ಪತ್ನಿಯ ಜೊತೆ ಫೋನ್ ನಲ್ಲಿ ಮಾತನಾಡುತ್ತಿದ್ದಾಗ ಹೃದಯಾಘಾತವಾಗಿ ಬೆಳ್ತಂಗಡಿಯ ವ್ಯಕ್ತಿ ಸಾವು!

Share the Article

ಬೆಳ್ತಂಗಡಿ : ಬಹರೈನ್ ನಲ್ಲಿದ್ದ ಪತಿ ಪತ್ನಿಯ ಜೊತೆ ಫೋನ್ ನಲ್ಲಿ ಮಾತನಾಡುತ್ತಿದ್ದಾಗಲೇ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತರು ಬೆಳ್ತಂಗಡಿ ಮೂಲದ ಇಬ್ರಾಹಿಂ ನಾವೂರು(34).

ಇಬ್ರಾಹಿಂ ನಿನ್ನೆ ರಾತ್ರಿ ಪತ್ನಿಯ ಜೊತೆ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ದಿಡೀರ್ ಹೃದಯಾಘಾತವಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ವೈದ್ಯರು ಪರೀಕ್ಷಿಸಿದಾಗ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದಾರೆ.

ಮೃತ ಇಬ್ರಾಹಿಂ ಒಂದೂವರೆ ವರ್ಷದ ಹಿಂದೆ ಸುನ್ನತ್ ಕೆರೆಯ ಯುವತಿಯ ಜೊತೆ ವಿವಾಹವಾಗಿದ್ದು, ದಂಪತಿಗಳಿಗೆ ಒಂದು ಪುಟ್ಟ ಮಗು ಇದೆ ಎಂದು ತಿಳಿದು ಬಂದಿದೆ.

Leave A Reply