ಪ್ರವಾದಿ ಮೊಹಮ್ಮದ್ ಕುರಿತು ನೂಪುರ್ ಶರ್ಮಾ ಹೇಳಿಕೆ ಪ್ರಕರಣ | ನೂಪುರ್ ಸತ್ಯವನ್ನೇ ಹೇಳಿದ್ದಾರೆಂದು ಬೆಂಬಲಕ್ಕೆ ನಿಂತ ಸಂಸದ !!

ಪ್ರವಾದಿ ಮೊಹಮ್ಮದ್‌ ಕುರಿತ ಹೇಳಿಕೆ ವಿವಾದ ಇದೀಗ ವಿಶ್ವಮಟ್ಟದಲ್ಲಿ ಚರ್ಚೆಯಾಗುತ್ತಿದೆ. ತನ್ನ ವಿವಾದಾತ್ಮಕ ಹೇಳಿಕೆಯಿಂದ ಅಮಾನತ್ತಾಗಿರುವ ನೂಪುರ್ ಶರ್ಮಾ ಬೆಂಬಲಕ್ಕೆ ನೆದರ್‌ಲ್ಯಾಂಡ್‌ ಸಂಸದರೊಬ್ಬರು ನಿಂತಿದ್ದಾರೆ. ಅಲ್ಲದೆ ನೂಪುರ್ ಶರ್ಮಾರನ್ನು ಬೆಂಬಲಿಸಲು ಭಾರತಕ್ಕೆ ಒತ್ತಾಯ ಕೂಡ ಮಾಡಿದ್ದಾರೆ.

ನೆದರ್‌ಲ್ಯಾಂಡ್‌ನ ರಾಜಕಾರಣಿಯಾಗಿರುವ ಗೀರ್ಟ್‌ ವೈಲ್ಡರ್ಸ್‌ ವಿವಾದ ಮಧ್ಯೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದಲ್ಲದೆ ಭಯೋತ್ಪಾದಕ ಸಂಘಟನೆ ಅಲ್‌ಖೈದಾ ವಿರುದ್ಧ ಕಿಡಿಕಾರಿದ್ದು, ಅದರ ಬೆದರಿಕೆಗಳಿಗೆ ಬಗ್ಗಬಾರದು ಎಂದು ಭಾರತಕ್ಕೆ ಕರೆ ನೀಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ವಕ್ತಾರೆ ಆಗಿದ್ದ ನೂಪುರ್ ಶರ್ಮಾ ವಿವಾದಕ್ಕೆ ಸಂಬಂಧಿಸಿದಂತೆ ಟ್ವೀಟ್‌ ಮಾಡಿರುವ ಗೀರ್ಟ್‌ ವೈಲ್ಡರ್ಸ್‌, “ನೂಪುರ್ ಶರ್ಮಾ ಅವರು ಸತ್ಯವನ್ನೇ ಮಾತನಾಡಿದ್ದಾರೆ. ಅವರಿಗೆ ಭಯೋತ್ಪಾದಕ ಸಂಘಟನೆ ಅಲ್‌ಖೈದಾದಿಂದ ಬೆದರಿಕೆ ಕರೆಗಳು ಬಂದಿದೆ. ಈ ಅಲ್‌ಖೈದಾ ಸಂಘಟನೆ ಯಾವಾಗಲೂ ಎಂದಿಗೂ ಭಯೋತ್ಪಾದನೆ, ಅನಾಗರಿಕತೆಯನ್ನು ಹೇಳುತ್ತಾರೆ. ಆದ್ದರಿಂದ ಶರ್ಮಾ ಅವರನ್ನು ಬೆಂಬಲಿಸಿ” ಎಂದು ಅವರು ಹೇಳಿದ್ದಾರೆ.

ಗೀರ್ಟ್ ವೈಲ್ಡರ್ಸ್ ಅವರು ಟ್ವಿಟ್ಟರ್‌ನಲ್ಲಿ “ಅಲ್ ಖೈದಾದಂತಹ ಇಸ್ಲಾಮಿಕ್ ಭಯೋತ್ಪಾದಕರಿಗೆ ಎಂದಿಗೂ ಶರಣಾಗಬೇಡಿ. ಅವರು ಅನಾಗರಿಕತೆಯನ್ನೇ ಮೆರೆಯುತ್ತಾರೆ. ಇಡೀ ಭಾರತ ದೇಶವು ನೂಪುರ್ ಶರ್ಮಾ ಅವರನ್ನು ಬೆಂಬಲಿಸಬೇಕು. ಅಲ್ ಖೈದಾ ಮತ್ತು ತಾಲಿಬಾನ್ ನನ್ನನ್ನು ವರ್ಷಗಳ ಹಿಂದೆ ತಮ್ಮ ಹಂತಕರ ಪಟ್ಟಿಯಲ್ಲಿ ಸೇರಿಸಿದ್ದರು. ಆದರೆ ನಾನು ಎಂದಿಗೂ ತಲೆಬಾಗಿಲ್ಲ” ಎಂದಿದ್ದಾರೆ.

ಸತ್ಯವನ್ನು ಮಾತನಾಡಿದ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ್ದಕ್ಕಾಗಿ ನನ್ನನ್ನು ಕೊಲ್ಲಲು ಬಯಸುವ ಮುಸ್ಲಿಮರಿಂದ ನನಗೆ ಈಗಾಗಲೇ ಅನೇಕ ಕೊಲೆ ಬೆದರಿಕೆಗಳು ಬಂದಿವೆ. ಆದರೆ ಶರ್ಮಾ ಅವರು ಮೊಹಮ್ಮದ್‌ ಪೈಗಂಬರ್‌ ಬಗ್ಗೆ ಸತ್ಯವನ್ನೇ ಮಾತನಾಡಿದ್ದಾರೆ ಎಂದು ವೈಲ್ಡರ್ಸ್ ತಿಳಿಸಿದ್ದಾರೆ.

Leave A Reply

Your email address will not be published.