ಕಬಿನಿ ಶಕ್ತಿಮಾನ್ ಭೋಗೇಶ್ವರ ಇನ್ನು ನೆನಪು ಮಾತ್ರ
ಕಬಿನಿ ಶಕ್ತಿಮಾನ್ ಎಂದೇ ಖ್ಯಾತಿ ಪಡೆದಿದ್ದ ನೀಳ ದಂತದ, ಸುಂದರ ನಡಿಗೆಯ ಭೋಗೇಶ್ವರ ಹೆಸರಿನ ಆನೆ ನಿಧನ ಹೊಂದಿದೆ.
ಗುಂಡ್ರೆ ಅರಣ್ಯ ವ್ಯಾಪ್ತಿಯಲ್ಲಿ ಆನೆಯ ಕಳೆಬರಹ ಪತ್ತೆಯಾಗಿದ್ದು, ಕಬಿನಿ ಹಿನ್ನಿರಿನಲ್ಲಿ ಪ್ರವಾಸಿಗರಿಗೆ ದರ್ಶನ ನಿಡ್ತಿದ್ದ ಭೋಗೇಶ್ವರ ವಯೋಸಹಜ ನಿಧನ ಹೊಂದಿದೆ. 60 ವರ್ಷಕ್ಕೂ ಹೆಚ್ಚು ವಯಸ್ಸಾಗಿದ್ದ ಕಬಿನಿಯ ಹಿರಿಯಣ್ಣ, ಸುಮಾರು 4 ಅಡಿಗೂ ಉದ್ದದ ನೀಳ ದಂತ, ಸುಂದರ ನಡಿಗೆ ಮೂಲಕವೇ ಪ್ರಾಣಿಪ್ರಿಯರ ಮನಗೆದ್ದಿತ್ತು.
ನೀಳ ದಂತ, ಸುಂದರ ನಡಿಗೆಯ ಮೂಲಕ ಕಬಿನಿ ಹಿನ್ನೀರಿನಲ್ಲಿ ಪ್ರವಾಸಿಗರಿಗೆ ದರ್ಶನ ಭಾಗ್ಯ ಕೊಡುತ್ತಿದ್ದ. ‘ಭೋಗೇಶ್ವರ’ ಆನೆ ಎಲ್ಲರ ನೆಚ್ಚಿನ ಆನೆಯಾಗಿತ್ತು ಗುಂಡ್ರೆ ಅರಣ್ಯ ವ್ಯಾಪ್ತಿಯಲ್ಲಿ ಕಳೆಬರ ಪತ್ತೆಯಾಗಿದೆ. ಕಬಿನಿ ಶಕ್ತಿಮಾನ್ ಎಂದೇ ‘ಭೋಗೇಶ್ವರ’ ಖ್ಯಾತಿಗಳಿಸಿದ್ದ.ಅಂದಾಜು 60 ವರ್ಷಕ್ಕೂ ಹೆಚ್ಚು ವಯಸ್ಸಾಗಿದ್ದ ಕಬಿನಿಯ ಹಿರಿಯಣ್ಣನಿಗೆ ಸುಮಾರು 4 ಅಡಿಗೂ ಉದ್ದದ ಸುಂದರವಾದ ನೀಳ ದಂತವಿತ್ತು. ವಯೋಸಹಜವಾಗಿ ಆನೆ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.