ಹೊಸದಾಗಿ ಬಂದಿದೆ 4ಜಿ ಸ್ಮಾರ್ಟ್ ವಿದ್ಯುತ್ ಮೀಟರ್ !! | ಇದರ ಕಾರ್ಯನಿರ್ವಹಣೆ ಹೇಗಿದೆ ಗೊತ್ತಾ !??

ಈಗಿನ ಕಾಲದಲ್ಲಿ ವಿದ್ಯುತ್ ಇಲ್ಲದ ಮನೆ ಇಲ್ಲ. ಎಲ್ಲಾ ಮನೆಗಳಲ್ಲೂ ವಿದ್ಯುತ್ ಸಂಪರ್ಕ ಇದ್ದೇ ಇದೆ. ಅಂತೆಯೇ ಈಗ ವಿದ್ಯುತ್ ಮೀಟರ್‌ಗಳು ಇನ್ನೂ ಹೆಚ್ಚು ಸುಧಾರಿತವಾಗಲಿವೆ. ಹೌದು. ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುವ 4ಜಿ ತಂತ್ರಜ್ಞಾನ ಹೊಂದಿರುವ ಸ್ಮಾರ್ಟ್ ವಿದ್ಯುತ್ ಮೀಟರ್ ಗಳು ಬಂದಿವೆ.

4G ಮೀಟರ್‌ಗಳು ಈಗ ಬಳಸುತ್ತಿರುವ ಮೀಟರ್‌ಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತವೆ. ಕೆಲವು ರಾಜ್ಯಗಳು ಈಗಾಗಲೇ ಈ ಮೀಟರ್ ಅನ್ನು ಅಳವಡಿಸುವ ತಯಾರಿ ಪೂರ್ಣಗೊಳಿಸಿವೆ. ಜುಲೈ ತಿಂಗಳಿನಿಂದ ಉತ್ತರ ಪ್ರದೇಶದಲ್ಲಿ 4ಜಿ ತಂತ್ರಜ್ಞಾನ ಹೊಂದಿರುವ ಸ್ಮಾರ್ಟ್ ವಿದ್ಯುತ್ ಮೀಟರ್‌ಗಳನ್ನು ಅಳವಡಿಸಲಾಗುತ್ತದೆ.

ಹಳೆಯ ವಿದ್ಯುತ್ ಮೀಟರ್‌ಗಳನ್ನು ಯಾವ ಮನೆಗೆ ಹಾಕಲಾಗಿದೆಯೋ ಆ ಮೀಟರ್ ಗಳನ್ನೂ ಹೊಸ 4G ಮೀಟರ್‌ಗಳೊಂದಿಗೆ ಅಪ್ಡೇಟ್ ಮಾಡಲಾಗುವುದು. ಈಗಿರುವ ಮೀಟರ್ ಅಥವಾ ಹಳೆಯ ತಂತ್ರಜ್ಞಾನ ಮೀಟರ್ ಗಳನ್ನು ಸ್ಮಾರ್ಟ್ ಮೀಟರ್ ಗಳನ್ನಾಗಿ ಪರಿವರ್ತಿಸಲಾಗುವುದು.

ಹೇಗೆ ಕಾರ್ಯ ನಿರ್ವಹಿಸುತ್ತದೆ 4G ಸ್ಮಾರ್ಟ್ ಪ್ರಿಪೇಯ್ಡ್ ಮೀಟರ್ ?

4G ಪ್ರಿಪೇಯ್ಡ್ ಮೀಟರ್ ನಿಖರವಾಗಿ SIM ಕಾರ್ಡ್‌ನ ಪೋಸ್ಟ್‌ಪೇಯ್ಡ್ ಯೋಜನೆಯಂತೆಯೇ ಕಾರ್ಯನಿರ್ವಹಿಸುತ್ತದೆ. 4G ಮೀಟರ್ ಅನ್ನು ಅಳವಡಿಸಿದ ನಂತರ, ನಿಗದಿತ ಸಾಮರ್ಥ್ಯದ ಪ್ಲಾನ್ ರೀಚಾರ್ಜ್ ಮಾಡಬೇಕಾಗುತ್ತದೆ. ಇದರ ಆಧಾರದ ಮೇಲೆ ನಿಗದಿತ ಅವಧಿಗೆ ಸ್ಥಿರ ಯೂನಿಟ್ ಗಳನ್ನು ಪಡೆಯಬಹುದು. ಈ ಮೂಲಕ ವಿದ್ಯುತ್ ಬಿಲ್ ಕಟ್ಟುವ ಜಂಜಾಟದಿಂದ ಮುಕ್ತಿ ಸಿಗಲಿದೆ.

4G ಮೀಟರ್ ಪ್ರಯೋಜನಗಳು :

*4G ಮೀಟರ್‌ಗಳನ್ನು ಅಳವಡಿಸಸಿದ ನಂತರ ವಿದ್ಯುತ್ ಬಿಲ್ ಅನ್ನು ನಿಗದಿತ ಸಮಯಕ್ಕೆ ಪಾವತಿಸಬೇಕಾಗುತ್ತದೆ.
*ಗ್ರಾಹಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ರೀಚಾರ್ಜ್ ಮಾಡಲು ಸಾಧ್ಯವಾಗುತ್ತದೆ.
*ವಿದ್ಯುತ್ ಕಳ್ಳತನದ ಸಮಸ್ಯೆಗೆ ಕಡಿವಾಣ ಬೀಳಲಿದೆ.
*ವಿದ್ಯುತ್ ಮೀಟರ್ ಟ್ಯಾಂಪರಿಂಗ್ ಗೆ ಅವಕಾಶ ಇರುವುದಿಲ್ಲ.

ಗ್ರಾಹಕ ಕೌನ್ಸಿಲ್‌ನ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಯುಪಿ ಪವರ್ ಕಾರ್ಪೊರೇಷನ್ ಮತ್ತು ಕೇಂದ್ರ ವಿದ್ಯುತ್ ಸಚಿವಾಲಯವು ಸ್ಮಾರ್ಟ್ 4ಜಿ ಪ್ರಿಪೇಯ್ಡ್ ಮೀಟರ್‌ಗಳನ್ನು ಸ್ಥಾಪಿಸಲು ಹಸಿರು ನಿಶಾನೆ ತೋರಿದೆ. ಮುಂದಿನ ತಿಂಗಳಿನಿಂದ ಉತ್ತರ ಪ್ರದೇಶದಲ್ಲಿ 4ಜಿ ಮೀಟರ್‌ಗಳನ್ನು ಅಳವಡಿಸಲಾಗುವುದು. ನಂತರ ಈ ವಿದ್ಯುತ್ ಮೀಟರ್ ಗಳು ದೇಶದ ವಿವಿಧ ರಾಜ್ಯಗಳಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ.

Leave A Reply

Your email address will not be published.