ಆಮೆ ಮೊಲದ ಓಟದ ಕಥೆ ಕೇಳಿದ್ದೀರಿ, ಇದು ಆಮೆಮರಿ ಮತ್ತು ಒಂದು ದಿಮ್ಮಿಯ ಕಥೆ!!! 8 ಮಿಲಿಯನ್ ವೀಕ್ಷಣೆ ಪಡೆದ ಅದ್ಭುತ ವೀಡಿಯೋ

ಆಮೆ, ಮೊಲದ ಕಥೆ ಎಲ್ಲರಿಗೂ ಗೊತ್ತಿದೆ. ಮೊಲ ಆಮೆ ಓಟದಲ್ಲಿ ಆಮೆ ನಿಧಾನಕ್ಕೆ ಬರುತ್ತೆ ಎಂದು ತಿಳಿದುಕೊಂಡು ನಿಧಾನಕ್ಕೆ ಬರುತ್ತೆ ಎಂದು ಮೊಲ ನಿದ್ದೆಗೆ ಜಾರಿದಾಗ, ಆಮೆ ತಾಳ್ಮೆಯಿಂದ ಓಡಿ ಕೊನೆಗೂ ಗೆದ್ದಿತು. ಇಲ್ಲಿ ಅವಸರಕ್ಕೆ ದುಡುಕದೇ ತಾಳ್ಮೆಯಿಂದ ನಿರ್ಧಾರ ತಗೊಳ್ಳೋದು ಉತ್ತಮ ಎಂದು ಈ ಕಥೆಯ ತಾತ್ಪರ್ಯ. ಈಗ ಇಲ್ಲೊಂದು ವೀಡಿಯೋ ಇದೆ. ಅದು ಕೂಡಾ ತಾಳ್ಮೆಯ ಪಾಠ ಕಲಿಸುತ್ತೆ. ಬನ್ನಿ ಅದರ ವಿಶಿಷ್ಟತೆ ನೋಡೋಣ ಬನ್ನಿ.

ಈ ವೀಡಿಯೋದಲ್ಲೇನಿದೆ ಬನ್ನಿ ತಿಳಿಯೋಣ, ಅದೊಂದು ಪುಟ್ಟ ಕೆರೆ. ಅದೇ ಕೆರೆಯಲ್ಲಿ ಮರದ ದಿಮ್ಮಿ ತೇಲುತ್ತಿತ್ತು. ಅದೇ ಮರದ ದಿಮ್ಮಿ ಮೇಲೆ ಒಂದೊಂದಾಗಿ ಆಮೆ ಮರಿಗಳು ಹತ್ತುತ್ತವೆ. ಹತ್ತಿ ಅಲ್ಲೇ ಎಲ್ಲವೂ ಸಾಲಿನಲ್ಲಿ ನಿಂತುಕೊಳ್ಳುತ್ತೆ. ಆ ನಂತರ ಆ ಮರಿಗಳ ತಾಯಿ ಕೂಡಾ ಆ ಮರದ ದಿಮ್ಮಿ ಹತ್ತುತ್ತೆ. ಆಗಲೇ ಮರದ ದಿಮ್ಮಿ ಅಲ್ಲಾಡಲು ಶುರುವಾಗುತ್ತೆ. ಆಗ ಕೆಲ ಆಮೆ ಮರಿಗಳು ಆ ಮರದ ದಿಮ್ಮಿಯನ್ನ ಗಟ್ಟಿಯಾಗಿ ಹಿಡಿದು ಹಾಗೆಯೇ ನಿಂತಿರುತ್ತೆ. ಆ ದೃಶ್ಯ ನಿಜಕ್ಕೂ ಅದ್ಭುತ.

https://twitter.com/buitengebieden/status/1533380860841496577?ref_src=twsrc%5Etfw%7Ctwcamp%5Etweetembed%7Ctwterm%5E1533380860841496577%7Ctwgr%5E%7Ctwcon%5Es1_c10&ref_url=http%3A%2F%2Fapi-news.dailyhunt.in%2F

ಆದರೆ ತಾಯಿ ಆಮೆ ಮಾತ್ರ ಬ್ಯಾಲೆನ್ಸ್ ಮಾಡಲಾಗದೇ ನೀರಿನಲ್ಲಿ ಬಿದ್ದು ಬಿಡುತ್ತೆ. ಆವಾಗ ಮರಿ
ಆಮೆಗಳು ಕೂಡಾ ನೀರಿನಲ್ಲಿ ಬೀಳುತ್ತೆ.

ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಆಗಿರೋ ಈ ವಿಡಿಯೋ ವೈರಲ್ ಆಗಿದೆ. ಆಮೆ ಮರಿಗಳ ಒಗ್ಗಟ್ಟು,ಛಲ ನೋಡಿ ಜನರು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಈಗಾಗಲೇ 8 ಮಿಲಿಯನ್ ಜನರು ವೀಕ್ಷಿಸಿದ್ದಾರೆ.

Leave A Reply

Your email address will not be published.