ರಾಜ್ಯ ರಾಜಧಾನಿಯಲ್ಲಿ ಮತ್ತೊಮ್ಮೆ ಮಹಿಳೆ ಮೇಲೆ ಆ್ಯಸಿಡ್ ದಾಳಿ | ಮುಸ್ಲಿಂ ವ್ಯಕ್ತಿಯಿಂದ ವಿಕೃತ ಕೃತ್ಯ !!!

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಆ್ಯಸಿಡ್ ದಾಳಿ ನಡೆದಿದ್ದು ಅದರ ಪ್ರಕರಣವೇ ತನಿಖಾ ಹಂತದಲ್ಲಿರುವಾಗ ಈಗ ಇನ್ನೊಂದು ಆ್ಯಸಿಡ್ ದಾಳಿ ನಡೆದಿದೆ. ಇಂದು (ಜೂನ್ 10) ಮತ್ತೆ ಮಹಿಳೆಯೊಬ್ಬರ ಮೇಲೆ ಆ್ಯಸಿಡ್ ದಾಳಿ ನಡೆದಿದೆ.

ಬೆಂಗಳೂರಿನ ಸಾರಕ್ಕಿ ಬಳಿ ಈ ಘಟನೆ ನಡೆದಿದ್ದು, ಪರಿಚಯಸ್ಥನಿಂದಲೇ ಈ ಕೃತ್ಯ ನಡೆದಿದೆ. ಸದ್ಯ ಘಟನಾ ಸ್ಥಳಕ್ಕೆ ಎಸಿಪಿ ಶಿವಕುಮಾರ್, ಡಿಸಿಪಿ ಹರೀಶ್ ಪಾಂಡೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕುಮಾರಸ್ವಾಮಿ ಲೇಔಟ್ ಠಾಣೇ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

ಅಹ್ಮದ್ ಎಂಬಾತ ಆ್ಯಸಿಡ್ ದಾಳಿ ನಡೆಸಿರುವ ಆರೋಪಿ. ಈತ ವಿವಾಹಿತ ಮಹಿಳೆಯನ್ನ ಪ್ರೀತಿಸುತ್ತಿದ್ದ. ತನ್ನನ್ನು ಮದುವೆಯಾಗುವಂತೆ ದುಂಬಾಲು ಬಿದ್ದಿದ್ದ. ಈ ವೇಳೆ ಮದುವೆಯಾಗಲು ಒಪ್ಪದಿದ್ದಾಗ ಮಹಿಳೆ ಮೇಲೆ ಆ್ಯಸಿಡ್ ದಾಳಿ ಮಾಡಿದ್ದಾನೆ. ಈ ದಾಳಿಯಿಂದ ಮಹಿಳೆ ಬಲಗಣ್ಣಿಗೆ ಗಂಭೀರ ಗಾಯವಾಗಿದ್ದು, ಗಾಯಾಳು ಮಹಿಳೆಯನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ದಾಳಿಗೆ ಒಳಗಾದ ಮಹಿಳೆಗೆ ಮದುವೆ ಆಗಿ ಮಗು ಇದೆ. ಹೀಗಿದ್ದರೂ ಅರೋಪಿ ಮಹಿಳೆಯ ಪ್ರೀತಿಸುತ್ತಿದ್ದ. ಜೊತೆಗೆ ಮದುವೆ ಆಗುವಂತೆ ಪೀಡಿಸುತ್ತಿದ್ದ. ಆರೋಪಿ ಮತ್ತು ನೊಂದ ಮಹಿಳೆ ಇಬ್ಬರೂ ಅಗರಬತ್ತಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಗೋರಿಪಾಳ್ಯದ ನಿವಾಸಿಯಾಗಿರುವ ಆರೋಪಿ ಅಹ್ಮದ್, ಮಹಿಳೆ ಕೆಎಸ್ ಲೇಔಟ್‌ನಿಂದ ಜೆಪಿ ನಗರ ಕಡೆಗೆ ತೆರಳುತಿದ್ದಾಗ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

error: Content is protected !!
Scroll to Top
%d bloggers like this: