ಪಾಗಲ್ ಪ್ರೇಮಿಯಿಂದ ಪ್ರೀತಿಸಲು ನಿರಾಕರಿಸಿದ ವಿದ್ಯಾರ್ಥಿನಿ ಮೇಲೆ ಡೆಡ್ಲಿ ಅಟ್ಯಾಕ್ !!!

ಪ್ರೀತಿಸಲು ನಿರಾಕರಿಸಿದ ಹುಡುಗಿಯ ಮೇಲೆ ಪಾಗಲ್ ಪ್ರೇಮಿಯೋರ್ವ ಮಾರಣಾಂತಿಕವಾಗಿ ಹಲ್ಲೆ ಮಾಡಿರುವಂತಹ ಘಟನೆಯೊಂದು ಮೆಡಿಕಲ್ ಕಾಲೇಜು ಆವರಣದಲ್ಲಿ ನಡೆದಿದೆ.

 

ಈ ಘಟನೆ ಮಂಡ್ಯದಲ್ಲಿ ನಡೆದಿದೆ.

ಗುರುವಾರ ಬೆಳಗ್ಗೆ ಕಾಲೇಜು ಬಿಡುವರೆಗೂ ಹೊಂಚು ಹಾಕಿ ಕುಳಿತಿದ್ದು, ವಿದ್ಯಾರ್ಥಿನಿ ಹೊರಬರುತ್ತಿದ್ದಂತೆ ಹಲ್ಲೆ ಮಾಡಿದ್ದಾನೆ. ವೈ.ಯರಹಳ್ಳಿ ಗ್ರಾಮದ ನವ್ಯಾ (20) ಹಲ್ಲೆಗೊಳಗಾದ ವಿದ್ಯಾರ್ಥಿನಿ.

ಪ್ಯಾರಾ ಮೆಡಿಕಲ್ ಓದುತ್ತಿದ್ದ ನವ್ಯ ಮೇಲೆ ಸಂಪತ್ ಕುಮಾರ್ ಹಲ್ಲೆ ನಡೆಸಿದ್ದಾನೆ. ಒಂದೇ ಗ್ರಾಮದ ನವ್ಯಾ, ಸಂಪತ್ ಕುಮಾರ್ 2 ವರ್ಷದಿಂದ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಯ ವಿಚಾರ ತಿಳಿದಾಗ ಪ್ರೀತಿ ಪ್ರೇಮ ಬಿಟ್ಟು ಓದಿನ ಕಡೆ ಗಮನ ನೀಡುವಂತೆ ನವ್ಯ ತಂದೆ ಪರಮೇಶ್ ಬೈದು ಬುದ್ಧಿ ಮಾತು ಹೇಳಿದ್ದರು. ಬಳಿಕ ಆಕೆ ಸಂಪತ್ ಕುಮಾರ್ ಜೊತೆ ಮಾತಾಡುವುದನ್ನು ಬಿಟ್ಟಿದ್ದಾಳೆ. ಆದರೆ ಸಂಪತ್ ಪ್ರೀತುಸುವಂತೆ ಕಾಟ ಕೊಡುತ್ತಿದ್ದ ಎನ್ನಲಾಗಿದೆ. ಮೊನ್ನೆ ಸ್ನೇಹಿತರ ಜೊತೆ ಬರ್ತಡೇ ಆಚರಿಸಿಕೊಂಡಿದ್ದ ವಿದ್ಯಾರ್ಥಿನಿ ನವ್ಯ ತನ್ನ ಜತೆ ಬಾರದೆ ಸ್ನೇಹಿತರ ಜತೆ ಬರ್ತಡೇ ಮಾಡಿಕೊಂಡಿದ್ದಕ್ಕೆ ನವ್ಯಾ ಮನೆಗೆ ಹೋಗಿ ಗಲಾಟೆ ಮಾಡಿದ್ದಾನೆ.

ಇಬ್ಬರು ಜತೆಯಲ್ಲಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವ ಬೆದರಿಕೆ ಹಾಕಿದ್ದು, ಆಗಲೂ ನವ್ಯ ತಂದೆ ಬೈದು ಬುದ್ಧಿ ಮಾತು ಹೇಳಿ ಕಳುಹಿಸಿದ್ದರು. ಕಾಲೇಜು ಬಳಿಯೇ ಹೊಂಚ ಹಾಕಿದ್ದ ಸಂಪತ್, ಹಲ್ಲೆ ನಡೆಸುವುದಕ್ಕಾಗಿ ನಂಬರ್ ಪ್ಲೇಟ್ ಇಲ್ಲದ ಸ್ಕೂಟರ್‌ನಲ್ಲಿ ಬಂದಿದ್ದ. ಸಂಜೆ ಕಾಲೇಜಿನಿಂದ ಹೊರಗೆ ಬರುತ್ತಿದ್ದಂತೆ ಏಕಾಏಕಿ ನವ್ಯ ಮೇಲೆ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ನವ್ಯಾಳನ್ನ ಸ್ನೇಹಿತೆ ಆಸ್ಪತ್ರೆಗೆ ದಾಖಲು ಮಾಡಿದ್ದಾಳೆ. ಇತ್ತ ಹಲ್ಲೆ ನಡೆಸಿದ ಸಂಪತ್ ಸಾರ್ವಜನಿಕರಿಂದ ಹಿಗ್ಗಾಮುಗ್ಗ ಥಳಿಸಲಾಗಿದೆ. ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಲಾಗಿದೆ. ಮಂಡ್ಯದ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

Leave A Reply

Your email address will not be published.