ಗೂಗಲ್ ಕ್ರೋಮ್ ಮತ್ತು ಮೊಜಿಲ್ಲಾವನ್ನು ತುರ್ತು ಅಪ್‌ಡೇಟ್ ಮಾಡಿಕೊಳ್ಳುವಂತೆ ಎಚ್ಚರಿಕೆ!!

ಪ್ರಸಿದ್ಧ ವೆಬ್ ಬ್ರೌಸರ್​ಗಳಾದ ಗೂಗಲ್ ಕ್ರೋಮ್ ಮತ್ತು ಮೊಜಿಲ್ಲಾದಲ್ಲಿ ಭದ್ರತಾ ಲೋಪವೊಂದು ಕಂಡುಬಂದಿದ್ದು, ಕೂಡಲೇ ಅಪ್‌ಡೇಟ್ ಮಾಡಿಕೊಳ್ಳುವಂತೆ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯಾ ತಂಡ ಎಚ್ಚರಿಕೆ ನೀಡಿದೆ.

ಕ್ರೋಮ್ ಮತ್ತು ಕೆಲವು ಮೊಜಿಲ್ಲಾ ಉತ್ಪನ್ನಗಳಲ್ಲಿ ಹಲವಾರು ದೌರ್ಬಲ್ಯಗಳನ್ನ ಪತ್ತೆ ಮಾಡಲಾಗಿದೆ. ಸಿಇಆರ್ಟಿ-ಇನ್ ಈ ದೌರ್ಬಲ್ಯಗಳು ಹ್ಯಾಕರ್‌ಗಳಿಗೆ ಎಲ್ಲಾ ಬಳಕೆದಾರರ ಡೇಟಾಗೆ ಪ್ರವೇಶವನ್ನ ಒದಗಿಸುತ್ತಿವೆ ಎಂಬ ಮಾಹಿತಿಯನ್ನು ತಿಳಿಸಿದೆ. ಎಲ್ಲಾ ಭದ್ರತಾ ಕಾರ್ಯವಿಧಾನಗಳನ್ನ ಬೈಪಾಸ್ ಮಾಡುವ ಮೂಲಕ ಅನಿಯಂತ್ರಿತ ಕೋಡ್‌ಗಳನ್ನ ಸಹ ಕಾರ್ಯಗತಗೊಳಿಸುತ್ತಿವೆ ಎಂಬ ಮಾಹಿತಿಯನ್ನು ಸರ್ಟ್-ಇನ್ ತಿಳಿಸಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಈಗಾಗಲೇ ಗೂಗಲ್‌ ಕ್ರೋಮ್‌ ನಲ್ಲಿ ಹಲವು ದೋ‍ಷಗಳನ್ನು CERT-In ಪತ್ತೆ ಹಚ್ಚಿದೆ. CVE-2021-43527, CVE-2022-1489, CVE-2022-1633, CVE-202-1636, CVE-2022-1859, CVE-2022-1867, ಮತ್ತು C20 Google ನಿಂದ ಹಲವು ದೋಷಗಳನ್ನು ಪತ್ತೆ ಹಚ್ಚಲಾಗಿದೆ. ಈ ಎಲ್ಲಾ ದೋಷಗಳನ್ನು ಟೆಕ್ ದೈತ್ಯ ಗೂಗಲ್‌ ಕೂಡ ಒಪ್ಪಿಕೊಂಡಿದೆ. ಇನ್ನು ಈ ದೋಷಗಳಿಂದ ರಕ್ಷಿಸಲು ಕ್ರೋಮ್‌ OS ನ ಇತ್ತೀಚಿನ ಆವೃತ್ತಿಯನ್ನು ಡೌನ್‌ಲೋಡ್ ಮಾಡಲು ಗೂಗಲ್‌ ಕಂಪನಿ ಬಳಕೆದಾರರಿಗೆ ಹೇಳಿದೆ. ಈ ದುರ್ಬಲತೆಗಳು ಬಳಕೆದಾರರ ಡೇಟಾವನ್ನು ಹ್ಯಾಕರ್‌ಗಳಿಗೆ ಸಿಗುವಂತೆ ಮಾಡಲಿದೆ ಎಂದು ಹೇಳಿದೆ.

CERT-Inನ ಪ್ರಕಾರ, ಈ ದುರ್ಬಲತೆಗಳು ಹ್ಯಾಕರ್‌ಗಳು ಬಳಕೆದಾರರ ಡೇಟಾವನ್ನು ಪ್ರವೇಶಿಸಲು ಸಾಧ್ಯವಾಗಲಿದೆ. ಹ್ಯಾಕರ್‌ಗಳ ಕಾರಣದಿಂದಾಗಿ ಬಳಕೆದಾರರು ಮಾಹಿತಿ ವ್ಯವಸ್ಥೆಗಳು, ಡಿವೈಸ್‌ಗಳು ಅಥವಾ ಇತರ ಸಂಪನ್ಮೂಲಗಳನ್ನು ಪ್ರವೇಶಿಸಲು ಸಾಧ್ಯವಾಗದಿದ್ದಾಗ ಸೇವೆಯ ನಿರಾಕರಣೆ (DoS) ದಾಳಿ ಸಂಭವಿಸುತ್ತದೆ. ಇಂತಹ ದಾಳಿಗಳನ್ನು ಬಳಸಿಕೊಂಡು ಬಳಕೆದಾರರ ಇಮೇಲ್, ವೆಬ್‌ಸೈಟ್‌ಗಳು, ಆನ್‌ಲೈನ್ ಖಾತೆಗಳನ್ನು ಹ್ಯಾಕ್‌ ಮಾಡವುದು ಸುಲಭವಾಗಲಿದೆ ಎಂದು CERT-In ಹೇಳಿಕೊಂಡಿದೆ.

ಕ್ರೋಮ್ ಬ್ರೌಸರ್ ಅಪ್‌ಡೇಟ್ ಮಾಡುವ ವಿಧಾನ:

•ಡೆಸ್ಕ್‌ಟಾಪ್ ಕಂಪ್ಯೂಟರ್ ಬಳಕೆದಾರರು ಗೂಗಲ್ ಕ್ರೋಮ್ ಬ್ರೌಸರ್ ತೆರೆಯಿರಿ.
•ಬಲ ತುದಿ ಮೇಲ್ಭಾಗದಲ್ಲಿರುವ ಮೂರು ಚುಕ್ಕಿಗಳ ಮೆನು ಆಯ್ಕೆ (Customize and control Google Chrome) ಕ್ಲಿಕ್ ಮಾಡಿ.
••ನಂತರ ಸೆಟ್ಟಿಂಗ್ಸ್ ತೆರೆಯಿರಿ.
•ಬಳಿಕ, ಅಬೌಟ್ ಕ್ರೋಮ್ ಓಪನ್ ಮಾಡಿ.
•ಅಲ್ಲಿ ಇರುವ ಗೂಗಲ್ ಕ್ರೋಮ್ ಅಪ್‌ಡೇಟ್ ನೌ ಎಂದಿರುವುದನ್ನು ಕ್ಲಿಕ್ ಮಾಡಿ.
•ಅಪ್‌ಡೇಟ್ ಆದ ಬಳಿಕ, ರೀಲಾಂಚ್ ಮಾಡಿ.

error: Content is protected !!
Scroll to Top
%d bloggers like this: