KPSC : 1010 FDA ಹುದ್ದೆಗಳಿಗೆ ಅಂತಿಮ ಆಯ್ಕೆ ಪಟ್ಟಿ ಪ್ರಕಟ

Share the Article

ಕರ್ನಾಟಕ ಲೋಕಸೇವಾ ಆಯೋಗವು 2019-20 ನೇ ಸಾಲಿನ ಅಧಿಸೂಚನೆಯ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಉಳಿಕೆ ಮೂಲ ವೃಂದದ 1010 ಸಹಾಯಕರು / ಪ್ರಥಮ ದರ್ಜೆ ಸಹಾಯಕರು ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ, ಇದೀಗ ಅಂತಿಮ ಆಯ್ಕೆಪಟ್ಟಿ ಪ್ರಕಟಿಸಿದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ನೇಮಕ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು ಕೆಪಿಎಸ್‌ಸಿ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಫೈನಲ್ ಲಿಸ್ಟ್ ಚೆಕ್ ಮಾಡಬಹುದು.

ಕೆಪಿಎಸ್‌ಸಿ ಈ ಸದರಿ ಎಫ್‌ಡಿಎ ಹುದ್ದೆಗಳಿಗೆ ವರ್ಗಾವಾರು ಪರಿಗಣಿಸಿದ ಕೊನೆ ಅಭ್ಯರ್ಥಿ ಅಂಕಗಳನ್ನು ಸಹ ಬಿಡುಗಡೆ ಮಾಡಿದೆ. ಕಟ್ ಆಫ್ ಅಂಕಗಳು ಹಾಗೂ ಅಂತಿಮ ಆಯ್ಕೆಪಟ್ಟಿಯನ್ನು ಚೆಕ್ ಮಾಡಲು ಕೆಪಿಎಸ್‌ಸಿ ವೆಬ್‌ಸೈಟ್ https://www.kpsc.kar.nic.in/ ಗೆ ಭೇಟಿ ನೀಡಿ ಅಥವಾ ಈ ಕೆಳಗಿನ ಡೈರೆಕ್ಟ್ ಲಿಂಕ್ ಅನ್ನು ಕ್ಲಿಕ್ ಮಾಡಿರಿ.

ಕೆಪಿಎಸ್‌ಸಿ ಅಧಿಕೃತ ವೆಬ್‌ಸೈಟ್ www.kpsc.kar.gov.in ಗೆ ಭೇಟಿ ನೀಡಿ

  • ಓಪನ್ ಆದ ಪೇಜ್‌ನಲ್ಲಿ ಪಟ್ಟಿಗಳು ಎಂಬಲ್ಲಿ ಕ್ಲಿಕ್ ಮಾಡಿ.
  • ಆಯ್ಕೆಪಟ್ಟಿಗಳು – ಅಂತಿಮ ಆಯ್ಕೆಪಟ್ಟಿ ಸೆಲೆಕ್ಟ್ ಮಾಡಿ ಲಿಂಕ್ ಅನ್ನು ಕ್ಲಿಕ್ ಮಾಡಿ.
  • ನಂತರ ಇತ್ತೀಚೆಗೆ ಬಿಡುಗಡೆ ಆದ ಲೇಟೆಸ್ಟ್ ಆಯ್ಕೆಪಟ್ಟಿಗಳ ಲಿಸ್ಟ್‌ನಲ್ಲಿ 1010 ಎಫ್‌ಡಿಎ ಹುದ್ದೆಗಳ ಅಂತಿಮ ಆಯ್ಕೆಪಟ್ಟಿ ಚೆಕ್ ಮಾಡಬಹುದು.

ಕೆಪಿಎಸ್‌ಸಿ ಪ್ರಸ್ತುತ ಪ್ರಕಟಿಸಲಾದ ಪ್ರಥಮ ದರ್ಜೆ ಸಹಾಯಕರು ಹುದ್ದೆಗಳ ಅಭ್ಯರ್ಥಿಗಳಿಗೆ ನೇಮಕ ಆದೇಶ ಪತ್ರವನ್ನು ಶೀಘ್ರದಲ್ಲೇ ನೀಡಲಿದ್ದು, ಅಭ್ಯರ್ಥಿಗಳು ಅದರಲ್ಲಿ ನೀಡಲಾದ ಸ್ಥಳಗಳಿಗೆ ನಿಗದಿತ ದಿನಾಂಕದಂದು ವರದಿ ಮಾಡಿಕೊಳ್ಳಬೇಕಿರುತ್ತದೆ.

1010 KPSC Final list

KPSC FDA cut off marks list

Leave A Reply