ಕಾರಿನಲ್ಲಿ ಸೆಕ್ಸ್ ಮಾಡಿದ್ದಕ್ಕೆ, ಯುವತಿಗೆ ದೊರೆಯಿತು 40 ಕೋಟಿ ರೂ.! ಹೇಗೆ ? ಇಲ್ಲಿದೆ ಕಂಪ್ಲೀಟ್ ವಿವರ !
ಸಾರ್ವಜನಿಕ ಸ್ಥಳದಲ್ಲಿ ಸೆಕ್ಸ್ ಮಾಡಿದರೆ ಕೇಸ್ ಹಾಕಿ ಜೈಲಿಗಟ್ಟುತ್ತಾರೆ. ಆದರೆ ಈಗ ಕಾರಿನೊಳಗೆ ಸೆಕ್ಸ್ ಮಾಡಿದ ಯುವತಿಯೋರ್ವಳು ನ್ಯಾಯಾಲಯದ ಮೆಟ್ಟಿಲೇರಿದ್ದು, ಈಗ ಆಕೆಗೆ 40 ಕೋಟಿ ಪರಿಹಾರ ನೀಡಬೇಕೆಂದು ಕೋರ್ಟ್ ಆದೇಶಿಸಿದೆ.
ಯುವತಿಯೊಬ್ಬಳು ತಾನು ಮಾಜಿ ಗೆಳೆಯನ ಜೊತೆ ಕಾರಿನಲ್ಲಿ ಸೆಕ್ಸ್ ಮಾಡಿ ಲೈಂಗಿಕ ಸೋಂಕಿಗೆ ಒಳಗಾಗಿದ್ದೇನೆಂದು ಕೋರ್ಟ್ ಗೆ ಹೇಳಿದ್ದಾಳೆ. ಹಾಗಾಗಿ ಮಾಜಿ ಪ್ರಿಯಕರನ ಕಾರಿನ ಇನ್ಶುರೆನ್ಸ್ ಕಂಪನಿಯಿಂದ ಈ ಬಗ್ಗೆ ಪರಿಹಾರ ನೀಡುವಂತೆ ಕೇಳಿದ್ದಾಳೆ. ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದ್ದು, ಈ ಪ್ರಕರಣದಲ್ಲಿ ಯುವತಿಗೆ ಸುಮಾರು 40 ಕೋಟಿ ರೂ. ಪರಿಹಾರ ಧನವಾಗಿ ನೀಡಿದ್ದು ಇದು ಕಾರಿನಲ್ಲಿ ಸಂಭವಿಸಿದ ಅಪಘಾತ ಎಂದು ಕೋರ್ಟ್ ಹೇಳಿದೆ.
ಅಮೆರಿಕದ ಮಿಸೌರಿಯಲ್ಲಿ ಈ ಪ್ರಕರಣ ನಡೆದಿದೆ. 2014
ರಲ್ಲಿ ಈ ಜೋಡಿ ಹ್ಯುಂಡೈ ಜೆನೆಸಿಸ್ ಕಾರಿನಲ್ಲಿ ಸೆಕ್ಸ್
ಮಾಡಿದ್ದರು. ವಾಸ್ತವವಾಗಿ, ಹುಡುಗಿಯ ಮಾಜಿ ಗೆಳೆಯ ಲೈಂಗಿಕವಾಗಿ ಹರಡುವ ರೋಗವನ್ನು ಹೊಂದಿದ್ದ. ಇದರಿಂದ ಯುವತಿಗೂ ಆ ರೋಗ ಬಂದಿತ್ತು. ಪ್ರಕರಣದ ನಡೆದ 5 ವರ್ಷಗಳ ನಂತರ, ಈಗ ಜನರಲ್ ಇನ್ಸುರೆನ್ಸ್ ಕಂಪನಿ ಯುವತಿಗೆ ಭಾರೀ ಹಾನಿಯನ್ನು ಪಾವತಿಸುವಂತೆ ತೀರ್ಪು ನೀಡಿದೆ. ಯಾಹೂ ನ್ಯೂಸ್ ವರದಿಯ ಪ್ರಕಾರ, ಮೂವರು ನ್ಯಾಯಾಧೀಶರ ಸಮಿತಿಯು ಈ ನಿರ್ಧಾರವನ್ನು ನೀಡಿದೆ.
ಈ ಜೋಡಿ 2017 ರಿಂದ ಲೈಂಗಿಕ ಸಂಬಂಧ ಹೊಂದಿದ್ದಾರೆ. ನ್ಯಾಯಾಲಯದ ದಾಖಲೆಗಳ ಪ್ರಕಾರ, ಯುವತಿ ತನ್ನ ಮಾಜಿ ಗೆಳೆಯನಿಗೆ ಗಂಟಲು ಕ್ಯಾನ್ಸರ್ ಟ್ಯೂಮರ್ ಮತ್ತು HPV (ಹೂಮನ್ ಪ್ಯಾಪಿಲೋಮವೈರಸ್) ಇದೆ ಎಂದು ಆರೋಪ ಮಾಡಿದ್ದಾಳೆ. ಆದರೂ ಯುವಕ ಎಲ್ಲವನ್ನೂ ಮರೆಮಾಚಿ ಕಾಂಡೋಂ ಬಳಸದೆ ಸೆಕ್ಸ್ ನಡೆಸುತ್ತಿದ್ದನಂತೆ.
ಮೇ 2021 ರಲ್ಲಿ, ದಂಪತಿ ವಾಹನದೊಳಗೆ ಸೆಕ್ಸ್ ನಡೆಸಿದ್ದರೆಂದು ನ್ಯಾಯಾಧೀಶರಿಗೆ ಸಾಕ್ಷಿ ಸಮೇತ ಸಲ್ಲಿಸಲಾಗಿದ್ದು, ಈ ಕಾರಣದಿಂದಾಗಿ, ಹುಡುಗಿಗೆ HPV ಸೋಂಕು ತಗುಲಿದ್ದು, ಸೋಂಕಿನ ಬಗ್ಗೆ ಮಾಹಿತಿ ಮರೆಮಾಚಿದ್ದಕ್ಕೆ ಮಾಜಿ ಪ್ರಿಯಕರನನ್ನೇ ಹೊಣೆ ಮಾಡಲಾಗಿದ್ದು, ಹುಡುಗಿಗೆ 40 ಕೋಟಿ ರೂ. ನಿಡುವಂತೆ ಆದೇಶಿಸಿದೆ. ಈ ಮೊತ್ತ ಮಹಿಳೆಗೆ ಹಾನಿ ಮತ್ತು ಗಾಯಗಳುಂಟು ಮಾಡಿದ್ದಕ್ಕೆ ನೀಡಲಾಗಿದೆಯಂತೆ.