ನೂಪುರ್ ಶರ್ಮಾ ಪ್ರತಿಕೃತಿ ನೇತು ಹಾಕಿ ಗಲ್ಲಿಗೇರಿಸಿ ಪ್ರತಿಭಟನೆ

ಬೆಳಗಾವಿ: ಪ್ರವಾದಿ ಮಹಮ್ಮದ ಪೈಗಂಬರ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರ ಪ್ರತಿಕೃತಿಯನ್ನು, ಕೆಲವರು ನಡುರಸ್ತೆಯಲ್ಲಿ ಗಲ್ಲಿಗೇರಿಸಿರಿದ ರೀತಿಯಲ್ಲಿ ನೇತುಹಾಕಿ ಪ್ರತಿಭಟಿಸಿದರು. ಇದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು.

 

ನೂಪುರ್ ಶರ್ಮಾ ಅವರ ಭಾವಚಿತ್ರದ ಸಮೇತ ಅವರ ಪ್ರತಿಕೃತಿಯನ್ನು ನಗರದ ಫೋರ್ಟ್ ರಸ್ತೆಯಲ್ಲಿ ಹಗ್ಗ ಕಟ್ಟಿ, ಗುರುವಾರ ತಡರಾತ್ರಿ ನೇತುಹಾಕಿದ್ದರು.

ಶುಕ್ರವಾರ ಬೆಳಿಗ್ಗೆ ಇದನ್ನು ಕಂಡು ಹಿಂದೂ ಜಾಗರಣ, ಶ್ರೀರಾಮ ಸೇನೆ, ಕೆಲ ಪಾಲಿಕೆ ಸದಸ್ಯರು ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿ ಹೆಚ್ಚು ಜನ ಜಮಾಯಿಸಿದ್ದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು.

ಪೊಲೀಸರು ಈ ಪ್ರತಿಕೃತಿಯನ್ನು ತಕ್ಷಣ ತೆರವುಗೊಳಿಸಬೇಕು.‌ ಇಲ್ಲದಿದ್ದರೆ ನಾವೇ ಅದನ್ನು ತೆರವು ಮಾಡಬೇಕಾಗುತ್ತದೆ. ಹೊಸ ವಿವಾದಕ್ಕೆ ಅವಕಾಶ ಕೊಡಬಾರದು ಎಂದು ಕೆಲ ಮುಖಂಡರು ಆಗ್ರಹಿಸಿದರು.

ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರತಿಕೃತಿ ತೆರವು ಮಾಡಿದರು.

Leave A Reply

Your email address will not be published.