ಮನೆ ನಿರ್ಮಿಸುತ್ತಿರುವವರಿಗೆ ಗುಡ್ ನ್ಯೂಸ್‌ : ಕಬ್ಬಿಣದ ಬೆಲೆ ಟನ್‌ಗೆ 15,000 ರೂ.ವರೆಗೆ ಇಳಿಕೆ

Share the Article

ಒಂದು ಸ್ವಂತ ಮನೆ ಮಾಡಬೇಕು ಎನ್ನುವ ಕನಸು ಯಾರಿಗೆ ತಾನೇ ಇರಲ್ಲ ಹೇಳಿ ? ಎಲ್ಲರಿಗೂ ಇರುತ್ತೆ. ಒಂದು ಪುಟ್ಟ ಸೂರು ಮಾಡೋ‌ ಆಸೆ. ಅಂತಹ ಆಸೆಗೆ ಈಗ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಉಕ್ಕು ರಫ್ತಿನ ಮೇಲೆ ಕೇಂದ್ರ ಸರಕಾರ ಸುಂಕ ವಿಧಿಸಿದ ಹಿನ್ನೆಲೆಯಲ್ಲಿ ಕಳೆದ ಎರಡು ವಾರಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಉಕ್ಕಿನ ಬೆಲೆಗಳು ಶೇ. 10ರಷ್ಟು ಕಡಿಮೆಯಾಗಿವೆ. ಹೌದು, ಒಟ್ಟಾರೆ ಕಳೆದ ಎರಡು ತಿಂಗಳ ಅವಧಿಯಲ್ಲಿ ಪ್ರತಿ ಟನ್ ಉಕ್ಕಿನ ಬೆಲೆ 15,000 ರೂ.ವರೆಗೆ ಕುಸಿತ ಕಂಡಿದೆ.

ಮಾರುಕಟ್ಟೆ ಗುಪ್ತಚರ ಸಂಸ್ಥೆಯಾದ ಸ್ಟೀಲ್‌ಮಿಂಟ್ ಪ್ರಕಾರ ಮೇ 18ರಿಂದ ದೇಶೀಯ ಬೆಂಚ್‌ಮಾರ್ಕ್ ಹಾಟ್-ರೋಲ್ಡ್ ಕಾಯಿಲ್ (ಎಚ್‌ಆರ್‌ಸಿ) ಉಕ್ಕಿನ ಬೆಲೆಗಳು ಸುಮಾರು ಶೇ. 8 ಅಥವಾ ಟನ್‌ಗೆ 5,500 ರೂ. ಇಳಿಕೆಯಾಗಿವೆ. ಪ್ರತಿ ಟನ್ ಉಕ್ಕಿನ ಬೆಲೆ 63,800ರೂ.ಗೆ ಇಳಿದಿದೆ. ಇದೇ ಬೆಲೆ ಏಪ್ರಿಲ್ ಮೊದ ವಾರದಲ್ಲಿ ಗರಿಷ್ಠ 78,800 ರೂ.ಗೆ ಏರಿಕೆಯಾಗಿತ್ತು.

ಏಪ್ರಿಲ್ ಮೊದಲ ವಾರದಲ್ಲಿ ಎಚ್‌ಆರ್‌ಸಿ ಉಕ್ಕಿನ ದರ ಪ್ರತಿ ಟನ್‌ಗೆ 78,800 ರೂ. ತಲುಪಿತ್ತು. ನಂತರ ವಾರಕ್ಕೆ 2,000-3,000 ರೂ.ನಂತೆ ದರ ಇಳಿಯುತ್ತಿದೆ ಎಂದು ಸ್ಟೀಲ್‌ಮಿಂಟ್‌ನ ಸಂಶೋಧನಾ ವಿಭಾಗದ ಅಧಿಕಾರಿ ಕಲ್ಲೇಶ್ ಪಡಿಯಾರ್ ಹೇಳಿದ್ದಾರೆ. ರಫ್ತು ಸುಂಕ ವಿಧಿಸಿದ
ನಂತರ ಉಕ್ಕಿನ ಬೆಲೆ ಇಳಿಕೆ ಮತ್ತಷ್ಟು ತೀವ್ರಗೊಂಡಿದೆ

ಹಣದುಬ್ಬರವನ್ನು ತಡೆಯುವ ಪ್ರಯತ್ನದ ಭಾಗವಾಗಿ
ಸರ್ಕಾರವು ಮೇ 22ರಿಂದ ಜಾರಿಗೆ ಬರುವಂತೆ ಉಕ್ಕಿನ ಮೇಲೆ ಶೇ. 15ರಷ್ಟು ರಫ್ತು ಸುಂಕವನ್ನು ವಿಧಿಸಿತ್ತು. ಹಣದುಬ್ಬರವನ್ನು ತಡೆಯುವ ಪ್ರಯತ್ನದ ಭಾಗವಾಗಿ ಈ ನಿರ್ಬಂಧ ಹೇರಿತ್ತು. ಜತೆಗೆ ಉಕ್ಕಿನ ಉತ್ಪಾದನೆಯ ವೆಚ್ಚವನ್ನು ಕಡಿಮೆ ಮಾಡಲು ಕಲ್ಲಿದ್ದಲಿನಂತಹ ಪ್ರಮುಖ ಕಚ್ಚಾ ವಸ್ತುಗಳ ಮೇಲಿನ ಆಮದು ಸುಂಕವನ್ನೂ ಕಡಿತಗೊಳಿಸಿತ್ತು. ಇವೆಲ್ಲದರ ಪರಿಣಾಮ ಈಗ ದೇಶೀಯ ಮಾರುಕಟ್ಟೆಯಲ್ಲಿ ಕಬ್ಬಿಣದ ಬೆಲೆ ಇಳಿಕೆಯಾಗಿದೆ.

ವಿಶ್ವದಾದ್ಯಂತ ಕೋಕಿಂಗ್ ಕಲ್ಲಿದ್ದಲು ಬೆಲೆಯಲ್ಲಿನ ಇಳಿಕೆ ಮತ್ತು ಅಮೆರಿಕದ ಫೆಡರಲ್ ರಿಸರ್ವ್‌ನ ನೀತಿಗಳೂ ಬೆಲೆ ಕುಸಿತಕ್ಕೆ ಕಾರಣ ಎನ್ನಲಾಗಿದೆ.

Leave A Reply

Your email address will not be published.