ಸಿಗರೇಟ್‌ನ ‘ಪ್ರತಿ ಪಫ್‌ನಲ್ಲಿ ವಿಷವಿದೆ’!!??

0 6

‘ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರ’ ಎಂಬುದನ್ನು ಅರಿವು ಮೂಡಿಸುವ ದೃಷ್ಟಿಯಿಂದ ಎಲ್ಲಾ ಜಾಹಿರಾತುಗಳಿಂದ ಹಿಡಿದು ಎಲ್ಲೆಡೆ ಮಾಹಿತಿ ಹಬ್ಬುತ್ತಲೇ ಬಂದಿದೆ. ಆದರೆ ಸೇವನೆ ಮಾತ್ರ ಕಡಿಮೆ ಆಗುತ್ತಿರುವುದು ದೂರದ ಮಾತಾಗೆ ಉಳಿದಿದೆ. ಸಿಗರೇಟ್ ಗಳಲ್ಲಿ ಕ್ಯಾನ್ಸರ್ ಗೆ ಕಾರಣವಾಗಬಹುದು ಇಂತಹ ಗ್ರಾಫಿಕ್ ಚಿತ್ರ ಅಳವಡಿಸಿದರೂ ಕ್ಯಾರೇ ಅನ್ನದೆ ಯುವ ಜನತೆ ಜೀವವನ್ನು ಲೆಕ್ಕಿಸದೆ ಅಡಿಕ್ಟ್ ಆಗಿದ್ದಾರೆ.

ಇದೀಗ ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರತಿ ಸಿಗರೇಟಿನ ಮೇಲೆ ಆರೋಗ್ಯದ ಎಚ್ಚರಿಕೆಯನ್ನು ಬರೆಯುವುದನ್ನು ಕಡ್ಡಾಯಗೊಳಿಸಿ ವಿಶ್ವದ ಮೊದಲ ರಾಷ್ಟ್ರವೆಂಬ ಹೆಗ್ಗಳಿಕೆಗೆ ಕೆನಡಾ ಸಜ್ಜಾಗಿದೆ.

ಈ ಹಿಂದೆ ತಂಬಾಕು ಉತ್ಪನ್ನಗಳ ಪ್ಯಾಕೇಜಿಂಗ್ ಮೇಲೆ ಎಚ್ಚರಿಕೆಯಾಗಿ ಗ್ರಾಫಿಕ್ ಚಿತ್ರ ಹಾಕುವ ನೀತಿಯನ್ನ ದೇಶದಲ್ಲಿ ಜಾರಿಗೆ ತರಲಾಗಿತ್ತು. ಎರಡು ದಶಕಗಳ ಹಿಂದೆ ಪ್ರಾರಂಭವಾದ ಈ ನೀತಿಯನ್ನ ಪ್ರಪಂಚದಾದ್ಯಂತ ಅಳವಡಿಸಲಾಗಿದೆ. ಇದೀಗ ಮತ್ತೊಂದು ಎಚ್ಚರಿಕೆಯ ಸಂದೇಶ ಬರೆಯುವ ಮೂಲಕ ಮತ್ತೆ ಎಚ್ಚೆತ್ತುಕೊಳ್ಳುವಂತೆ ಮಾಡಲು ತಯಾರಾಗಿದೆ.

2023ರ ಅಂತ್ಯದ ವೇಳೆಗೆ ಈ ನಿಯಮವನ್ನು ಜಾರಿಗೆ ತರಬಹುದು ಎಂದು ಸರ್ಕಾರ ಭಾವಿಸಿದೆ. ಪ್ರತಿ ಸಿಗರೇಟ್‌ನಲ್ಲಿ ‘ಪ್ರತಿ ಪಫ್‌ನಲ್ಲಿ ವಿಷವಿದೆ’ ಎಂಬ ಸಂದೇಶವನ್ನು ಹೊಂದಲು ಪ್ರಸ್ತಾಪಿಸಲಾಗಿದೆ ಎಂದು ಬೆನೆಟ್ ಗಮನಸೆಳೆದರು. ಆದಾಗ್ಯೂ, ಇದನ್ನ ಸಹ ಬದಲಾಯಿಸಬಹುದು.

ಮಾನಸಿಕ ಆರೋಗ್ಯ ಸಚಿವೆ ಕ್ಯಾರೊಲಿನ್ ಬೆನೆಟ್ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಸಂದೇಶಗಳ ಪರಿಣಾಮ ಕಡಿಮೆಯಾಗಿದೆ ಎಂಬ ಆತಂಕವನ್ನು ನಾವು ಪರಿಹರಿಸಬೇಕಾಗಿದೆ. ಪ್ರತಿ ತಂಬಾಕು ಉತ್ಪನ್ನದ ಮೇಲೆ ಆರೋಗ್ಯ ಎಚ್ಚರಿಕೆಯನ್ನು ಬರೆಯುವುದರಿಂದ, ಈ ಪ್ರಮುಖ ಸಂದೇಶವು ಒಂದು ಸಮಯದಲ್ಲಿ ಒಂದು ಸಿಗರೇಟ್ ತೆಗೆದುಕೊಳ್ಳುವ ಮತ್ತು ಪ್ಯಾಕೆಟ್‌ನಲ್ಲಿ ಎಚ್ಚರಿಕೆಯನ್ನ ನೋಡದ ಯುವಕರು ಸೇರಿದಂತೆ ಪ್ರತಿಯೊಬ್ಬರಿಗೂ ತಲುಪುತ್ತದೆ ಎಂದು ಹೇಳಿದ್ದಾರೆ.

Leave A Reply