ಬಟ್ಟೆ ಒಗೆಯುವುದಕ್ಕೂ ಸೈ, ಒಣಗಿಸುವುದಕ್ಕೂ ಜೈ !! | ಅಮೆಜಾನ್ ನಲ್ಲಿ ಅಗ್ಗದ ಬೆಲೆಗೆ ದೊರೆಯಲಿದೆ ಬಕೆಟ್ ಗಾತ್ರದ ಪೋರ್ಟೆಬಲ್ ವಾಷಿಂಗ್ ಮೆಷಿನ್

ಇತ್ತೀಚಿನ ದಿನಗಳಲ್ಲಿ ವಾಷಿಂಗ್ ಮೆಷಿನ್ ಬಳಸುವವರ ಸಂಖ್ಯೆ ಹೆಚ್ಚೆಂದೇ ಹೇಳಬಹುದು. ಕೆಲಸದ ಒತ್ತಡದ ನಡುವೆ ಕೆಲವೇ ನಿಮಿಷಗಳಲ್ಲಿ ಬಟ್ಟೆಗಳನ್ನು ಒಗೆದು ಹೊಳಪು ಮಾಡಲು ವಾಷಿಂಗ್ ಮೆಷಿನ್ ಉತ್ತಮ ಆಯ್ಕೆ. ಆದರೆ ಇದೀಗ ಮಾರುಕಟ್ಟೆಗೆ ಹೊಸ ಪೋರ್ಟಬಲ್ ವಾಷಿಂಗ್ ಮೆಷಿನ್ ಲಗ್ಗೆಯಿಟ್ಟಿದೆ. ಇದು ಬಕೆಟ್ ಗಾತ್ರದಲ್ಲಿದ್ದು, ತುಂಬಾನೇ ಅಗ್ಗ ಮತ್ತು ಅತ್ತಿಂದಿತ್ತ ಒಯ್ಯಬಹುದಾದ ಅತ್ಯಂತ ಚಿಕ್ಕದಾಗಿರುವ ವಸ್ತು. ಅಷ್ಟೇ ಅಲ್ಲದೆ, ಇದನ್ನು ಯಾವುದೇ ತೊಂದರೆಯಿಲ್ಲದೆಯೇ ಬಳಸಬಹುದು.

ಹಿಲ್ಟನ್ 3 ಕೆಜಿ ಅರೆ-ಸ್ವಯಂಚಾಲಿತ ಟಾಪ್ ಲೋಡಿಂಗ್ ವಾಷಿಂಗ್ ಮೆಷಿನ್ ಎಂಬ ಈ ಮಿಷನ್ ಬಕೆಟ್‌ನಷ್ಟು ಚಿಕ್ಕದಾಗಿದೆ. ನೀವು ಅದನ್ನು ಮನೆಯ ಯಾವುದೇ ಮೂಲೆಯಲ್ಲಿ ಇರಿಸಬಹುದು. ಈ ಅರೆ-ಸ್ವಯಂಚಾಲಿತ ವಾಷಿಂಗ್ ಮೆಷಿನ್ 3 ಕೆ‌.ಜಿ ಸಾಮರ್ಥ್ಯದೊಂದಿಗೆ ಬರುತ್ತದೆ. ನೀವು ಒಮ್ಮೆಗೆ ಐದರಿಂದ ಆರು ಬಟ್ಟೆಗಳನ್ನು ಇದರಲ್ಲಿ ತೊಳೆಯಬಹುದು.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಇದರಲ್ಲಿ, ನೀವು ಬಟ್ಟೆಗಳನ್ನು ಒಣಗಿಸಲು ಬಳಸಬಹುದಾದ ವಿಶೇಷ ಸ್ಪಿನ್ನರ್ ಸಹ ನೀಡಲಾಗುತ್ತದೆ. ಪ್ಲಗ್ ಇನ್ ಮಾಡುವ ಮೂಲಕ ಇದನ್ನು ಸುಲಭವಾಗಿ ಬಳಸಬಹುದು. ಇದು ಅತ್ಯಂತ ಹಗುರವಾಗಿದೆ ಮತ್ತು ಸ್ವಯಂಚಾಲಿತ ಪವರ್ ಆಫ್ ಅನ್ನು ಸಹ ಹೊಂದಿದೆ. ಈ ಮೂಲಕ ವಿದ್ಯುತ್ ಉಳಿತಾಯವೂ ಆಗುತ್ತದೆ. ಡ್ರೈಯರ್ ಬಾಸ್ಕೆಟ್‌ನೊಂದಿಗೆ ಬರುವ ವಾಷಿಂಗ್ ಮೆಷಿನ್ ಬೆಲೆ 5,999 ರೂ. ಆದರೆ ಅಮೆಜಾನ್‌ನಿಂದ 4,590 ರೂ.ಗೆ ಖರೀದಿಸಬಹುದು. ಇದರಲ್ಲಿ ರಿಯಾಯಿತಿಗಳು ಮತ್ತು ವಿನಿಮಯ ಕೊಡುಗೆಗಳು ಸೇರಿವೆ.

ಅಮೆಜಾನ್‌ನಲ್ಲಿ ನೀವು ಮತ್ತೊಂದು ವಿಶಿಷ್ಟವಾದ ತೊಳೆಯುವ ಯಂತ್ರವನ್ನು ಕಾಣಬಹುದು. ಅದನ್ನು ನೀವು ಬಳಸಿದ ನಂತರ ಮಡಚಿ ಕೂಡ ಇಡಬಹುದು. ಓಪನ್ಜಾ ಮಿನಿ ಫೋಲ್ಡಬಲ್ ಪೋರ್ಟಬಲ್ ವಾಷಿಂಗ್ ಮೆಷಿನ್ ಎಂಬ ಹೆಸರಿನ ಮೆಷಿನ್ ಇದಾಗಿದ್ದು, ಬಳಸಿದ ನಂತರ ಅದನ್ನು ಟಿಫಿನ್‌ನಷ್ಟು ಚಿಕ್ಕದಾಗಿ ಮಾಡಿ ಕಬೋರ್ಡ್‌ನಲ್ಲಿ ಇಡಬಹುದು. ಇದು ಯುಎಸ್‌ಬಿ ಚಾಲಿತ, ಟಾಪ್ ಲೋಡ್ ಸ್ವಯಂಚಾಲಿತ ವಾಷಿಂಗ್ ಮೆಷಿನ್ ಆಗಿದ್ದು 10 ನಿಮಿಷಗಳಲ್ಲಿ ಬಟ್ಟೆ ಒಗೆಯುತ್ತದೆ. ಇದು ವಿದ್ಯುತ್ ಮತ್ತು ನೀರು ಎರಡನ್ನೂ ಉಳಿಸುತ್ತದೆ. ಅಮೆಜಾನ್‌ನಲ್ಲಿ ನೀವು ಇನ್ನೂ ಅನೇಕ ಪೋರ್ಟಬಲ್ ವಾಷಿಂಗ್ ಮೆಷಿನ್ ಆಯ್ಕೆಗಳನ್ನು ಕಾಣಬಹುದು.

error: Content is protected !!
Scroll to Top
%d bloggers like this: