ಜೂನ್ 11ರ ಸಂಜೆ 4 ರಿಂದ ಜೂನ್ 13ರ ರಾತ್ರಿ 12 ಗಂಟೆವರೆಗೆ ಮದ್ಯ ಮಾರಾಟ ನಿಷೇಧ!

ಹಾವೇರಿ: ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ-2022ರ ಮತದಾನ ಶಾಂತಿಯುತವಾಗಿ ನಡೆಸಬೇಕಾದ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಹಾಗೂ ಮದ್ಯಪಾನ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಸಂಜಯ ಶೆಟ್ಟೆಣ್ಣ ಆದೇಶ ಹೊರಡಿಸಿದ್ದಾರೆ.

 

ಜೂನ್ 11ರ ಸಂಜೆ 4 ರಿಂದ ಜೂನ್ 13ರ ರಾತ್ರಿ 12 ಗಂಟೆವರೆಗೆ ಮದ್ಯ ಮಾರಾಟ, ಶೇಖರಣೆ ಹಾಗೂ ಮದ್ಯಪಾನ ನಿಷೇಧಿಸಲಾಗಿದೆ. ಬಿಯರ್ ಬಾರಗಳು, ಕ್ಲಬ್‍ಗಳು ಮತ್ತು ಮದ್ಯದ ಡಿಪೋಗಳನ್ನು (ಕೆಎಸ್‍ಬಿಸಿಎಲ್) ಮುಚ್ಚಲು ಸಹ ಆದೇಶಿಸಲಾಗಿದ್ದು, ಈ ದಿವಸಗಳನ್ನು ಶುಷ್ಕ (ಡ್ರೈ ಡೇ) ದಿನಗಳೆಂದು ಘೋಷಿಸಲಾಗಿದೆ.

ಈ ನಿಯಮ ಎರಡು ಶಿಕ್ಷಕರ ಕ್ಷೇತ್ರ ಹಾಗೂ 2 ಪದವೀಧರರ ಕ್ಷೇತ್ರಗಳಿಗೆ ಘೋಷಣೆಯಾಗಿರುವಂತ ವಿಧಾನ ಪರಿಷತ್ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಜಾರಿಯಲ್ಲಿರಲಿದೆ. ಜೂನ್ 11ರ ಸಂಜೆ 4 ಗಂಟೆಯಿಂದ ಜೂನ್ 13ರವರ ಮಧ್ಯರಾತ್ರಿಯವರೆಗೆ ನಾಲ್ಕು ಪರಿಷತ್ ಚುನಾವಣಾ ಕ್ಷೇತ್ರಗಳಲ್ಲಿ ಮದ್ಯ ಮಾರಾಟ ಬಂದ್ ಆಗಲಿದೆ.

Leave A Reply

Your email address will not be published.