ತಲೆಗೆ ಹಾಕುವ ಕ್ಲಿಪ್ ನುಂಗಿದ ಆರು ವರ್ಷದ ಬಾಲಕಿ!
ಮಕ್ಕಳು ಆಟವಾಡುತ್ತಿರುವಾಗ ಕೈಯಲ್ಲಿರುವ ವಸ್ತುಗಳನ್ನು ಬಾಯಿಗೆ ಹಾಕಿ ಕೊಳ್ಳುವಂತಹ ಅಭ್ಯಾಸ ಇರುತ್ತದೆ. ಅದೆಷ್ಟೋ ಮಕ್ಕಳು ನಾಣ್ಯ, ಬಳಪ ಹೀಗೆ ಅನೇಕ ವಸ್ತುಗಳನ್ನು ನುಂಗಿದಂತಹ ಪ್ರಕರಣಗಳು ವರದಿಯಾಗಿದೆ. ಇದೀಗ ಇಂತಹುದೇ ಒಂದು ಘಟನೆ ಪುಣೆಯ ಪಾಶನ್ ನಲ್ಲಿ ನಡೆದಿದ್ದು, 6 ವರ್ಷದ ಬಾಲಕಿಯೋರ್ವಳು ತಲೆಗೆ ಹಾಕುವ ಕ್ಲಿಪ್ ಅನ್ನು ನುಂಗಿದ್ದಾಳೆ.
ಕ್ಲಿಪ್ ನುಂಗಿರುವಾಕೆ 6 ವರ್ಷದ ಸ್ವಾತಿ ಎಂಬ ಬಾಲಕಿ. ಈಕೆ ಮೇ 19ರಂದು ತನ್ನ ಹಲ್ಲಿನಲ್ಲಿ ಸಿಲುಕಿಕೊಂಡಿದ್ದ ಆಹಾರವನ್ನು ಹೊರತೆಗೆಯಲು ಕ್ಲಿಪ್ ನ್ನು ಬಳಸಿ ಯತ್ನಿಸುತ್ತಿದ್ದಳು. ಈ ವೇಳೆ ಆಕಸ್ಮಿಕವಾಗಿ ಆಕೆಯ ಹೊಟ್ಟೆಯೊಳಗೆ ಕ್ಲಿಪ್ ಹೋಗಿದ್ದು, ಒಂದು ದಿನದ ಬಳಿಕ
ಹೊಟ್ಟೆನೋವು ಕಾಣಿಸಿಕೊಂಡಾಗ ಆಸ್ಪತ್ರೆಗೆ ದಾಖಲಾಗಿದ್ದಾಳೆ.
ಗುರುವಾರ ಬೆಳಗ್ಗೆ ಪುಣೆಯ ಸಾಸೂನ್ ಆಸ್ಪತ್ರೆಯ
ವೈದ್ಯರು ಸ್ವಾತಿಯ ಹೊಟ್ಟೆಯೊಳಗಿನ ಕೂದಲಿನ ಕ್ಲಿಪ್
ಅನ್ನು ಯಶಸ್ವಿಯಾಗಿ ತೆಗೆಯುವಲ್ಲಿ ಯಶಸ್ವಿಯಾಗಿಸಿದ್ದು, ಸ್ಯಾಸೂನ್ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಪದ್ಮಾಸೇನ್ ರಣಬಾಗ್ಗೆ ಅವರು ಶಸ್ತ್ರಚಿಕಿತ್ಸೆ ನಡೆಸಿದ್ದರು.
ಎಲ್ಲಾ ಮಕ್ಕಳಿಗೂ ಹೆತ್ತವರಿಗೂ ಇದೊಂದು
ಎಚ್ಚರಿಕೆಯಾಗಿದ್ದು, ಮಕ್ಕಳ ಕೈಯಲ್ಲಿ ಇರುವ ವಸ್ತುಗಳನ್ನು
ಬಾಯಿಗೆ ಹಾಕದಂತೆ ಎಚ್ಚರವಹಿಸಬೇಕು ಎಂದು
ವೈದ್ಯರು ಎಚ್ಚರಿಸಿದ್ದಾರೆ.