ಮತ್ತೊಂದು ಆತಂಕಕಾರಿ ಭವಿಷ್ಯ ನುಡಿದ ಕೋಡಿಶ್ರೀ | ಈ ಬಾರಿ ಇನ್ನೇನು ಆಗಲಿದೆ? ಇಲ್ಲಿದೆ ಮಾಹಿತಿ

ಕೊರೊನಾ ಇನ್ನು ಒಂದೂವರೆ ವರ್ಷದಲ್ಲಿ ಸಂಪೂರ್ಣ ಮಾಯವಾಗುತ್ತದೆ. ಆದರೆ ಅದು ಬಿಟ್ಟು ಹೋಗೋ ಸಮಯದಲ್ಲಿ ವಿಶೇಷವಾದ ಕಷ್ಟ ಒಂದನ್ನು ಕೊಟ್ಟು ಹೋಗುತ್ತದೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಭವಿಷ್ಯ ಹೇಳಿದ್ದಾರೆ. ಕೊವಿಡ್ ಬಗ್ಗೆ ಭಯ ಪಡುವ ಅವಶ್ಯಕತೆ ಇಲ್ಲ. ಒಂದೂವರೆ ವರ್ಷದಲ್ಲಿ ಸಂಪೂರ್ಣವಾಗಿ ಜಗತ್ತಿನಾದ್ಯಂತ ಕೋವಿಡ್ ಕಣ್ಮರೆಯಾಗುತ್ತದೆ. ಆದರೆ, ಕೊರೊನಾ ಹೋಗುವಾಗ ಜಗತ್ತಿನಾದ್ಯಂತ ಕುಡಿಯುವುದಕ್ಕೆ ನೀರಿಲ್ಲದಂತೆ ಆಗುತ್ತದೆ. ಅಷ್ಟೊಂದು ನೋವನ್ನು ಕೊಡುತ್ತದೆ ಎಂದು ಭಯಾನಕ ಭವಿಷ್ಯ ನುಡಿದಿದ್ದಾರೆ.

ಹೀಗಾಗಿ ಈಗಿನಿಂದಲೇ ಎಲ್ಲರೂ ಎಚ್ಚರ ವಹಿಸಿದರೆ ಅದರಿಂದ ತಪ್ಪಿಕೊಳ್ಳಬಹುದು. ಈಗ ಕೋವಿಡ್ ಗಾಳಿಯ ಮೇಲೆ ಬರಬಹುದು, ಉಸಿರಾಟದ ತೊಂದರೆಯಾಗಿ ಜನ ಬಿದ್ದು ಸಾಯಬಹುದು ಎಂದರು.
ಮಳೆ ಬಗ್ಗೆ ಭವಿಷ್ಯ ನುಡಿದ ಕೋಡಿಹಳ್ಳಿ ಶ್ರೀಗಳು, ಈ ಹಿಂದೆ ಕಂಡಮಂಡಲ ಆಗುತ್ತೆ ಎಂದಿದ್ದೆ. ಮಲೆನಾಡು ಬಯಲಾಗತ್ತೆ ಬಯಲು ಮಲೆನಾಡಾಗತ್ತೆ ಎಂದಿದ್ದೆ. ಈಗ ಎಲ್ಲ ಕಡೆ ನೀರು ಕಂಡಮಂಡಲ ಆಗ್ತಾ ಇದೆ. ಮುಂಗಾರು ಮಳೆ ಇನ್ನೂ ಜಾಸ್ತಿಯಾಗೋ ಲಕ್ಷಣ ಇದೆ. ಈ ಬಾರಿ ಅಕಾಲಿಕ ಮಳೆ ಆಗುವ ಲಕ್ಷಣವೂ ಇದೆ. ದೊಡ್ಡ ದೊಡ್ಡ ನಗರಗಳಿಗೆ ತೊಂದರೆಯಾಗುತ್ತದೆ ಎಂದರು.

ರಾಜಕೀಯ ಅಸ್ಥಿರ, ಗುಂಪುಗಳಾಗ್ತಾವೆ ಅಂದಿದ್ದೆ. ಅದನ್ನು ಈಗ ನೋಡಿದ್ದೀರ. ನಾನು ಭಾರತ ದೇಶದಲ್ಲಿ ಅವಘಡ ಆಗುತ್ತೆ ಎಂದಿದ್ದೆ. ಅದು ಈಗ ಪ್ರಾರಂಭವಾಗಿದೆ. ಪೈಗಂಬರರನ್ನು ಅವಹೇಳನ ಮಾಡಿ, ಜಗತ್ತಿನಾದ್ಯಂತ ಶುರುವಾಗಿದೆ. ಇದರಿಂದ ಮುಂದೆ ಅಪಾಯ ಇದೆ ಎಂದು ಭವಿಷ್ಯ ಹೇಳಿದರು.

Leave A Reply