WhatsApp ನಲ್ಲಿ ಬಂತು ಯಾರೂ ಊಹಿಸದ ಅಪ್ಡೇಟ್!…ಏನದು? ಇಲ್ಲಿದೆ ಕಂಪ್ಲೀಟ್ ವಿವರ!
ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಮೆಟಾ ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ ಆ್ಯಪ್ ಈಗಾಗಲೇ ಎಲ್ಲರಿಗೂ ತಿಳಿದಿರುವ ಹಾಗೇ ಹೊಸ ಹೊಸ ಫೀಚರ್ಗಳನ್ನು ಪರಿಚಯ ಮಾಡುತ್ತಲೇ ಇರುತ್ತದೆ. ಎರಡು ದಿನಗಳ ಹಿಂದೆಯಷ್ಟೆ ವಾಟ್ಸ್ಆ್ಯಪ್, ಕಳುಹಿಸಿದ ಮೆಸೇಜ್ ಅನ್ನು ಎಡಿಟ್ ಮಾಡುವ ಆಯ್ಕೆ ಗ್ರಾಹಕರಿಗೆ ಒದಗಿಸುವುದಾಗಿ ಹೇಳಿತ್ತು. ಅಲ್ಲದೆ ಡಿಲೀಟ್ ಆದ ಚಾಟ್ ಅನ್ನು ಮರಳಿಸುವ ಅನ್ಡು ಆಯ್ಕೆ ನೀಡುವುದಾಗಿ ಹೇಳಿತ್ತು. ಇದೀಗ ವಾಟ್ಸ್ ಆ್ಯಪ್ ಅಕೌಂಟ್ಗೆ ಲಾಗ್ ಇನ್ ಮಾಡುವುದಕ್ಕೆ ಹೆಚ್ಚುವರಿ ಭದ್ರತೆಯ ಫೀಚರ್ಸ್ ನ್ನು ನೀಡಿದೆ ವಾಟ್ಸಪ್.
ಇನ್ನು ಮುಂದೆ ವಾಟ್ಸ್ಆ್ಯಪ್ ಡಬಲ್ ವೆರಿಫಿಕೇಶನ್ ಕೋಡ್ ಅನ್ನು ಕೇಳಲಿದೆ. SMS ಮೂಲಕ ಕಳುಹಿಸಲಾದ ವೆರಿಫಿಕೇಶನ್ ಕೋಡ್ ಹೊರತುಪಡಿಸಿ ನಿಮಗೆ ಹೆಚ್ಚುವರಿ ಪರಿಶೀಲನೆಗಾಗಿ ಕೋಡ್ ನ್ನು ಕೇಳಲಿದೆ. ಇದರಿಂದ ನಿಮ್ಮ ವಾಟ್ ಆ್ಯಪ್ ಅಕೌಂಟ್ ಫೋನ್ ನಂಬರ್ ಅನ್ನು ಈಗಾಗಲೇ ಮತ್ತೊಂದು ಫೋನ್ನಲ್ಲಿ ಬಳಸುತ್ತಿದ್ದರೆ, ನಿಮ್ಮ ಖಾತೆಯು ನಿಮ್ಮ ಕಂಟ್ರೋಲ್ ( ನಿಯಂತ್ರಣ) ದಲ್ಲಿದೆ ಎಂದು ಖಚಿತಪಡಿಸಿಕೊಳ್ಳಲು ಇದು ತುಂಬಾ ಸಹಾಯ ಮಾಡಲಿದೆ.
ಇದರಲ್ಲೂ ಟೈಮರ್ ಇದೆ. ಹೆಚ್ಚುವರಿ ಭದ್ರತೆಗಾಗಿ ನೀವು ಕೋಡ್ ಕಳುಹಿಸುವ ಮೊದಲು ಟೈಮರ್ ಮುಗಿಯುವವರೆಗೆ ಕಾಯಬೇಕಾಗುತ್ತದೆ. ಈ ಹೊಸ ವೆರಿಫಿಕೇಶನ್ ಫೀಚರ್ಸ್ನಿಂದಾಗಿ ಆ್ಯಪ್ ಬಳಕೆದಾರರ ಖಾತೆಗಳಿಗೆ ಅನಧಿಕೃತ ಪ್ರವೇಶವನ್ನು ತಡೆಯಲು ಸಾಧ್ಯವಾಗಲಿದೆ.
ಇನ್ನು ವಾಟ್ಸ್ಆ್ಯಪ್ನಲ್ಲಿ ನೀವು ಮೆಸೇಜ್ ಡಿಲೀಟ್ ಮಾಡಿದರೆ ಅನ್ ಡು ಮಾಡುವ ಆಪ್ಶನ್ ಸಿಗಲಿದೆ. ಇಲ್ಲದಿದ್ದರೆ ಬಳಕೆದಾರರು ಮೆಸೇಜ್ ಡಿಲೀಟ್ ಮಾಡಲು ಹೊರಟಾಗ ಡಿಲೀಟ್ ಫಾರ್ ಎವರಿವರ್ ಬದಲು ಡಿಲೀಟ್ ಫಾರ್ ಮಿ ಒ ಬಿಡುತ್ತಾರೆ. ವಾಟ್ಸ್ಆ್ಯಪ್ನ ಈ ಹೊಸ ಅನ್ ಡು ಬಟನ್ ಇದಕ್ಕೆ ಸಹಕಾರಿ ಆಗಲಿದೆ ಎನ್ನಬಹುದು. ಸದ್ಯದಲ್ಲೇ ಈ ಆಯ್ಕೆ ಎಲ್ಲ ಬಳಕೆದಾರರಿಗೆ ಸಿಗಲಿದೆಯಂತೆ. ವಾಟ್ಸ್ಆ್ಯಪ್ ಬೇಟಾ ವರ್ಷನ್ನಲ್ಲಿರುವ ಈ ಆಯ್ಕೆ ಬಗ್ಗೆ ಸುದ್ದಿ ಒಂದಿದ್ದು, ಇದರ ಪ್ರಕಾರ ನೀವು ಡಿಲೀಟ್ ಫಾರ್ ಮಿ ಆಯ್ಕೆಯನ್ನು ಒತ್ತಿದ ತಕ್ಷಣ ಮೇಲಿನ ಭಾಗದಲ್ಲಿ ಈ ಮೆಸೇಜ್ ಅನ್ನು ಅನ್ಡು ಮಾಡುವ ಆಪ್ಶನ್ ಎಂಬ ಪಾಪ್-ಅಪ್ ಆಯ್ಕೆ ಕಾಣಲಿದೆ. ಈಗಾಗಲೇ ಟೆಲಿಗ್ರಾಮ್ ನಲ್ಲಿ ಈ ಅಪ್ಡೇಟ್ ನೀಡಲಾಗಿದೆ.
ಈ ಮೊದಲು ವಾಟ್ಸಪ್ ಖಾತೆಗಳಿಗೆ ನಕಲಿ ಲಾಗಿನ್ ಮಾಡಲು ಪ್ರಯತ್ನಪಡುವಂತಹ ಅನೇಕ ಪ್ರಕರಣಗಳು ನಡೆದ ಬಗ್ಗರ ವರದಿಯಾಗಿದ್ದವು. ಹಾಗಾಗಿ, ಡಬಲ್ ವೆರಿಫಿಕೇಶನ್ ಕೋಡ್ನೊಂದಿಗೆ, ಲಾಗಿನ್ ಪ್ರಕ್ರಿಯೆಯಿಂದ ವೈಯಕ್ತಿಕ ಮಾಹಿತಿ ಮತ್ತು ಡೇಟಾದ ದುರುಪಯೋಗವನ್ನು ತಡೆಯುವ ಸಲುವಾಗಿ ಈ ಫೀಚರ್ ತರಲಾಗಿದೆ.