ಬಂಟ್ವಾಳ : ಸಿಮೆಂಟ್ ಶೀಟ್ ಲೋಡ್ ಮಾಡುತ್ತಿದ್ದ ವೇಳೆ ಹಿಂಬದಿಯಿಂದ ಡಿಕ್ಕಿ ಹೊಡೆದ ಕಾರು | ಚಿಕಿತ್ಸೆ ಫಲಿಸದೇ ರಿಕ್ಷಾ ಚಾಲಕ ಸಾವು

ಬಂಟ್ವಾಳ: ಸಿಮೆಂಟ್ ಶೀಟ್ ನ್ನು ರಿಕ್ಷಾಕ್ಕೆ ಲೋಡ್ ಮಾಡುತ್ತಿದ್ದ ವೇಳೆ ಕಾರು ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ರಿಕ್ಷಾ ಚಾಲಕ, ಚಿಕಿತ್ಸೆ
ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಬಂಟ್ವಾಳದ ಕಲ್ಲಡ್ಕ ಪೂರ್ಲಿಪ್ಪಾಡಿಯಲ್ಲಿ ನಡೆದಿದೆ.

 

ಮೃತರನ್ನು ನೌಶಾದ್ ಸುರಿಬೈಲು (28)ಎಂದು ಗುರುತಿಸಲಾಗಿದೆ.

ಕೆ.ಎನ್ ಬೇಕರಿ ಬಳಿಯ ರಸ್ತೆಯ ಬದಿಯಲ್ಲಿ ಟೆಂಪೋ ರಿಕ್ಷಾ ನಿಲ್ಲಿಸಿ ಸಿಮೆಂಟ್ ಶೀಟ್ ಲೋಡು ಮಾಡುವ ಸಮಯದಲ್ಲಿ ಕಾರೊಂದು ಹಿಂಬದಿಯಿಂದ ಬಂದು ನೌಶಾದ್ ಅವರಿಗೆ ಡಿಕ್ಕಿ ಹೊಡೆದಿತ್ತು .ಇದರ ಪರಿಣಾಮ ತೀವ್ರವಾಗಿ ಗಾಯಗೊಂಡ ನೌಶಾದ್ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆ ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಎಸ್.ಐ.ಮೂರ್ತಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply

Your email address will not be published.