ನಡೆದೇ ಹೋಯಿತು ಕ್ಷಮಾ ಬಿಂದು “ಸ್ವಯಂ ವಿವಾಹ”| ಹನಿಮೂನ್ ಗೋವಾದಲ್ಲಿ!!!

ಇತ್ತೀಚೆಗೆ ಭಾರೀ ಸುದ್ದಿಯಲ್ಲಿದ್ದ ವಿಷಯ ಏನೆಂದರೆ “ಸ್ವಯಂ ವಿವಾಹ” ಮಾಡಿಕೊಳ್ಳಲು ಹೊರಟ ವಡೋದರದ ಯುವತಿ ಕ್ಷಮಾ ಬಿಂದುವಿನದ್ದು. ಈಗ ಕ್ಷಮಾ ಬಿಂದು ಮದುವೆ ಸಂಪನ್ನವಾಗಿದೆ. ಹೌದು ವಡೋದರಾದ ಯುವತಿ ಕ್ಷಮಾ ಬಿಂದು ತನ್ನನ್ನು ತಾನೇ ವಿವಾಹವಾಗಿದ್ದಾಳೆ. ಇದು ಭಾರತದ ಪ್ರಥಮ ಸ್ವಯಂ ವಿವಾಹ ಪ್ರಕರಣವಾಗಿದೆ. ಅನಗತ್ಯ ವಿವಾದಗಳನ್ನು ತಪ್ಪಿಸಲು ಈ ಯುವತಿ ಹೇಳಿದ ದಿನಾಂಕಕ್ಕಿಂತ ಮೊದಲೇ ವಿವಾಹವಾಗಿದ್ದಾಳೆ. ಈ ಮೊದಲು ಜೂನ್ 11ರಂದು ಮದುವೆಯಾಗಲು ನಿಶ್ಚಯಿಸಿದ್ದಳು.


Ad Widget

Ad Widget

ಬಿಜೆಪಿ ನಾಯಕಿಯೊಬ್ಬರು ಆಕೆಯ ಮದುವೆಯನ್ನು ವಿರೋಧಿಸಿದ ನಂತರ ಮತ್ತು ದೇವಸ್ಥಾನದಲ್ಲಿ ಮದುವೆಯಾಗಲು ಅನುಮತಿಸುವುದಿಲ್ಲ ಎಂದು ಹೇಳಿದ ಕಾರಣದಿಂದ ನಂತರ ಈ ಬೆಳವಣಿಗೆಗಳು ನಡೆದಿದೆ.


Ad Widget

ವಿವಾಹದ ನಂತರ ವೀಡಿಯೊದಲ್ಲಿ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾಳೆ. ಎಲ್ಲರ ಬೆಂಬಲ ಮತ್ತು ಪ್ರೋತ್ಸಾಹಕ್ಕೆ ಕೃತಜ್ಞಳಾಗಿರುತ್ತೇನೆ ಎಂದು ಹೇಳಿದ್ದಾಳೆ. ಜೊತೆಗೆ “ನನಗೆ ಸಂದೇಶ ಕಳುಹಿಸಿದ ಮತ್ತು ನನ್ನನ್ನು ಅಭಿನಂದಿಸಿದ ಮತ್ತು ನಾನು ನಂಬಿದ್ದಕ್ಕಾಗಿ ಹೋರಾಡುವ ಶಕ್ತಿಯನ್ನು ನೀಡಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ” ಎಂದು ಫೇಸ್ ಬುಕ್ ನಲ್ಲಿ ಮನತುಂಬಿ ಹೇಳಿದ್ದಾಳೆ.

ಕ್ಷಮಾ ಬಿಂದು ಹಿಂದೂ ಸಂಪ್ರದಾಯಗಳನ್ನು ಎಲ್ಲಾ ಪಾಲಿಸಿದ್ದಾಳೆ. ಹಳದಿ ಕಾರ್ಯಕ್ರಮ, ಮೆಹಂದಿ ಕಾರ್ಯಕ್ರಮ ಎಲ್ಲಾ ನಡೆದಿದೆ. ಈಗ ವಿವಾಹದ ಬಳಿಕ ಹನಿಮೂನ್ ಗೆ ಎರಡು ವಾರಗಳ ಕಾಲ ಗೋವಾಗೆ ಹೋಗುವುದಾಗಿ ಕ್ಷಮಾ ಬಿಂದು ಹೇಳಿದ್ದಾಳೆ.

Ad Widget

Ad Widget

Ad Widget
error: Content is protected !!
Scroll to Top
%d bloggers like this: