ಮೇಕೆಯನ್ನು ಹುಡುಗ ಮದುವೆಯಾದದ್ದು ಯಾಕೆ ? | ಕಾರಣ ತಿಳಿದು ಅಸಹ್ಯಗೊಂಡ ಜನತೆ

 

ಹೆಣ್ಣು ಮೇಕೆಯೊಂದಿಗೆ ವ್ಯಕ್ತಿಯೊಬ್ಬರು ಮದುವೆಯಾದ ಘಟನೆಯೊಂದು ಇಂಡೋನೇಷ್ಯಾದಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

44 ವರ್ಷದ ಸೈಫುಲ್ ಆರಿಫ್ ಎಂಬ ಇಂಡೋನೇಷ್ಯಾದ ವ್ಯಕ್ತಿ ಜೂನ್ 5 ರಂದು ಗ್ರೆಸಿಕ್‌ನ ಬೆಂಜೆಂಗ್ ಜಿಲ್ಲೆಯ ಕ್ಲಾಂಪೋಕ್ ಗ್ರಾಮದಲ್ಲಿ ರಹಾಯು ಬಿನ್ ಬೆಜೊ ಎಂಬ ಮೇಕೆಯನ್ನು ಮದುವೆಯಾಗಿದ್ದಾನೆ.

ವಿಚಿತ್ರ ಮದುವೆಯ ವಿಡಿಯೋ ಸಾರ್ವಜನಿಕ ಟೀಕೆಗೆ ಕಾರಣವಾಗಿದೆ. ವೀಡಿಯೋದಲ್ಲಿ ನೋಡುವಂತೆ, ವಧು(ಮೇಕೆ) ಶಾಲು ಹೊದ್ದುಕೊಂಡಿರುವುದನ್ನು ಕಾಣಬಹುದು. ಸಾಂಪ್ರದಾಯಿಕ ಜಾವಾನೀಸ್ ವೇಷಭೂಷಣಗಳನ್ನು ಧರಿಸಿದ ಸ್ಥಳೀಯರ ಗುಂಪು ವಿವಾಹ ಸಮಾರಂಭದಲ್ಲಿ ಭಾಗವಹಿಸಿದೆ. 

ವೈರಲ್ ಮಾಡುವ ಉದ್ದೇಶದಿಂದ ಸಾಮಾಜಿಕ ಮಾಧ್ಯಮದ ವಿಷಯಕ್ಕಾಗಿ ನಿರ್ಮಿಸಲಾಗಿದೆ. ವಿಡಿಯೋವನ್ನು ಪ್ರೇಕ್ಷಕರಿಗೆ ಮನರಂಜನೆ ನೀಡುವ ಉದ್ದೇಶದಿಂದ ರಚಿಸಲಾಗಿದೆ” ಎಂದು ಸೈಫುಲ್ ಹೇಳಿದ್ದಾರೆ.

ಮನರಂಜನೆಯ ವಿಡಿಯೋಗೆ ಟೀಕೆಗಳು ಕೂಡ ವ್ಯಕ್ತವಾಗಿದೆ. ಅಸಹ್ಯಕರ ವಿಷಯ, ಹಣವನ್ನು ಗಳಿಸಬಹುದು, ಆದರೆ ಸಾರ್ವಜನಿಕರಿಗೆ ಸಮಸ್ಯೆಯನ್ನು ಸೃಷ್ಟಿಸುತ್ತದೆ” ಎಂದಿದ್ದಾರೆ.

Leave A Reply

Your email address will not be published.