ನೀರು ಕುಡಿದು ಬರ್ತೇನೆಂದು ಹೇಳಿದ ವರ ಎಸ್ಕೇಪ್ | ವಧು ಕಂಗಾಲು | ಕೊನೆಗೆ ಮದುವೆಯಾಯಿತೇ ?

ವಧು ತಾಳಿ ಕಟ್ಟುವ ಸಮಯದಲ್ಲಿ ಮದುವೆ ಬೇಡ ಹೇಳೋದು, ಕಿರಿಕ್ ಮಾಡೋ ವರದಿಗಳನ್ನು ನೀವು ಕೇಳಿದ್ದೀರ…ಆದರೆ ಇಲ್ಲೊಬ್ಬ ವರ ತಾಳಿ ಕಟ್ಟೋ ಟೈಮಲ್ಲಿ ಪಿಳ್ಳೆ ನೆವ ಹೇಳಿ ಎಸ್ಕೇಪ್ ಆಗಿದ್ದಾನೆ.

ಹೌದು, ಇನ್ನೇನು ತಾಳಿ ಕಟ್ಟುವ ಸಮಯ ಬಂದಿತ್ತು. ಎಲ್ಲ ತಯಾರಿನೂ ನಡೆದಿತ್ತು. ಅಷ್ಟರಲ್ಲಿಯೇ ವರ ಮಹಾಶಯ ತಾನು ನೀರು ಕುಡಿದು ಬರುವುದಾಗಿ ಹೇಳಿ ಹೋಗಿದ್ದಾನೆ. ಎಷ್ಟು ಹೊತ್ತಾದರೂ ವರ ಬಂದೇ ಇಲ್ಲ. ಆತನಿಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಪತ್ತೆನೇ ಆಗಲಿಲ್ಲ. ಕೊನೆಗೆ ಮದುಮಗಳು ಮದುವೆಯಾಗದೇ ವಾಪಸ್ ಹೋಗಬೇಕಾಯಿತು.


Ad Widget

Ad Widget

Ad Widget

Ad Widget

Ad Widget

Ad Widget

ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಕಾನ್ಪುರದಲ್ಲಿ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಉತ್ತರ ಪ್ರದೇಶದ ಜೋಡಿಗಾಗಿ ಸಾಮೂಹಿಕ ವಿವಾಹ ಸಮಾರಂಭ ಏರ್ಪಾಟು ಮಾಡಿದ್ದರು. 144 ಜೋಡಿಗಳು ಈ ಕಾರ್ಯಕ್ರಮದಲ್ಲಿ ಸಪ್ತಪದಿ ತುಳಿಯಬೇಕಿತ್ತು. ಸಚಿವ ಧರಂ ಪಾಲ್ ಸಿಂಗ್ ಅವರೂ ಕಾರ್ಯಕ್ರಮದಲ್ಲಿ ಹಾಜರು ಇದ್ದರು.

ಈ ಸಂದರ್ಭದಲ್ಲಿ ಒಬ್ಬ ವರ ನಾಪತ್ತೆಯಾಗಿ ಕೋಲಾಹಲ ಸೃಷ್ಟಿಸಿದ್ದಾನೆ. ಕೊನೆಗೆ ತಿಳಿದದ್ದು ಏನೆಂದರೆ, ಈತ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದ. ಬೈಕ್‌ಬೇಕು ಎಂದು ವಧುವಿನ ಕಡೆಯವರಿಗೆ ಹೇಳಿದ್ದ. ಆದರೆ ತಮ್ಮ ಬಳಿ ಅಷ್ಟೊಂದು ಹಣ ಇಲ್ಲದೇ ಇರುವ ಕಾರಣ ಅದನ್ನು ಕೊಡಿಸಲು ಆಗುವುದಿಲ್ಲ ಎಂದು ಅವರು ಹೇಳಿದ್ದರು. ಮದುವೆಯ ದಿನವೂ ಆತ ಬೇಡಿಕೆ ಇಟ್ಟಿದ್ದಾನೆ. ಆದರೆ ಆಗಲೂ ವಧುವಿನ ಪಾಲಕರು ಅಸಹಾಯಕತೆ ವ್ಯಕ್ತಪಡಿಸಿದ್ದರು. ಇದರಿಂದ ಸಿಟ್ಟುಗೊಂಡ ವರ, ಈ ರೀತಿ ಓಡಿಹೋಗಿ ಸೇಡು ತೀರಿಸಿಕೊಂಡಿದ್ದಾನೆ! ಪೊಲೀಸರು ವರನಿಗಾಗಿ ಹುಡುಕಾಟ ನಡೆಸಿದ್ದಾರೆ.

error: Content is protected !!
Scroll to Top
%d bloggers like this: