ಪುತ್ತೂರು : ಚರಣ್ ರಾಜ್ ರೈ ಕೊಲೆ ಪ್ರಕರಣ : ಮೂರು ಮಂದಿ ಪೊಲೀಸ್ ವಶಕ್ಕೆ ?

ಪುತ್ತೂರಿನ ಹಿಂದೂ ಸಂಘಟನೆ ಕಾರ್ಯಕರ್ತ ಕಾರ್ತಿಕ್ ಮೇರ್ಲ ಎಂಬವರ ಹತ್ಯೆ ಆರೋಪಿಯ ಚರಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ


Ad Widget

Ad Widget

ಕಿಶೋರ್ ಪೂಜಾರಿ ತಂಡದ ನರ್ಮೇಶ್ ರೈ,ನಿತಿಲ್ ಶೆಟ್ಟಿ,ವಿಜೇಶ್ ಎಂಬವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎನ್ನಲಾಗಿದೆ.


Ad Widget

ಚರಣ್ ರಾಜ್ ತಮ್ಮ ಮಾವ ಕಿಟ್ಟಣ್ಣ ರೈ ಅವರ ಹೊಸ ಮೆಡಿಕಲ್ ಶಾಪ್ ನ ಶುಭಾರಂಭದ ಹಿನ್ನೆಲೆಯಲ್ಲಿ ಜೂ.4ರಂದು ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಬೈಕ್ ನಲ್ಲಿ ಬಂದ ತಂಡವೊಂದು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿತು

ಈ ಕುರಿತು ಚರಣ್ ರಾಜ್ ಜತೆಗಿದ್ದ ನವೀನ್ ಕುಮಾರ್ ಎಂಬವರು ಕೊಲೆ ಮಾಡಿದ ತಂಡದಲ್ಲಿದ್ದ ಓರ್ವನನ್ನು ಗುರುತು ಮಾಡಿದ್ದು ಅವರು ಕಿಶೋರ್ ಪೂಜಾರಿ ಕಲ್ಲಡ್ಕ ಎಂದು ಹೇಳಿದ್ದರು.

Ad Widget

Ad Widget

Ad Widget

ಸ್ಥಳಕ್ಕೆ ದ.ಕ.ಎಸ್ಪಿ ಋಷಿಕೇಶ್ ಸೋನಾವಣೆ ಸೇರಿದಂತೆ ಉನ್ನತ ಅಧಿಕಾರಿಗಳು ಭೇಟಿ ನೀಡಿ ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿದೆ.ಈ ಪ್ರಕರಣದಲ್ಲಿ ಆರು ಮಂದಿ ಒಳಗೊಂಡಿದ್ದು,ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top
%d bloggers like this: