ಮೆಸ್ಕಾಂ ಜ್ಯೂನಿಯರ್ ಪವರ್ ಮ್ಯಾನ್ ಅಂತಿಮ ಆಯ್ಕೆಪಟ್ಟಿ ಬಿಡುಗಡೆ | ನೇಮಕ ಆದೇಶ ಪಡೆಯಲು ಅಭ್ಯರ್ಥಿಗಳಿಗೆ ಆಹ್ವಾನ

ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ನಿಯಮಿತದ 2018-19ನೇ ಸಾಲಿನ ಜೂನಿಯರ್ ಪವರ್ ಮ್ಯಾನ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕ ಆದೇಶ ಪತ್ರಗಳನ್ನು ಮೆಸ್ಕಾಂ ವಿತರಿಸಲಿದ್ದು, ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಜೂನ್ 06, 2022 ರ ಮಧ್ಯಾಹ್ನ 03 ಗಂಟೆ ವೇಳೆಗೆ ನೇಮಕ ಆದೇಶ ಪತ್ರಗಳನ್ನು ವಿತರಿಸಲಿದ್ದು, ಪಡೆಯಲು ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿದೆ.

 

ನಿಗಮದ ಉದ್ಯೋಗ ಪ್ರಕಟಣೆ ಸಂಖ್ಯೆ ಕವಿಪ್ರನಿನಿ/ 2016/86473/2018-19 ದಿನಾಂಕ 25-02-2019 ಅನುಗುಣವಾಗಿ ಕಿರಿಯ ಪವರ್‌ಮ್ಯಾನ್ ಹುದ್ದೆಗೆ ಆಯ್ಕೆಯಾಗಿ, ದಿನಾಂಕ 26-05-2022 ರ ಅಂತ್ಯಕ್ಕೆ ಎಲ್ಲ ದಾಖಲಾತಿ ಪರಿಶೀಲನೆ ದೃಢೀಕರಣ ಪೂರ್ಣಗೊಂಡಿರುತ್ತದೆ. ನೇಮಕಾತಿ ಆದೇಶ ಪಡೆಯಲು ಅರ್ಹರಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ಈ ಕೆಳಗಿನ ವಿಳಾಸದಲ್ಲಿ ನೀಡಲಿದ್ದು, ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿದೆ ಎಂದು ಪ್ರಕಟಣೆ ಮೂಲಕ ಮೆಸ್ಕಾಂ ತಿಳಿಸಿದೆ.

ಆದೇಶ ಪತ್ರ ನೀಡುವ ಸ್ಥಳ : ಡಾ|| ಬಿ.ಆರ್. ಅಂಬೇಡ್ಕರ್ ಭವನ, ಮಿಲ್ಲರ್ಸ್ ರಸ್ತೆ, ವಸಂತನಗರ,
ಬೆಂಗಳೂರು : 560052.
ಆದೇಶ ಪತ್ರ ನೀಡುವ ದಿನಾಂಕ ಜೂನ್ 06, 2022 ರ ಮಧ್ಯಾಹ್ನ 03 ಗಂಟೆಗೆ.

ಅಭ್ಯರ್ಥಿಗಳು ನೇಮಕಾತಿ ಆದೇಶ ಪಡೆಯಲು ಆಧಾರ್ ಕಾರ್ಡ್ / ಚಾಲನಾ ಪರವಾನಗಿ / ಪಾಸ್‌ಪೋರ್ಟ್ / ಮತದಾರರ ಗುರುತಿನ ಚೀಟಿ | ಪ್ಯಾನ್‌ಕಾರ್ಡ್ ಇವುಗಳಲ್ಲಿ ಯಾವುದಾದರೂ ಒಂದು ಗುರುತಿನ ಚೀಟಿ ತರಲು ಸೂಚಿಸಲಾಗಿದೆ.

ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ಆದೇಶ ಪತ್ರ ಪಡೆಯಲು ಅರ್ಹರಾದ ಅಭ್ಯರ್ಥಿಗಳ ಲಿಸ್ಟ್ ಅನ್ನು ಈ ಕೆಳಗಿನಂತೆ ಚೆಕ್ ಮಾಡಬಹುದು. ಒಟ್ಟು 625 ಅಭ್ಯರ್ಥಿಗಳ ಲಿಸ್ಟ್ ಅನ್ನು ಬಿಡುಗಡೆ ಮಾಡಲಾಗಿದೆ.

Leave A Reply

Your email address will not be published.