ಟಾಲಿವುಡ್ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಬಾತ್ ರೂಂನಲ್ಲಿ ಶವವಾಗಿ ಪತ್ತೆ!

ಹೈದರಾಬಾದ್: ಟಾಲಿವುಡ್ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲಾ ನಿನ್ನೆ ಮಧ್ಯಾಹ್ನ ಬಂಜಾರಾ ಹಿಲ್ಸ್‌ನಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

 

35 ವರ್ಷದ ಪ್ರತ್ಯೂಷಾ ಅವರು ಬಂಜಾರ ಹಿಲ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ಫಿಲಂ ನಗರದ ಮನೆಯೊಂದರಲ್ಲಿ ತಂಗಿದ್ದರು. ನಿನ್ನೆ ಮಧ್ಯಾಹ್ನ, ಭದ್ರತಾ ತಪಾಸಣೆ ವೇಳೆ ಅವರು ಪ್ರತಿಕ್ರಿಯಿಸದ ಕಾರಣ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಮನೆಯ ಬಾಗಿಲು ಒಡೆದು ಪೊಲೀಸರು ಒಳ ನುಗ್ಗಿದ್ದಾಗ ಸ್ನಾನದಕೋಣೆಯಲ್ಲಿ ಶವ ಪತ್ತೆಯಾಗಿದೆ.

ಪ್ರತ್ಯುಷಾ ತನ್ನ ಬಾತ್ ರೂಂನಲ್ಲಿ ಕಲ್ಲಿದ್ದಲು ಮತ್ತು ಉಗಿ ಬಳಸಿ ಕಾರ್ಬನ್ ಮಾನಾಕ್ಸೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶಂಕಿಸಲಾಗಿದೆ. ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಯ ಬಗ್ಗೆ ಆಕೆಯ ಕುಟುಂಬ ಮತ್ತು ಸ್ನೇಹಿತರಿಗೆ ಮಾಹಿತಿ ನೀಡಲಾಗಿದೆ.

ಪ್ರತ್ಯೂಷಾ ಖಿನ್ನತೆ ಯಿಂದ ಬಳಲುತ್ತಿದ್ದಳು ಎಂದು ಶಂಕಿಸಲಾಗಿದ್ದು, ವಾಶ್‌ರೂಮ್‌ನಿಂದ ರಾಸಾಯನಿಕಗಳ ಬಾಟಲಿಯನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದು, ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರತ್ಯುಷಾ ಅಮೆರಿಕದಲ್ಲಿ ಫ್ಯಾಷನ್ ಡಿಸೈನಿಂಗ್ ಓದಿದ್ದು, ಹೈದರಾಬಾದ್‌ ನಲ್ಲಿ ವೃತ್ತಿ ಜೀವನ ಆರಂಭಿಸಿದ್ದು, ತನ್ನದೇ ಆದ ಫ್ಯಾಷನ್ ಲೇಬಲ್‌ನ ಸ್ಥಾಪಕರಾಗಿದ್ದರು. ಟಾಲಿವುಡ್‌ ನಲ್ಲಿ ಹಲವಾರು ಜನಪ್ರಿಯ ಸೆಲೆಬ್ರಿಟಿಗಳಿಗೆ ಮತ್ತು ಬಾಲಿವುಡ್‌ ನ ಕೆಲವರಿಗೆ ಫ್ಯಾಷನ್ ಡಿಸೈನ್ ಮಾಡಿದ್ದಾರೆ. ಪ್ರತ್ಯುಷಾ ಅವರ ಕೃತಿಗಳು ಪ್ರತ್ಯುಷಾ ಗರಿಮೆಲ್ಲಾ ಎಂಬ ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗಿವೆ.

Leave A Reply

Your email address will not be published.