ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯ ಕೀ ಉತ್ತರ ಪ್ರಕಟ

ಬೆಂಗಳೂರು: ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯು ಕಳೆದ ಮೇ.26 ಮತ್ತು 27ರಂದು ನಡೆದಿತ್ತು, ಇದೀಗ ಕೀ ಉತ್ತರವನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮಾಹಿತಿ ಬಿಡುಗಡೆ ಮಾಡಿದ್ದು, 2022ರ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಪರೀಕ್ಷೆಯ ಪತ್ರಿಕೆ-1 ಮತ್ತು ಪತ್ರಿಕೆ-2ರ ಕೀ ಉತ್ತರಗಳನ್ನು ಇಲಾಖಾ ವೆಬ್ ಸೈಟ್ ï http://schooleducation.kar.nic.in ನಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಿದೆ.

15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಗಾಗಿ ನಡೆದಂತ ಸ್ಪರ್ಧಾತ್ಮಕ ಪರೀಕ್ಷೆಯ ಕೀ ಉತ್ತರಗಳಿಗೆ ಆಕ್ಷೇಪಣೆಗಳನ್ನು ದಿನಾಂಕ 03-06-2022 ರಿಂದ 10-06-2022ರೊಳಗಾಗಿ ಸಲ್ಲಿಸುವಂತೆ ತಿಳಿಸಿದೆ. ಈ ದಿನಾಂಕದ ನಂತರ ಬಂದಂತ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ.

ಕೀ ಉತ್ತರಗಳಿಗೆ ಅಭ್ಯರ್ಥಿಗಳು ï http://schooleducation.kar.nic.in ಲಿಂಕ್ , ಆನ್ ಲೈನ್ ನಲ್ಲಿ ಮಾತ್ರವೇ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದರ ಹೊರತಾಗಿ ಆಫ್ ಲೈನ್ ಮೂಲಕ ಆಕ್ಷೇಪಣೆ ಸಲ್ಲಿಸಲು ಅವಕಾಶವಿಲ್ಲ. ಅಲ್ಲದೆ, ಅಭ್ಯರ್ಥಿಯು ಸಲ್ಲಿಸುವ ಪ್ರತಿ ಆಕ್ಷೇಪಣೆಗೆ ಪೂರಕ ದಾಖಲೆಗಳೊಂದಿಗೆ ರೂ.50 ಸಂಸ್ಕರಣಾ ಶುಲ್ಕವಾಗಿ ಪಾವತಿಸುವುದು ಕಡ್ಡಾಯವಾಗಿದೆ. ನಿಗದಿತ ಶುಲ್ಕ ಮತ್ತು ಸೂಕ್ತ ದಾಖಲೆಯನ್ನು ಸಲ್ಲಿಸಿದ್ದಲ್ಲಿ ಮಾತ್ರ ಆಕ್ಷೇಪಣೆಯನ್ನು ಸ್ವೀಕರಿಸಲಾಗುವುದು ಎಂದು ತಿಳಿಸಿದೆ.

ಕೀ ಉತ್ತರ ಡೌನ್ ಲೋಡ್ ಮಾಡುವ ವಿಧಾನ:

ಶಿಕ್ಷಕರ ನೇಮಕಾತಿಗೆ ಪರೀಕ್ಷೆ ಬರೆದಿದ್ದಂತ ಅಭ್ಯರ್ಥಿಗಳು ತಮ್ಮ ವರ್ಷನ್ ಕೋಡ್ ವಾರು ಕೀ ಉತ್ತರಗಳನ್ನು http://schooleducation.kar.nic.in ಈ ಲಿಂಕ್ ಒತ್ತಿ ಜಾಲತಾಣಕ್ಕೆ ಭೇಟಿ ನೀಡಬೇಕು. ಈ ಬಳಿಕ ಅಭ್ಯರ್ಥಿಗಳು ತೆರೆದುಕೊಳ್ಳುವಂತ ಮುಖ ಪುಟದಲ್ಲಿ GPTR-2022 Online objection form for the Key Answers ಎಂಬಲ್ಲಿ , ಸ್ಪರ್ಧಾತ್ಮಕ ಪರೀಕ್ಷೆಯ ಕೀ ಉತ್ತರಗಳನ್ನು ಡೌನ್ ಲೋಡ್ ಮಾಡಬಹುದಾಗಿದೆ.

Leave A Reply

Your email address will not be published.