ಮಂಗಳೂರು : ಅಡಿಕೆ ಬೆಳೆಗಾರರೇ ಗಮನಿಸಿ ; ಕ್ಯಾಂಪ್ಕೋದಿಂದ ಮಹತ್ವದ ಮಾಹಿತಿ !!!

0 32

ಮಂಗಳೂರು: ಮ್ಯಾನ್ಮಾರ್ ಗಡಿಯಲ್ಲಿನ ಐಸಿಪಿ, ಮೊರೇಹ್ (ಮಣಿಪುರ)ದಲ್ಲಿನ ಗೇಟ್ 1 ಮತ್ತು 2ನ್ನು ಮೇ 20ರಿಂದ ತೆರೆದು ವ್ಯಾಪಾರ ಪುನರಾರಂಭಕ್ಕೆ ಅವಕಾಶ ಕಲ್ಪಿಸಿಲಾಗಿದ್ದರೂ, ಇತರ ವಸ್ತುಗಳ ಜತೆ ಸಾಂಬಾರು ವಸ್ತುಗಳ ಹೆಸರಿನಲ್ಲಿ ಅಡಕೆ, ಕಾಳುಮೆಣಸು ಕೂಡ ಕಡಿಮೆ ಬೆಲೆಗೆ ಆಮದಾಗುತ್ತಿದೆ. ಇದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್‌ಗೆ ಅಡಕೆ ಬೆಳೆಗಾರರ ಅಂತಾರಾಜ್ಯ ಸಹಕಾರ ಸಂಸ್ಥೆ ‘ಕ್ಯಾಂಪ್ಕೋ’ ಪತ್ರ ಬರೆದಿದ್ದು ಎಲ್ಲರಿಗೂ ತಿಳಿದ ವಿಷಯ.

ಈ ಎಲ್ಲಾ ಬೆಳವಣಿಗೆಗಳಿಂದ ರೈತರು ಆತಂಕಗೊಂಡಿರುವುದಂತೂ ನಿಜ. ಈಗ ಕ್ಯಾಂಪ್ಕೋ ಅಧ್ಯಕ್ಷರು ರೈತರಿಗೆ ಖುಷಿಯ ವಿಚಾರವೊಂದನ್ನು ತಮ್ಮ ಪ್ರಕಟನೆಯ ಮೂಲಕ ತಿಳಿಸಿದ್ದಾರೆ.

” ಅಡಿಕೆಗೆ ಬೇಡಿಕೆ ಹಿನ್ನಡೆ ತಾತ್ಕಾಲಿಕ. ಹಾಗಾಗಿ ರೈತರು ಯಾವುದೇ ರೀತಿಯ ಆತಂಕಪಡಬೇಕಾಗಿಲ್ಲ. ಅಷ್ಟು ಮಾತ್ರವಲ್ಲದೇ ಪ್ರತೀವರ್ಷ ವಿದೇಶದಿಂದ ಅಡಿಕೆ ಆಮದು ಆಗುತ್ತಿದ್ದು, ಈ ಬಾರಿಯೂ ಅಷ್ಟೇ ಪ್ರಮಾಣದ ಅಡಿಕೆ ಆಮದು ಆಗಿರುತ್ತದೆ. ಉತ್ತರಭಾರತದಲ್ಲಿ ಅತೀ ಹೆಚ್ಚು ಉಷ್ಣತೆ ಇರುವುದರಿಂದ ಕರಾವಳಿ ಭಾಗದ ಅಡಿಕೆಯ ಬೇಡಿಕೆಗೆ ತಾತ್ಕಾಲಿಕ ಹಿನ್ನಡೆಯಾಗಿದೆ ಅಷ್ಟೇ.”

ಕೇಂದ್ರ ಸರ್ಕಾರದ ಸಚಿವರು ಮತ್ತು ಇಲಾಖಾ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಕ್ಯಾಂಪ್ಕೋ ಸಂಸ್ಧೆ ಇದೆ. ಈ ಮೂಲಕ ಅಡಿಕೆ ಆಮದು ತಡೆಗೆ ಕ್ಯಾಂಪ್ಕೋ ಪ್ರಯತ್ನ ಪಡುತ್ತಿದೆ. ಉತ್ತರ ಭಾರತದ ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದಾಸ್ತಾನಿನಲ್ಲಿ ಕೊರತೆ ಇದೆ. ಮುಂದಿನ ದಿನಗಳಲ್ಲಿ ಮುಂಗಾರು ಪ್ರಾರಂಭವಾಗಿ ಉತ್ತರ ಭಾರತಲ್ಲಿ ಉಷ್ಣತೆ ಕಡಿಮೆಯಾಗಲಿದ್ದು, ಅಡಿಕೆಗೆ ಉತ್ತಮ ಬೇಡಿಕೆ ಬರುವ ಎಲ್ಲಾ ಅವಕಾಶಗಳಿರುವುದರಿಂದ ಬೇಡಿಕೆಯಲ್ಲಿ ಚೇತರಿಕೆ ಕಾಣಲಿದೆ. ಹಾಗಾಗಿ ರೈತರು ಆತಂಕ ಪಡಬೇಡಿ ಎಂದು ಕ್ಯಾಂಪ್ಕೋ ಅಧ್ಯಕ್ಷರು ಬೆಳೆಗಾರರಿಗೆ ರೈತರಿಗೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Leave A Reply