ಪಡಿತರ ಚೀಟಿದಾರರಿಗೆ ಸಿಹಿಸುದ್ದಿ !! | ಕೇಂದ್ರ ಸರ್ಕಾರದಿಂದ ಪಡಿತರ ವಿತರಣೆಗಾಗಿ ಹೊಸ ನಿಯಮ ಜಾರಿ

ಪಡಿತರ ಚೀಟಿಯ ಮೂಲಕ ಆಹಾರ ಧಾನ್ಯ ಪಡೆಯುವವರ ಪಾಲಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಒಂದೆಡೆ ಸರ್ಕಾರ ಉಚಿತ ಪಡಿತರ ಅವಧಿಯನ್ನು ಸೆಪ್ಟೆಂಬರ್‌ವರೆಗೆ ವಿಸ್ತರಿಸಿದೆ. ಮತ್ತೊಂದೆಡೆ, ಪಡಿತರ ಅಂಗಡಿ ಮಾಲೀಕರು ಪಡಿತರ ತೂಕದಲ್ಲಿ ಇನ್ನು ಮುಂದೆ ಯಾವುದೇ ರೀತಿಯ ಮೋಸ ಮಾಡಲು ಸಾಧ್ಯವಾಗದಂತಹ ವ್ಯವಸ್ಥೆಯೊಂದನ್ನು ಜಾರಿಗೆ ತರುತ್ತಿದೆ.

ಹೌದು. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ, ಫಲಾನುಭವಿಗಳಿಗೆ ಸರಿಯಾದ ಪ್ರಮಾಣದ ಆಹಾರ ಧಾನ್ಯಗಳ ಪೂರೈಕೆಯನ್ನು ಸುನಿಸ್ಚಿತಗೊಳಿಸಲು, ಕೇಂದ್ರ ಸರ್ಕಾರವು ಆಹಾರ ಭದ್ರತಾ ಕಾಯ್ದೆಯ ನಿಯಮಗಳನ್ನು ಜಾರಿಗೊಳಿಸಿದ್ದು, ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ (ಇಪಿಒಎಸ್) ಸಾಧನಗಳನ್ನು ಎಲೆಕ್ಟ್ರಾನಿಕ್ ಮಾಪಕಗಳೊಂದಿಗೆ ಸಂಪರ್ಕಿಸಲು ಆದೇಶ ನೀಡಿದೆ. ಪಡಿತರ ಅಂಗಡಿಗಳಲ್ಲಿ ಪಾರದರ್ಶಕತೆ ಹೆಚ್ಚಿಸಲು ಮತ್ತು ಫಲಾನುಭವಿಗಳಿಗೆ ಆಹಾರ ಧಾನ್ಯಗಳನ್ನು ತೂಗುವಾಗ ನಡೆಯುವ ಮೋಸವನ್ನು ತಡೆಯಲು ಸರ್ಕಾರ ಈ ಕ್ರಮ ಕೈಗೊಂಡಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಈ ತಿದ್ದುಪಡಿಯು ಎನ್‌ಎಫ್‌ಎಸ್‌ಎ ಅಡಿಯಲ್ಲಿ ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಟಿಪಿಡಿಎಸ್) ಕಾರ್ಯಾಚರಣೆಯ ಪಾರದರ್ಶಕತೆಯನ್ನು ಸುಧಾರಿಸುವ ಮೂಲಕ ಕಾಯಿದೆಯ ಸೆಕ್ಷನ್ 12 ರ ಅಡಿಯಲ್ಲಿ ಸರಿಯಾದ ತೂಕದ ಆಹಾರ ಧಾನ್ಯಗಳನ್ನು ಪೂರೈಸುವ ಪ್ರಕ್ರಿಯೆಯನ್ನು ಮುಂದಕ್ಕೆ ಕೊಂಡೊಯ್ಯುವ ಒಂದು ಪ್ರಯತ್ನವಾಗಿದೆ ಎಂದು ಸರ್ಕಾರ ಹೇಳಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (NFSA) ಅಡಿಯಲ್ಲಿ, ದೇಶದ ಸುಮಾರು 80 ಕೋಟಿ ಜನರಿಗೆ ಸರ್ಕಾರವು ಪ್ರತಿ ವ್ಯಕ್ತಿಗೆ ಐದು ಕಿಲೋಗ್ರಾಂಗಳಷ್ಟು ಗೋಧಿ ಮತ್ತು ಅಕ್ಕಿಯನ್ನು (ಆಹಾರ ಧಾನ್ಯಗಳು) ಪ್ರತಿ ಕೆಜಿಗೆ ಕ್ರಮಶಃ 2 ಮತ್ತು 3 ರೂಪಾಯಿಗಳ ಸಬ್ಸಿಡಿ ದರದಲ್ಲಿ ನೀಡುತ್ತಿದೆ.

ಈ ಕುರಿತು ಮಾತನಾಡಿರುವ ಅಧಿಕಾರಿಯೊಬ್ಬರು “ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಜೂನ್ 18, 2021 ರಂದು ಎನ್‌ಎಫ್‌ಎಸ್‌ಎ 2013 ರ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಸರಿಯಾದ ಪ್ರಮಾಣದಲ್ಲಿ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಿದೆ” ಎಂದಿದ್ದಾರೆ.

ಏನು ಬದಲಾವಣೆಯಾಗಿದೆ?

EPOS ಸಾಧನಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಲು ರಾಜ್ಯಗಳಿಗೆ ಉತ್ತೇಜಿಸಲು ಮತ್ತು ಪ್ರತಿ ಕ್ವಿಂಟಾಲ್‌ಗೆ ರೂ.17.00 ಹೆಚ್ಚುವರಿ ಲಾಭದ ಉಳಿತಾಯವನ್ನು ಉತ್ತೇಜಿಸಲು, ಆಹಾರ ಭದ್ರತೆ (ರಾಜ್ಯ ಸರ್ಕಾರದ ಸಹಾಯ ನಿಯಮಗಳು) 2015 ರ ಉಪ ನಿಯಮ 2ರ ನಿಯಮ 7ಕ್ಕೆ ತಿದ್ದುಪಡಿ ತರಲಾಗಿದೆ ಎಂದು ಸರ್ಕಾರ ಹೇಳಿದೆ.

ಇದರ ಅಡಿಯಲ್ಲಿ, ಯಾವುದೇ ರಾಜ್ಯ/ಕೇಂದ್ರಾಡಳಿತ ಪ್ರದೇಶ ಪಾಯಿಂಟ್-ಆಫ್-ಸೇಲ್ ಸಾಧನಗಳ ಖರೀದಿ, ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚಕ್ಕಾಗಿ ಒದಗಿಸಲಾದ ಹೆಚ್ಚುವರಿ ಮಾರ್ಜಿನ್ ನಿಂದ ಉಳಿತಾಯವಾದರೆ, ಅದನ್ನು ಎಲೆಕ್ಟ್ರಾನಿಕ್ ತೂಕದ ಮಾಪಕಗಳ ಖರೀದಿ, ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಎರಡೂ ಸಾಧನಗಳ ಏಕೀಕರಣಕ್ಕಾಗಿ ಬಳಸಬಹುದಾಗಿದೆ.

error: Content is protected !!
Scroll to Top
%d bloggers like this: