ಪ್ರಧಾನಿ ನರೇಂದ್ರ ಮೋದಿಯವರ 8 ವರ್ಷಗಳ ಅಭೂತಪೂರ್ವವಾದ ಆಡಳಿತದ ಸಂಭ್ರಮಾಚರಣೆ ಪ್ರಯುಕ್ತ ಯುವ ಮೋರ್ಚಾ ವತಿಯಿಂದ “ವಿಕಾಸ್ ತೀರ್ಥ” ಬೈಕ್ ರಾಲಿ !!

Share the Article

ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ 8 ವರ್ಷಗಳ ಅಭೂತಪೂರ್ವವಾದ ಆಡಳಿತದ ಸಲುವಾಗಿ ಯುವ ಮೋರ್ಚಾ ವತಿಯಿಂದ, ಜಿಲ್ಲೆಯ ಎಲ್ಲಾ ಮಂಡಲಗಳಿಂದ ಬಿ.ಸಿ ರೋಡ್ ವರೆಗೆ “ವಿಕಾಸ್ ತೀರ್ಥ” ಬೈಕ್ ರಾಲಿ ನಡೆಯಿತು.

ಸಾವಯವ ಕೃಷಿಕ,ಕೋಳಿ ಸಾಕಣೆ, ಹೈನುಗಾರಿಕೆ, ಮೀನುಸಾಕಾಣೆ,ಪ್ರಾಣಿ ಪಕ್ಷಿಗಳ ಸಾಕಾಣೆ,ಹಣ್ಣು ಹಂಪಲು ಗೀಡಗಳ ಪೋಷಣೆ, ಕೃಷಿ,ಉದ್ಯಮ ಕ್ಷೇತ್ರದಲ್ಲಿ ಸಾಧನೆಗೈದ ಶ್ರೀಯುತ ದೇವಿಪ್ರಸಾದ್ ಗೌಡ ಕಡಮ್ಮಾಜೆ ಇವರಿಗೆ ಜಿಲ್ಲಾ ಸಾಧಕ ಸನ್ಮಾನ ಕಾರ್ಯಕ್ರಮ ನೆರವೇರಿತು.

ಬಿಜೆಪಿ ರಾಜ್ಯಾಧ್ಯಕ್ಷರು,ಸಂಸದರಾದ ಶ್ರೀಯುತ ನಳೀನ್ ಕುಮಾರ್ ಕಟೀಲ್,ಯುವಮೋರ್ಚಾ ರಾಜ್ಯಾಧ್ಯಕ್ಷರಾದ ಡಾ.ಸಂದೀಪ್ ಕುಮಾರ್, ಜಿಲ್ಲಾಧ್ಯಕ್ಷರಾದ ಸುದರ್ಶನ್ ಮೂಡಬಿದ್ರೆ , ಬಂಟ್ವಾಳ ಶಾಸಕ ರಾಜೇಶ್ ನಾಯಕ್, ಯುವಮೋರ್ಚಾ‌ ಜಿಲ್ಲಾಧ್ಯಕ್ಷರಾದ ಗುರುದತ್ ಕಾಮತ್, ಬೆಳ್ತಂಗಡಿ ಯುವಮೋರ್ಚಾ ಅಧ್ಯಕ್ಷರಾದ ಯಶವಂತ ‌ಗೌಡ ಬೆಳಾಲು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

Leave A Reply

Your email address will not be published.