ಬರೋಬ್ಬರಿ 16 ಲಕ್ಷ ಭಾರತೀಯರ ಖಾತೆಗಳನ್ನು ಬ್ಯಾನ್ ಮಾಡಿದ ವಾಟ್ಸಪ್ !! – ಕಾರಣ !??
ಈಗಿನ ಕಾಲದಲ್ಲಿ ವಾಟ್ಸಪ್ ಬಳಸದವರಿಲ್ಲ. ಎಲ್ಲರಿಗೂ ಇದರ ಬಳಕೆ ಅತ್ಯಗತ್ಯ. ಇತ್ತೀಚೆಗೆ ಬಂದ ವಾಟ್ಸಪ್ ನ ಮಾಸಿಕ ವರದಿಯ ಪ್ರಕಾರ, ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಪ್ ಏಪ್ರಿಲ್ ತಿಂಗಳಲ್ಲಿ 1.6 ಮಿಲಿಯನ್ ಭಾರತೀಯ ಬಳಕೆದಾರರ ಖಾತೆಗಳನ್ನು ನಿಷೇಧಿಸಿದೆಯಂತೆ !!
ಹೌದು. ಬಳಕೆದಾರರ ದೂರುಗಳ ಆಧಾರದ ಮೇಲೆ ಒಟ್ಟು 122 ಖಾತೆಗಳನ್ನು ನಿಷೇಧಿಸಲಾಗಿದೆ. ಆದರೆ ಅಪ್ಲಿಕೇಶನ್ನಲ್ಲಿ ಹಾನಿಕಾರಕ ಚಟುವಟಿಕೆಯನ್ನು ತಡೆಯಲು 16.66 ಲಕ್ಷ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಫೇಸ್ಬುಕ್ ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ಹೇಳಿದೆ.
ವರದಿಯಲ್ಲಿ ಹೇಳಿದ್ದೇನು?
ವಾಟ್ಸಾಪ್ ನ ವರದಿಯಲ್ಲಿ ಫೇಸ್ಬುಕ್ ಒಡೆತನದ ಸಂದೇಶ ಕಳುಹಿಸುವ ಅಪ್ಲಿಕೇಶನ್ ಬಳಕೆದಾರರ ದೂರುಗಳ ಆಧಾರದ ಮೇಲೆ ಒಟ್ಟು 122 ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಹೇಳಿದೆ. ಆದರೆ ಅಪ್ಲಿಕೇಶನ್ನಲ್ಲಿ ಹಾನಿಕಾರಕ ಚಟುವಟಿಕೆಯನ್ನು ತಡೆಯಲು 16.66 ಲಕ್ಷ ಖಾತೆಗಳನ್ನು ನಿಷೇಧಿಸಲಾಗಿದೆ. ವಾಟ್ಸಾಪ್ ಫ್ರೇಮ್ವರ್ಕ್ ಪ್ರಕಾರ, ಬಳಕೆದಾರರು ಅಪ್ಲಿಕೇಶನ್ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎನ್ನುವುದು ಗಮನಕ್ಕೆ ಬಂದಾಗ ಖಾತೆಯನ್ನು ನಿಷೇಧಿಸಲಾಗುತ್ತದೆ.
ಮೆಷಿನ್ ಲರ್ನಿಂಗ್ ಸಿಸ್ಟಮ್ ನಿಂದ ಕ್ರಮ :
“ಆದಷ್ಟು ಬೇಗ ನಿಂದನೀಯ ಖಾತೆಗಳನ್ನು ಗುರುತಿಸುವುದು ಮತ್ತು ಅದನ್ನು ತಡೆಯುವುದು ನಮ್ಮ ಗುರಿಯಾಗಿದೆ” ಎಂದು ಕಂಪನಿ ವರದಿಯಲ್ಲಿ ಹೇಳಿದೆ. ಈ ಕಾರಣದಿಂದ ಈ ಖಾತೆಗಳನ್ನು ಮ್ಯಾನುವೆಲ್ ಆಗಿ ಗುರುತಿಸುವುದು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ ಮೆಷಿನ್ ಲರ್ನಿಂಗ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ. ಈ ಮೂಲಕ ದಿನದ 24 ಗಂಟೆಯೂ ಕೂಡಾ ಆ್ಯಪ್ ಕಾರ್ಯ ಚಟುವಟಿಕೆ ಮೇಲೆ ನಿಗಾ ವಹಿಸಿ ಕ್ರಮ ಕೈಗೊಳ್ಳುವುದು ಸಾಧ್ಯವಾಗುತ್ತಿದೆ ಎಂದು ತಿಳಿದುಬಂದಿದೆ.
ಯಾವ ಖಾತೆಯ ಮೂಲಕ ನಕಾರಾತ್ಮಕ ಪ್ರತಿಕ್ರಿಯೆ ಸಲ್ಲಿಸಲಾಗುತ್ತದೆಯೋ ಆ ಖಾತೆಯನ್ನು ನಿರ್ಬಂಧಿಸಲಾಗುವುದು. ಮಾತ್ರವಲ್ಲ ಬೇರೆ ಬಳಕೆದಾರರು ವರದಿ ಮಾಡಿದಾಗಲೂ ಆ ಖಾತೆಯನ್ನು ಬ್ಲಾಕ್ ಮಾಡಲಾಗುವುದು ಎಂದು ಕಂಪನಿ ಹೇಳಿದೆ. ಆ್ಯಪ್ನ ವ್ಯವಸ್ಥೆಗಳು ಖಾತೆಯನ್ನು ಮೌಲ್ಯಮಾಪನ ಮಾಡುವುದರ ಜೊತೆಗೆ ನಕಾರಾತ್ಮಕ ಪ್ರತಿಕ್ರಿಯೆ ವರದಿಯಾದ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಂಪನಿ ಹೇಳಿದೆ.