ಪೋಸ್ಟ್ ಆಫೀಸ್ ಸೂಪರ್ ಯೋಜನೆ | 10 ಸಾವಿರ ಕಟ್ಟಿ, ಲಕ್ಷದವರೆಗೆ ಲಾಭ ಗಳಿಸಿ
ಜೀವನ ಉತ್ತಮವಾಗಿ ನಡೆಸಲು ಪ್ರತಿಯೊಬ್ಬರಿಗೂ ಹಣ ಅಗತ್ಯ. ಹೀಗಿರುವಾಗ ಎಲ್ಲರೂ ಅತ್ಯುತ್ತಮವಾದ ಹೂಡಿಕೆಯ ಕಡೆಗೆ ಗಮನ ಹರಿಸುತ್ತಾರೆ. ಯಾವ ರೀತಿಲಿ, ಎಲ್ಲಿ ಉಳಿತಾಯ ಮಾಡಿದರೆ ನಾವು ಹೆಚ್ಚು ಲಾಭ ಗಳಿಸಬುದು ಎಂಬುದನ್ನು ಪ್ರತಿಯೊಬ್ಬರೂ ಯೋಚಿಸುತ್ತಾರೆ. ಆದರೆ ಹೆಚ್ಚಿನವರಿಗೆ ಮಾಹಿತಿಯ ಕೊರತೆಯಿಂದ ಒಳ್ಳೆಯ ಉಳಿತಾಯ ಮಾಡುವ ಯೋಜನೆಯ ಕುರಿತು ಮಾಹಿತಿ ಲಭ್ಯವಾಗದೆ ಇರುತ್ತದೆ.
ಹೌದು. ಇಂತಹ ಕಾರಣಕ್ಕಾಗಿಯೇ ಹೂಡಿಕೆದಾರರಿಗಾಗಿ ಪೋಸ್ಟ್ ಆಫೀಸ್ ನ ಉತ್ತಮವಾದ ಯೋಜನೆಯ ಬಗ್ಗೆ ಮಾಹಿತಿ ಇಲ್ಲಿದೆ. ಪೋಸ್ಟ್ ಆಫೀಸ್ನ ಈ ಹೊಸ ಯೋಜನೆಯಿಂದ ಹಲವರಿಗೆ ಉಪಯೋಗವಾಗಲಿದ್ದು, ಅಧಿಕ ಹಣ ಕೂಡ ಗಳಿಸಬಹುದಾಗಿದೆ. ಕಡಿಮೆ ಅಪಾಯ ಮತ್ತು ಹೆಚ್ಚಿನ ಆದಾಯವನ್ನು ಬಯಸುವ ಹೂಡಿಕೆದಾರರಿಗೆ ಈ ಯೋಜನೆ ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯಲ್ಲಿ ಅಪಾಯಕಾರಿ ಅಂಶವು ತುಂಬಾ ಕಡಿಮೆಯಾಗಿದ್ದು, ಆದಾಯವು ಹೆಚ್ಚು. ಈ ಪೋಸ್ಟ್ ಆಫೀಸ್ ಯೋಜನೆಯನ್ನು ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಎಂದು ಕರೆಯಲಾಗುತ್ತದೆ.
ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಸರ್ಕಾರದ ಖಾತರಿ ಯೋಜನೆಯಾಗಿದೆ. ಇದರಲ್ಲಿ ಬಡ್ಡಿ ಹೆಚ್ಚು ಮತ್ತು ಸಣ್ಣ ಮೊತ್ತವನ್ನು ಕಂತುಗಳಲ್ಲಿ ಠೇವಣಿ ಮಾಡಬಹುದು. ಹೂಡಿಕೆದಾರರು ತಮಗೆ ಇಷ್ಟವಾಗುವ ಮೊತ್ತವನ್ನು ಇಲ್ಲಿ ಹೂಡಿಕೆ ಮಾಡಬಹುದು. ಇದರಲ್ಲಿ ಹೂಡಿಕೆ ಮಾಡಲು ಗರಿಷ್ಠ ಮಿತಿ ಇಲ್ಲ. ನೀವು ಎಷ್ಟು ಸಾಧ್ಯವೋ ಅಷ್ಟು ಹೂಡಿಕೆ ಮಾಡಬಹುದಾಗಿದೆ.
ಈ ಯೋಜನೆಯಲ್ಲಿ ಖಾತೆಯನ್ನು ಐದು ವರ್ಷಗಳವರೆಗೆ ತೆರೆಯಲಾಗುತ್ತದೆ. ಆದಾಗ್ಯೂ, ಬ್ಯಾಂಕುಗಳು ಆರ್‌ಡಿ ಖಾತೆಗಳನ್ನು ಆರು ತಿಂಗಳು, 1 ವರ್ಷ, 2 ವರ್ಷ, 3 ವರ್ಷಗಳವರೆಗೆ ನೀಡುತ್ತವೆ. ಠೇವಣಿ ಮಾಡಿದ ಹಣದ ಮೇಲಿನ ಬಡ್ಡಿಯನ್ನು ತ್ರೈಮಾಸಿಕವಾಗಿ (ವಾರ್ಷಿಕವಾಗಿ) ಲೆಕ್ಕ ಹಾಕಲಾಗುತ್ತದೆ. ಪ್ರತಿ ತ್ರೈಮಾಸಿಕದ ಕೊನೆಯಲ್ಲಿ ನಿಮ್ಮ ಖಾತೆಗೆ ಬಡ್ಡಿ ಸೇರಿಸಲಾಗುತ್ತದೆ.
ಆರ್‌ಡಿ ಯೋಜನೆಯು ಪ್ರಸ್ತುತ 5.8 ಶೇಕಡಾ ಬಡ್ಡಿಯನ್ನು ಗಳಿಸುತ್ತಿದೆ, ಹೊಸ ದರವು ಏಪ್ರಿಲ್ 1 2020 ರಿಂದ ಅನ್ವಯಿಸುತ್ತದೆ. ಭಾರತ ಸರ್ಕಾರವು ತನ್ನ ಎಲ್ಲಾ ಸಣ್ಣ ಉಳಿತಾಯ ಯೋಜನೆಗಳಿಗೆ ತ್ರೈಮಾಸಿಕ ಆಧಾರದ ಮೇಲೆ ಬಡ್ಡಿದರಗಳನ್ನು ನಿಗದಿಪಡಿಸುತ್ತದೆ. ತಿಂಗಳಿಗೆ 10,000 ರೂಪಾಯಿಗಳನ್ನು ಪೋಸ್ಟ್ ಆಫೀಸ್ ಆರ್‌ಡಿ ಯೋಜನೆಯಲ್ಲಿ 10 ವರ್ಷಗಳವರೆಗೆ ಹೂಡಿಕೆ ಮಾಡಿದರೆ, ನೀವು 10 ವರ್ಷಗಳ ನಂತರ ಶೇಕಡಾ 5.8 ರ ಬಡ್ಡಿದರದಲ್ಲಿ 16 ಲಕ್ಷಕ್ಕಿಂತ ಹೆಚ್ಚಿನದನ್ನು ಪಡೆಯಬಹುದಾಗಿದೆ.
ನಿಯಮಿತವಾಗಿ ಖಾತೆಯಲ್ಲಿ ಹಣವನ್ನು ಜಮಾ ಮಾಡಬೇಕು, ನೀವು ಹಣವನ್ನು ಠೇವಣಿ ಮಾಡದಿದ್ದರೆ ನೀವು ಪ್ರತಿ ತಿಂಗಳು ಶೇಕಡಾ ಒಂದರಷ್ಟು ದಂಡವನ್ನು ಪಾವತಿಸಬೇಕಾಗುತ್ತದೆ. ನೀವು 4 ಕಂತುಗಳನ್ನು ಕಟ್ಟದಿದ್ದರೆ ನಿಮ್ಮ ಖಾತೆಯನ್ನು ಕ್ಲೋಸ್ ಮಾಡಲಾಗುತ್ತೆ. ಆರ್‌ಡಿ ಹೂಡಿಕೆಯ ಮೇಲೆ ಟಿಡಿಎಸ್ ಕಡಿತಗೊಳಿಸಲಾಗುತ್ತದೆ, ಠೇವಣಿ 40,000 ರೂ.ಗಿಂತ ಹೆಚ್ಚಿದ್ದರೆ ವರ್ಷಕ್ಕೆ 10% ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ. RD ಮೇಲಿನ ಬಡ್ಡಿಯು ಸಹ ತೆರಿಗೆಗೆ ಒಳಪಡುತ್ತದೆ. ಆದರೆ ಪೂರ್ಣ ಪ್ರಮಾಣದ ಮೆಚ್ಯೂರಿಟಿಗೆ ತೆರಿಗೆ ವಿಧಿಸಲಾಗುವುದಿಲ್ಲ. ತೆರಿಗೆಗೆ ಒಳಪಡುವ ಆದಾಯವನ್ನು ಹೊಂದಿರದ ಹೂಡಿಕೆದಾರರು FD ನಂತಹ ಫಾರ್ಮ್ 15G ಅನ್ನು ಭರ್ತಿ ಮಾಡುವ ಮೂಲಕ TDS ನಲ್ಲಿ ರಿಯಾಯಿತಿಯನ್ನು ಪಡೆಯಬಹುದು.