ಈ ಕಾರಣಕ್ಕೆ ನಟ ಅಲ್ಲು ಅರ್ಜುನ್ ವಿರುದ್ಧ ಎಫ್ ಐ ಆರ್ ದಾಖಲು

ನಟ ಅಲ್ಲು ಅರ್ಜುನ್ ವಿರುದ್ಧ ಎಫ್‌ಐಆರ್ ಒಂದು ದಾಖಲಾಗಿದೆ. ಅಲ್ಲು ಅರ್ಜುನ್ ನಟಿಸಿದ ಜಾಹೀರಾತೊಂದರ ಕಾರಣವಾಗಿ ಈ ಎಫ್‌ಐಆರ್ ದಾಖಲಾಗಿದೆ. ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ಎಫ್ ಐಆರ್ ದಾಖಲಾಗಿದೆ.

 

ಪ್ರಸಿದ್ಧ ಶಿಕ್ಷಣ ಸಂಸ್ಥೆಯ ಜಾಹೀರಾತಿನಲ್ಲಿ ತಪ್ಪು ಮಾಹಿತಿ ನೀಡಿದ್ದಾರೆಂಬ ಆರೋಪದ ಮೇಲೆ ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್‌ ರವರ ಮೇಲೆ ದೂರು ದಾಖಲಾಗಿದೆ.

ಖ್ಯಾತ ನಟ ಸಲ್ಲು ಅರ್ಜುನ್‌ ರವರು ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯ ಜಾಹೀರಾತಿನಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಹೀಗಾಗಿ ನಟ ಅಲ್ಲು ಅರ್ಜುನ್‌ ಹಾಗೂ ಶಿಕ್ಷಣ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಕೋತಾ ಉಪೇಂದ್ರ ರೆಡ್ಡಿ ಅಂಬರ್‌ ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ. 

ಜಾಹೀರಾತಿನಲ್ಲಿ ನೀಡಲಾಗಿರುವ ಐಐಟಿ ಹಾಗೂ ಎನ್ ಐಟಿಗಳ ಶ್ರೇಯಾಂಕಗಳ ಬಗ್ಗೆ ತಪ್ಪಾಗಿ ಮಾಹಿತಿ ನೀಡಲಾಗಿದೆ. ಇದನ್ನು ಪರಿಶೀಲನೆ ನಡೆಸದೆ ಅಲ್ಲು ಅರ್ಜುನ್ ತಪ್ಪು ಮಾಹಿತಿ ನೀಡಿದ್ದಾರೆ. ಇಂತಹ ಜಾಹೀರಾತು ದಾರಿ ತಪ್ಪಿಸುವ ಹಾಗೂ ಸಮಾಜಕ್ಕೆ ತಪ್ಪು ಮಾಹಿತಿ ನೀಡುತ್ತಿದೆ. ಹೀಗಾಗಿ ಶಿಕ್ಷಣ ಸಂಸ್ಥೆ ಹಾಗೂ ಅಲ್ಲು ಅರ್ಜುನ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋತಾ ಉಪೇಂದ್ರ ರೆಡ್ಡಿ ಆಗ್ರಹಿಸಿದ್ದಾರೆ.

Leave A Reply

Your email address will not be published.