ದೈತ್ಯ ಕಾಂಡೋಮ್‌ನೊಳಗೆ ವಿದ್ಯಾರ್ಥಿ !!! ಯಾಕೆ ?

ಲೈಂಗಿಕ ಶಿಕ್ಷಣದ ಬಗ್ಗೆ ಭಾರತದಲ್ಲಿ ಇನ್ನೂ ಕೂಡಾ ಆ ಸ್ಥಾನ ನೀಡಿಲ್ಲ. ಆದರೆ ವಿದೇಶಗಳಲ್ಲಿ ಲೈಂಗಿಕತೆಯ ಪಾಠ ಮಾಡಲು ಆದ್ಯತೆ ಇದೆ. ಅಲ್ಲಿ ಈ ಪಠ್ಯ ಹದಿಹರೆಯದ ಮಕ್ಕಳಿಗೆ ಬಹಳ ಸಂತಸ ಕೊಡುವ ತರಗತಿಗಳಲ್ಲಿ ಒಂದು ಎಂದರೆ ತಪ್ಪಾಗಲಾರದು. ಆದರೆ ಇದನ್ನು ಯಾರು ಪಾಠ ಮಾಡಿ ಸರಿಯಾಗಿ ಹೇಳಿಕೊಡುತ್ತಾರೋ ಅವರಿಗೊಂದು ಸವಾಲಿನ ಕೆಲಸ ಎಂದರೇ ತಪ್ಪಾಗಲಾರದು.

 

ಮೆಕ್ಸಿಕೋದ ಶಾಲೆಯೊಂದರಲ್ಲಿ ಶಿಕ್ಷಕರೊಬ್ಬರು ಮಕ್ಕಳಿಗೆ ಈ ಪಾಠ ಮಾಡಲು ಮನುಷ್ಯನ ಶರೀರ ಗಾತ್ರದ್ದೇ ಒಂದು ಕಾಂಡೋಮ್ ಬಳಸಿ ಈಗ ಸುದ್ದಿಯಾಗಿದ್ದಾರೆ.

ಅದರಲ್ಲಿ ಒಬ್ಬ ಶಿಕ್ಷಕ ಓರ್ವ ವಿದ್ಯಾರ್ಥಿಯನ್ನು ನಿಲ್ಲಿಸಿ, ಶಿಶ್ನದ ಬಗ್ಗೆ ವೀರ್ಯಸ್ಖಲನದ ಬಗ್ಗೆ ವಿವರಣೆ ನೀಡಿದ್ದಾರೆ. ಈ ವೀಡಿಯೋ ಈಗ ಭಾರೀ ಸದ್ದು ಮಾಡಿದೆ. ಇದು ಬಹಳ ಸೃಜನಶೀಲ ಮಾರ್ಗ ಎಂದು ಸಾಮಾಜಿಕ ತಾಣಿಗರು ಮೆಚ್ಚುಗೆ ಸೂಚಿಸಿದ್ದಾರೆ

ಶಿಕ್ಷಕನು ಕಾಂಡೋಮ್ ಧರಿಸುವ ಬಗ್ಗೆ ವಿವರಣೆ ನೀಡುತ್ತಿದ್ದಂತೆ ವಿದ್ಯಾರ್ಥಿಗಳಿಗೆ ನಗು ತಡೆದುಕೊಳ್ಳಲು ಆಗುವುದಿಲ್ಲ. ಎಲ್ಲರೂ ಬಿದ್ದು ಬಿದ್ದು ನಗಲು ಪ್ರಾರಂಭ ಮಾಡುತ್ತಾರೆ.

ಶಿಕ್ಷಕ ಒಂದು ದೊಡ್ಡ ಕಾಂಡೋಮನ್ನು ವಿದ್ಯಾರ್ಥಿಗೆ ಸುತ್ತಿದ್ದಾರೆ. ಆ ವೇಳೆ ಹೇಗೆ ಕಾಂಡೋಮನ್ನು ನಿಧಾನಕ್ಕೆ ಬಿಡಿಸಬೇಕು, ಅದನ್ನು ಹೇಗೆ ಸುರಕ್ಷಿತ ಲೈಂಗಿಕಕ್ರಿಯೆಗೆ ಬಳಸಬಹುದು ಎಂದು ವಿವರಣೆ ನೀಡಿದ್ದಾರೆ.

ಈಗಾಗಲೇ ಜಾಲತಾಣದಲ್ಲಿ ವೀಡಿಯೋ
ಹರಿದಾಡಿದ್ದು, ಲಕ್ಷಾಂತರ ಜನರು ವೀಕ್ಷಣೆ ಮಾಡಿದ್ದಾರೆ. ಕೆಲವರು ಮಕ್ಕಳಿಗೆ ಲೈಂಗಿಕ ಶಿಕ್ಷಣದ ಬಗ್ಗೆ ಚಿಕ್ಕ ವಯಸ್ಸಿನಿಂದಲೇ ತಿಳಿಸಿಕೊಡುವುದರಿಂದ ಅವರು ಜಾಗೃತರಾಗುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.