ಭಾರಿ ಗಾಳಿ ಅಪಾರಹಾನಿಗೊಳಗಾದ ಸೀತಾರಾಮತಾಂಡ.
ವಿಜಯನಗರ
ಹೊಸಪೇಟೆ ಜೂ8: ಮಂಗಳವಾರ ರಾತ್ರಿ ಭಾರಿಗಾಳಿ ಬೀಸಿದ ಪರಿಣಾಮ ಹೊಸಪೇಟೆ ತಾಲೂಕು ಸೀತಾರಾಮತಾಂಡದಲ್ಲಿ ಅಪಾರಹಾನಿಗೊಳಗಾದ ಘಟನೆ ಜರುಗಿದೆ.
ಗ್ರಾಮದಾದ್ಯಂತ ಅನೇಕ ವಿದ್ಯುತ್ ಕಂಬಗಳು, ಗೀಡಮರ ಮುರಿದು ಬಿದ್ದ ಪರಿಣಾಮ ಅಪಾರಹಾನಿಯಾಗಿರುವ ಘಟನೆ ಜರುಗಿದೆ.
ಮುರಿದು ಬಿದ್ದ ವಿದ್ಯುತ್ ಕಂಬಗಳು ರಭಸಕ್ಕೆ
ವಿದ್ಯುತ್ ಟ್ರಾನ್ಸಫಾರ್ಮರ್ ಬ್ಲಾಸ್ಟ್ ಆಗಿದ್ದು ಯಾವುದೆ ಹಾನಿ ನಡೆದಿಲ್ಲಾ ಶಾಲೆಯ ಹೊರಭಾಗದ ಶೇಡ್ ನ ಶೀಟ್ ಗಳು ಸಂಪೂರ್ಣ ನೆಲಕಚ್ಚಿದ್ದು ರಾತ್ರಿ ವೇಳೆ ಘಟನೆಯಾಗಿರುವುದು, ಜನ ಸಂಚಾರವಿಲ್ಲದಿರುವುದು, ಪ್ರಾಣ ಹಾನಿಯಾಗದಿರಲು ಕಾರಣವಾಗಿದೆ.
ನಿನ್ನೆ ರಾತ್ರಿ ಬೀಸಿದ ಭಾರಿ ಗಾಳಿಗೆ 6 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು, 1 ವಿದ್ಯುತ್ ಟ್ರಾನ್ಸಫಾರ್ಮರ್ ಬ್ಲಾಸ್ಟ್ ಸೇರಿದಂತೆ ಮರಗಳು ನೆಲಕ್ಕೂರುಳಿವೆ.
ಸಚಿವರ ಭೇಟಿ:
ಬೆಳಿಗ್ಗೆ ಗ್ರಾಮಸ್ಥರು ಸಚಿವ ಆನಂದಸಿಂಗ್ ರನ್ನು ಭೇಟಿ ಮಾಡಿ ಘಟನೆಯ ವಿವರವನ್ನು ತಿಳಿಸಿದ್ದು ತಕ್ಷಣವೇ ಸ್ಪಂದಿಸಿದ ಸಚಿವರು ಜೆಸ್ಕಾಂ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ತಕ್ಷಣವೇ ಸ್ಪಂದಿಸುವಂತೆ ಸೂಚಿಸಿದರು. ಕಾರ್ಯಪ್ರವೃತರಾಗಿರುವ ಅಧಿಕಾರಿಗಳು ದುರಸ್ಥಿಕಾರ್ಯಕ್ಕೆ ಮುಂದಾಗಿದ್ದಾರೆ.