ಕೇಂದ್ರ ಸರ್ಕಾರದಿಂದ EPF ಚಂದಾದರರಿಗೆ ಮಹತ್ವದ ಮಾಹಿತಿ
ಪಿಎಫ್ ಖಾತೆದಾರರಿಗೆ ಮಹತ್ವದ ಮಾಹಿತಿ ಇದ್ದು, ಹಣದುಬ್ಬರದ ಕೇಂದ್ರ ಸರ್ಕಾರ ವೇತನ ಪಡೆಯುವವರ ಬಡ್ಡಿದರಕ್ಕೆ ಕತ್ತರಿ ಹಾಕಿದೆ. 2021-22 ಕ್ಕೆ ಉದ್ಯೋಗಿ ಭವಿಷ್ಯ ನಿಧಿ ಅಥವಾ ಇಪಿಎಫ್ ಠೇವಣಿಗಳ ಮೇಲೆ ಶೇ. 8.1 ರಷ್ಟು ಬಡ್ಡಿ ದರ ನೀಡಲು ಕೇಂದ್ರ ಸರ್ಕಾರ ಅನುಮೋದಿಸಿದೆ.
ಗುವಾಹಟಿಯಲ್ಲಿ ಕಾರ್ಮಿಕ ಸಚಿವ ಭೂಪೇಂದರ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ನಡೆದ EPFO ನ ಕೇಂದ್ರೀಯ ಮಂಡಳಿಯ ಟ್ರಸ್ಟಿಗಳ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಬಡ್ಡಿ ದರವನ್ನು ಶೇ 8.5 ರಿಂದ 8.1 ಕ್ಕೆ ಇಳಿಸಲು ಪ್ರಸ್ತಾಪಿಸಿದೆ.
ಶುಕ್ರವಾರ ಹೊರಡಿಸಿದ ಇಪಿಎಫ್‌ಒ ಕಚೇರಿ ಆದೇಶದ ಪ್ರಕಾರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಇಪಿಎಫ್ ಯೋಜನೆಯ ಪ್ರತಿ ಸದಸ್ಯರಿಗೆ 2021-22 ಕ್ಕೆ 8.1 ಶೇಕಡಾ ಬಡ್ಡಿದರವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರದ ಅನುಮೋದನೆಯನ್ನು ರವಾನಿಸಿದ್ದು, ಈಗಾಗಲೇ ಕಾರ್ಮಿಕ ಸಚಿವಾಲಯವು ತನ್ನ ಒಪ್ಪಿಗೆಗಾಗಿ ಹಣಕಾಸು ಸಚಿವಾಲಯಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದೆ ಎನ್ನಲಾಗಿದೆ. ಈಗ, ಸರ್ಕಾರವು ಬಡ್ಡಿದರವನ್ನು ಅನುಮೋದಿಸಿದ ನಂತರ, ಇಪಿಎಫ್‌ಒ ಆರ್ಥಿಕ ವರ್ಷದ ಸ್ಥಿರ ಬಡ್ಡಿದರವನ್ನು ಇಪಿಎಫ್ ಖಾತೆಗೆ ಜಮಾ ಮಾಡಲು ಪ್ರಾರಂಭಿಸುತ್ತದೆ.
ಕಳೆದ ನಾಲ್ಕು ವರ್ಷಗಳಲ್ಲಿ EPFO ಮೇಲಿನ ಬಡ್ಡಿ ದರವನ್ನು ಹಲವಾರು ಬಾರಿ ಕಡಿತಗೊಳಿಸಲಾಗಿದೆ. 2019-20 ರಲ್ಲಿ, ಭವಿಷ್ಯ ನಿಧಿ ಠೇವಣಿ ಮೇಲಿನ ಬಡ್ಡಿ ದರವು ಶೇಕಡಾ 8.5 ರಷ್ಟಿದ್ದರೆ, 2018-19 ರಲ್ಲಿ ಇದು ಶೇಕಡಾ 8.65 ಮತ್ತು 2017-18 ರಲ್ಲಿ ಶೇಕಡಾ 8.55 ರಷ್ಟಿತ್ತು. ಇಪಿಎಫ್ ದರವು 2011-12ರಲ್ಲಿ ಕೊನೆಯ ಬಾರಿಗೆ 8.1 ಪ್ರತಿಶತದಷ್ಟು ಹತ್ತಿರದಲ್ಲಿದ್ದಾಗ ನಿವೃತ್ತಿ ನಿಧಿ ಸಂಸ್ಥೆಯು ತನ್ನ ಚಂದಾದಾರರಿಗೆ ಶೇಕಡಾ 8.25-8.5 ದರವನ್ನು ಪಾವತಿಸಿತು.
ಇದು ಕಳೆದ ನಾಲ್ಕು ದಶಕಗಳಲ್ಲಿ ಠೇವಣಿಗಳ ಮೇಲಿನ ಅತ್ಯಂತ ಕಡಿಮೆ ಬಡ್ಡಿ ದರವಾಗಿದೆ ಮತ್ತು 60 ಮಿಲಿಯನ್ ಚಂದಾದಾರರ ಮೇಲೆ ಪರಿಣಾಮ ಬೀರಲಿದೆ.