ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳ ಮಾರಾಮಾರಿ | ಕಸದ ಬುಟ್ಟಿ, ದೊಣ್ಣೆ ಹಿಡಿದು ವಿದ್ಯಾರ್ಥಿಗಳ ಬಡಿದಾಟ

ಇತ್ತೀಚೆಗೆ ಖಾಸಗಿ ಶಾಲೆ ಬೆಂಗಳೂರಿನಲ್ಲಿ ಕೆಲವು ವಿದ್ಯಾರ್ಥಿನಿಯರು ರಸ್ತೆಯಲ್ಲಿ ಸ್ಟಿಕ್ ಹಿಡಿದುಕೊಂಡು ಹೊಡೆದಾಡಿಕೊಂಡ ಘಟನೆ ನಡೆದಿದ್ದು, ಆ ಘಟನೆ ಮರೆಮಾಚುವ ಮೊದಲೇ ಇದೀಗ ಅಂಥದೇ ಘಟನೆ ಜೈಪುರ, ರಾಜಸ್ಥಾನದಲ್ಲಿ ನಡೆದಿದೆ.

 

ವಿದ್ಯಾರ್ಥಿಗಳ ಒಳಜಗಳ ಹಿಂಸಾಚಾರಕ್ಕೆ ತಿರುಗಿದೆ. ವಿದ್ಯಾರ್ಥಿಗಳ ವಾದ, ಪ್ರತಿವಾದ ಹಿಂಸಾಚಾರಕ್ಕೆ ತಿರುಗಿದ್ದು, ಎರಡು ಗುಂಪುಗಳ ನಡುವೆ ಬಡಿದಾಟಕ್ಕೆ ತಿರುಗಿತು. ಕೋಲುಗಳನ್ನು ಬಳಸಿ ಪರಸ್ಪರ ಹಲ್ಲೆ ನಡೆಸಿರುವ ಘಟನೆ ಜೈಪುರದ ಕಾಲೇಜಿನಲ್ಲಿ ಸೋಮವಾರ ನಡೆದಿದೆ.

ಈ ಗಲಾಟೆ ವೀಡಿಯೋ ಈಗ ವೈರಲ್ ಆಗಿದೆ. ರಾಜಸ್ಥಾನ ವಿಶ್ವವಿದ್ಯಾನಿಲಯದಲ್ಲಿ ಈ ಗಲಾಟೆ ನಡೆದಿದೆ. ಈ ವೀಡಿಯೊ ಕ್ಲಿಪ್ ನಲ್ಲಿ ಡಜನ್‌ಗಟ್ಟಲೆ ವಿದ್ಯಾರ್ಥಿಗಳು ಕೋಲುಗಳನ್ನು ಹಿಡಿದು ಓಡುತ್ತಿರುವುದು ಮತ್ತು ಬಡಿದಾಡಿಕೊಳ್ಳುತ್ತಿರುವ ದೃಶ್ಯ ಕಂಡುಬಂದಿದೆ. ಕಾಲೇಜು ಆವರಣದ ತುಂಬೆಲ್ಲಾ ವಿದ್ಯಾರ್ಥಿಗಳು ಕೋಲು ಹಿಡಿದುಕೊಂಡು ಬಡಿದಾಡಿಕೊಂಡಿದ್ದಾರೆ.

ಒಬ್ಬ ವಿದ್ಯಾರ್ಥಿ ಕಸದ ಬುಟ್ಟಿ ಬಳಸಿ ರಕ್ಷಿಸಲು ಮುಂದಾದಾಗ, ಇನ್ನೊಬ್ಬ ಕೋಲಿನೊಂದಿಗೆ ಅವನ ಬಳಿಗೆ ಹೊಡೆಯಲು ಬರುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ.

Leave A Reply

Your email address will not be published.