ಒಂದಲ್ಲ ಎರಡಲ್ಲ ಬರೋಬ್ಬರಿ 11 ಕೋಟಿ ಕೊಟ್ಟು ಖರೀದಿ ಮಾಡಿದ ಮನೆ…ಆದರೆ ಯಾರೂ ವಾಸ ಮಾಡಲ್ಲ..!

ಎಲ್ಲರಿಗೂ ಮನೆ ಖರೀದಿ ಮಾಡೋದೋ ಅಥವಾ ಕಟ್ಟೋ ಆಸೆಯಂತೂ ಖಂಡಿತ ಇರುತ್ತೆ. ಹಾಗಾಗಿ ಎಲ್ಲಾ ತಿಳ್ಕೊಂಡು ಅನಂತರ ಮನೆ ಖರೀದಿ ಮಾಡುತ್ತಾರೆ. ಆದರೂ ಕೆಲವರು ಇರುತ್ತಾರೆ ಆ ಮನೆ ಸರಿಯಿಲ್ಲ, ದೆವ್ವದ ಕಾಟ ಇದೆ ಅಂದರೂ ಮನೆ ಖರೀದಿ ಮಾಡುತ್ತಾರಾ ? ಇಲ್ಲ ತಾನೇ ?

ಅಲ್ಲ ಅದೊಂದು ದೆವ್ವದ ಮನೆ ಅಂತಾ ಗೊತ್ತಾದ್ರೆ ಆ ಮನೆ ಸುತ್ತಮುತ್ತನೂ ಯಾರೂ ಹೋಗಲ್ಲ. ಇನ್ನು ಈ ದೆವ್ವದ ಮನೆಯನ್ನು ಖರೀದಿಸುವ ಕೆಲಸವನ್ನು ಯಾರು ಮಾಡಿಯಾರು ಹೇಳಿ ? ಇನ್ನೂ ವಿಶೇಷವೆಂದ್ರೆ ಕೋಟ್ಯಾಂತರ ರೂಪಾಯಿ ಕೊಟ್ಟು ಮನೆ ಖರೀದಿ ಮಾಡೋದು ಅಂದ್ರೆ ಸುಮ್ಮನೇನಾ?

ಆದರೆ, ಜಗತ್ತಿನಾದ್ಯಂತ ದೆವ್ವದ ಮನೆ ಎಂದೇ ಪ್ರಸಿದ್ಧಿಯಾಗಿರುವ ಮನೆಯನ್ನು ಒಬ್ಬರು ಖರೀದಿ ಮಾಡಿದ್ದಾರೆ. ಹೌದು…. ಅಚ್ಚರಿಯಾದ್ರೂ ಇದು ಸತ್ಯ. ಕೋಟ್ಯಾಂತರ ರೂಪಾಯಿ ನೀಡಿ ಮನೆ ಖರೀದಿ ಮಾಡಿದ ವ್ಯಕ್ತಿ ಆ ಮನೆಯಲ್ಲಿ ಇರೋದಿಲ್ಲ ಎನ್ನುವುದು ನಿಮಗೆ ತಿಳಿದಿರಲಿ. ಆ ಮನೆ ಬಗ್ಗೆ ನಾವು ಒಂದಿಷ್ಟು ಮಾಹಿತಿ ನಿಮಗಾಗಿ.

ಸಾಧಾರಣವಾಗಿ ದೆವ್ವದ ಸಿನಿಮಾ ಇಷ್ಟ ಪಡುವವರಿಗೆ ಒಂದು ಸಿನಿಮಾ ಚೆನ್ನಾಗಿ ನೆನಪಿರಬಹುದು. ಅದು 2013ರಲ್ಲಿ ಬಂದಿತ್ತು. ಹಾರರ್ ಚಿತ್ರ. ಸಾಕಷ್ಟು ಮಂದಿ ಚಿತ್ರವನ್ನು ಮೆಚ್ಚಿಕೊಂಡಿದ್ದರು. ಆ ಸಿನಿಮಾದ ಹೆಸರು ದಿ ಕಂಜ್ಯೂರಿಂಗ್. ಆ ಚಿತ್ರ ಸಾಕಷ್ಟು ಗಳಿಕೆ ಕೂಡ ಕಂಡಿತ್ತು. ಈ ಚಿತ್ರದ ಬಗ್ಗೆ ಅನೇಕರು ಸವಾಲು ಕೂಡ ಹಾಕಿದ್ದರು. ಚಿತ್ರವನ್ನು ಸಿನಿಮಾ ಹಾಲ್ ನಲ್ಲಿ ಒಬ್ಬರೇ ಕುಳಿತು ನೋಡಿದ್ರೆ ಬಹುಮಾನ ನೀಡಲಾಗುತ್ತದೆ ಎಂಬ ಷರತ್ತು ಕೂಡ ಇತ್ತು.

ಈ ಹಾರರ್ ಚಿತ್ರದಲ್ಲಿ ತೋರಿಸಿರುವ ಮನೆ 286 ವರ್ಷ ಹಳೆಯದಾದ ಫಾರ್ಮ್ ಹೌಸ್. ಈಗ ಆ ಮನೆಯನ್ನು ಮಾರಾಟ ಮಾಡಲಾಗಿದೆ. ಹೌದು, ಇಷ್ಟೇ ಅಲ್ಲ, ಶೇಕಡಾ 27ರಷ್ಟು ಹೆಚ್ಚು ಬೆಲೆಗೆ ಈ ಮನೆ ಮಾರಾಟವಾಗಿದೆ.

ಅಮೇರಿಕಾದ ರೋಡ್ ಐಲ್ಯಾಂಡ್‌ನಲ್ಲಿರುವ ಈ ಫಾರ್ಮ್ ಹೌಸ್ ಅನ್ನು ಪೀಪಲ್ ಹಾಂಟೆಡ್ ಸೈಟ್ ಎಂದೂ ಕರೆಯುತ್ತಾರೆ. ಈ ಮನೆಯನ್ನು 1736 ರಲ್ಲಿ ನಿರ್ಮಿಸಲಾಗಿದೆ. 1971 ರಲ್ಲಿ ಈ ಮನೆಯಲ್ಲಿ ಒಂದು ಕುಟುಂಬ ವಾಸಿಸುತ್ತಿತ್ತು. ಆ ಕುಟುಂಬಸ್ಥರು ಒಂದು ಕಥೆಯನ್ನು ಹೇಳಿದ್ದರು. ಅದನ್ನು ಆಧರಿಸಿಯೇ “ದಿ ಕಾಂಜ್ಯೂರಿಂಗ್” ಸಿನಿಮಾ ಸಿದ್ಧವಾಗಿತ್ತಂತೆ.

ಅಷ್ಟಕ್ಕೂ ಈ ಮನೆ ಮಾರಾಟವಾದ ಬೆಲೆ ಎಷ್ಟು ಗೊತ್ತಾ? ಈ ಫಾರ್ಮ್ ಹೌಸ್ ಒಂದೋ ಎರಡೋ ಕೋಟಿಗೆ ಅಲ್ಲ ಬರೋಬ್ಬರಿ 11 ಕೋಟಿಗೆ ಮಾರಾಟವಾಗಿದೆ.

2009 ರಲ್ಲಿ ಪ್ಯಾರಾನಾರ್ಮಲ್ ಆಕ್ಟಿವೇಟರ್‌ಗಳಾದ ಜೇನ್ ಮತ್ತು ಕೋರೆ ಹೈಸ್ಟೆನ್ ಇದನ್ನು 4,39,000 ಡಾಲರ್ ಗೆ ಖರೀದಿಸಿದ್ದರು. ಈಗ ಅದನ್ನು ಮಾರಾಟ ಮಾಡಿದ್ದಾರೆ. ಅವರು ಮನೆಯ ಮೂಲ ಬೆಲೆಯನ್ನು 1.2 ಮಿಲಿಯನ್ ಡಾಲರ್ ಎಂದು ನಿಗದಿ ಮಾಡಿದ್ದರು. ಆದರೆ ಈ ಮನೆ 1.5 ಮಿಲಿಯನ್ ಡಾಲರ್ ಗೆ ಮಾರಾಟವಾಗಿದೆ. ಅಂದರೆ ಸುಮಾರು 11 ಕೋಟಿ ರೂಪಾಯಿಗೆ ಮನೆ ಮಾರಾಟವಾಗಿದೆ. ಈ ಫಾರ್ಮ್ ಹೌಸ್ ನ್ನು ಖರೀದಿ ಮಾಡಿದ ವ್ಯಕ್ತಿ ಬೋಸ್ಟನ್ ಮೂಲದ ರಿಯಲ್ ಎಸ್ಟೇಟ್ ಡೆವಲಪರ್ ಜಾಕ್ವೆಲಿನ್ ನುನೆಜ್.

1971 ರಿಂದ 1980 ರವರೆಗೆ ಈ ರೋಡ್ ಐಲೆಂಡ್ ಮನೆಯಲ್ಲಿ ಆಂಡ್ರಿಯಾ ಪೆರಾನ್ ಎಂಬುವವರಜ ವಾಸವಾಗಿದ್ದರಂತೆ. ಆ ಸಮಯದಲ್ಲಿ ಅವರು ಈ ಮನೆ ಕುರಿತು ಅಮೆರಿಕದ ಪತ್ರಿಕೆ ದಿ ವಾಲ್ ಸ್ಟ್ರೀಟ್ ಜರ್ನಲ್‌ಗೆ ಸಂದರ್ಶನಗಳನ್ನು ನೀಡಿದ್ದರು. ಆ ಮನೆಯಲ್ಲಿ ಆದ ತಮ್ಮ ಸ್ವಂತ ಅನುಭವವನ್ನು ಅವರು ಹಂಚಿಕೊಂಡಿದ್ದರು. ಆ ಮನೆಯಲ್ಲಿ ತುಂಬಾ ಭಯಾನಕ ಮತ್ತು ಕೆಟ್ಟ ಅನುಭವವಾಗಿತ್ತು ಎಂದು ಅವರು ಹೇಳಿದ್ದರು. ಮಾಹಿತಿ ಪ್ರಕಾರ, ಮನೆ ಖರೀದಿ ಮಾಡಿರುವ ಜಾಕ್ವೆಲಿನ್ ಕೂಡಾ ಆ ಮನೆಯಲ್ಲಿ ವಾಸ ಮಾಡುತ್ತಿಲ್ಲವಂತೆ.

Leave A Reply

Your email address will not be published.