.

ಇತ್ತೀಚೆಗೆ ಹೈದ್ರಾಬಾದ್ ನ ಚಾರ್ಮಿನಾರ್ ಬಳಿಯಲ್ಲಿ ಮದುವೆ ಮೆರವಣಿಗೆ ನಡೆದಿದೆ. ಆ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಕಾರನಿಂದ ಇಳಿದು ನೋಟಿನ ಕಂತೆಯಿಂದ 500 ರೂಪಾಯಿಯ ನೋಟುಗಳನ್ನು ತೂರಿದ್ದಾನೆ. ನೋಟನ್ನು ಎತ್ತಿಕೊಳ್ಳಲು ಸಾರ್ವಜನಿಕರು ಮುಗಿಬಿದ್ದಿದ್ದಾರೆ. 

ಮೆರವಣಿಗೆ ಚಾರ್ಮಿನಾರ್ ಸಮೀಪದ ಗುಲ್ಜಾರ್ ಹೌಸ್ ಬಳಿ ಬರುತ್ತಿದ್ದಂತೆಯೇ ಕಾರಿನಿಂದ ಇಳಿದ ವ್ಯಕ್ತಿ ಅಲ್ಲಿದ್ದ ಫೌಂಟೇನ್ ನ ಕಟ್ಟೆಯ ಮೇಲೆ ನಿಂತು 500 ರೂಪಾಯಿ ನೋಟುಗಳನ್ನು ಗಾಳಿಯಲ್ಲಿ ತೂರಿದ್ದಾನೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೊಲೀಸರು, ಸುತ್ತಮುತ್ತಲಿನ ಸಿಸಿ ಟಿವಿ ಕ್ಯಾಮೆರಾಗಳ ವಿಡಿಯೋಗಳನ್ನು ಪರಿಶೀಲಿಸಲಾಗುತ್ತಿದೆ. ಈ ಘಟನೆಗೆ ಕಾರಣರಾದವರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Leave A Reply