ಮದುವೆಯಾಗಿ 6 ವರ್ಷ ಕಳೆದರೂ, ಫಸ್ಟ್ ನೈಟ್ ಆಗಿಲ್ಲ | 2 ತಿಂಗಳ ಒಳಗಾಗಿ ಗಂಡನ ಮನೆಯನ್ನು ಖಾಲಿ ಮಾಡಿ ಎಂದ ಕೋರ್ಟ್‌!

ಲೋಕಸಭಾ ಸಂಸದ ಅನುಭವ್ ಮೊಹಾಂತಿ ಹಾಗೂ ಒಡಿಶಾದ ಪ್ರಖ್ಯಾತ ನಟಿ ವರ್ಷಾ ಪ್ರಿಯದರ್ಶಿನಿ ಕೌಟುಂಬಿಕ ಜಗಳ ಈಗ ಜಗಜ್ಜಾಹೀರಾಗಿದೆ. ಇದು ಎಲ್ಲರಿಗೂ ತಿಳಿದಿರುವ ವಿಷಯ.

 

ಇದರ ಬೆನ್ನಲ್ಲಿಯೇ ಕೋರ್ಟ್ ನಲ್ಲಿ ಅನುಭವ್ ಮೊಹಾಂತಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಒಡಿಶಾದ ಕಟಕ್ ಜಿಲ್ಲೆಯ ಉಪ-ವಿಭಾಗ ಮ್ಯಾಜಿಸ್ಟ್ರೇಟ್ (SDJM) ನ್ಯಾಯಾಲಯ ಗುರುವಾರ ತನ್ನ ತೀರ್ಪು ನೀಡಿದೆ.

ಮುಂದಿನ ಎರಡು ತಿಂಗಳ ಒಳಗಾಗಿ ವರ್ಷಾ ಪ್ರಿಯದರ್ಶಿನಿ ತನ್ನ ಗಂಡನ ಮನೆಯನ್ನು ಖಾಲಿ ಮಾಡಬೇಕು ಎಂದು ತೀರ್ಪು ನೀಡಿದ್ದಲ್ಲದೆ, ಪ್ರತಿ ತಿಂಗಳ 10ನೇ ತಾರೀಕಿನಂದು ವರ್ಷಾ ಪ್ರಿಯದರ್ಶಿನಿ ಅವರ ವಾಸದ ಖರ್ಚಿಗಾಗಿ ಅನುಭವ್ ಮೊಹಾಂತಿ 30 ಸಾವಿರ ರೂಪಾಯಿ ನೀಡಬೇಕು ಎಂದು ತಿಳಿಸಿದೆ. ಅದಲ್ಲದೆ, ಇಬ್ಬರ ಸಂಸಾರದ ಕುರಿತಾಗಿ ಯಾವುದೇ ಚಿತ್ರ ಹಾಗೂ ವಿಡಿಯೋಗಳನ್ನು ಇವರಿಬ್ಬರಲ್ಲಿ ಯಾರೂ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಬಾರದು ಎಂದು ಸೂಚನೆ ನೀಡಿದೆ.

ಎರಡು ತಿಂಗಳ ಒಳಗಾಗಿ ಹಣಕಾಸು ಪರಿಹಾರ ದೊರೆತ ಕೂಡಲೇ ಅಭಿನವ್ ಅವರ ನಿವಾಸವನ್ನು ವರ್ಷಾ ತೊರೆಯಬೇಕು ಎಂದು ಕೋರ್ಟ್ ತಿಳಿಸಿದೆ. ನಾನು ವರ್ಷಾಗೆ ಹಣಕಾಸು ವ್ಯವಸ್ಥೆ ಮಾಡಲು ಸಿದ್ಧವಿದ್ದೇನೆ. ಆದರೆ ಆಕೆ ಕೂಡಲೇ ಮನೆಯನ್ನು ತೊರೆಯಬೇಕು ಎಂದು ಅನುಭವ್ ಮೊದಲೇ ಕೋರ್ಟ್‌ ಗೆ ಅರ್ಜಿ ಸಲ್ಲಿಸಿದ್ದರು. ಅದರ ಜೊತೆಗೇ ವರ್ಷಾ ಅವರ ಆದಾಯ ಮೂಲಗಳು ಯಾವುದೆಲ್ಲ ಎನ್ನುವ ಬಗ್ಗೆಯೂ ತಿಳಿಸಬೇಕು ಎಂದು ಅರ್ಜಿ ಹಾಕಿದ್ದರು. ಇದರಿಂದಾಗಿ ಆಕೆಗೆ ಹಣಕಾಸು ನೆರವು ನೀಡುವ ಬಗ್ಗೆ ನನಗೆ ಸೂಕ್ತ ಮಾಹಿತಿ ಸಿಗಲಿದೆ ಎಂದಿದ್ದರು. ಕಳೆದ ವಾರ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ್ದ ಕೋರ್ಟ್, ಗುರುವಾರ ತೀರ್ಪು ಪ್ರಕಟ ಮಾಡಿದೆ.

ಏನಿದು ಪ್ರಕರಣ: ಒಡಿಯಾ ಚಿತ್ರಗಳಲ್ಲಿ ದೊಡ್ಡ ಮಟ್ಟದ ಹೆಸರು ಗಳಿಸಿದ ಬಳಿಕ ಅನುಭವ್ ಮೊಹಾಂತಿ ರಾಜ್ಯ ಪ್ರಖ್ಯಾತ ನಟಿ ವರ್ಷಾ ಪ್ರಿಯದರ್ಶಿನಿಯನ್ನು 2014ರಲ್ಲಿ ವಿವಾಹವಾಗಿದ್ದರು. ಆದರೆ, ಮದುವೆಯಾದ ಬಳಿಕ ಇಬ್ಬರ ನಡುವೆ ಮನಸ್ತಾಪ ಆರಂಭವಾಗಿತ್ತು. 2016ರಲ್ಲಿ ಅನುಭವ್ ಮೊಹಾಂತಿ ಪತ್ನಿಯ ವಿರುದ್ಧ ಮೊದಲ ಬಾರಿಗೆ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಮದುವೆಯಾಗಿ ಎರಡು ವರ್ಷವಾಗಿದ್ದರೂ, ನನ್ನೊಂದಿಗೆ ಸೆಕ್ಸ್ ನಲ್ಲಿ ಪಾಲ್ಗೊಳ್ಳಲು ವರ್ಷಾ ನಿರಾಕರಿಸುತ್ತಿದ್ದಾಳೆ. ಗಂಡ-ಹೆಂಡತಿಯ ಸಂಬಂಧದಲ್ಲಿ ಇದು ಸಾಮಾನ್ಯ ಕ್ರಿಯೆ. ಆದರೆ, ಆಕೆಯೊಂದಿಗೆ ಲೈಂಗಿಕತೆ ನಡೆಸುವ ಪ್ರತಿ ಪ್ರಯತ್ನಕ್ಕೂ ಆಕೆಯಿಂದಲೇ ವಿರೋಧ ವ್ಯಕ್ತವಾಗುತ್ತಿದೆ’ ಎಂದು ಹೇಳಿದ್ದರು.

Leave A Reply

Your email address will not be published.