ಕಡಬ: ಬಾರೊಂದರಲ್ಲಿ ಮಹಿಳೆಯೊಂದಿಗೆ ಕುಡುಕನ ರೊಮ್ಯಾನ್ಸ್-ಕೋಣೆಯಲ್ಲಿ ಅಶ್ಲೀಲ ವರ್ತನೆ!! ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್-ಮೂಕಪ್ರೇಕ್ಷಕರಾದ ಬಾರ್ ಸಿಬ್ಬಂದಿ
ಕಡಬದ ಮುಖ್ಯಪೇಟೆಯಲ್ಲಿರುವ ಬಾರೊಂದರಲ್ಲಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಸಾರ್ವಜನಿಕವಾಗಿಯೇ ಮಹಿಳೆಯನ್ನು ತಬ್ಬಿಕೊಂಡು ರೊಮ್ಯಾನ್ಸ್ ಮಾಡಿದ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕೇವಲ ರೊಮಾನ್ಸ್ ಮಾತ್ರವಲ್ಲದೇ ಕೋಣೆಯೊಂದರಲ್ಲಿ ಅಸಭ್ಯವಾಗಿಯೂ ವರ್ತಿಸಿದ್ದು, ಎಲ್ಲಾ ವಿಚಾರ ಗಮನಕ್ಕೆ ಬಂದಿದ್ದರೂ ಬಾರ್ ಮಾಲೀಕರಾಗಲಿ, ಸಿಬ್ಬಂದಿಗಳಾಗಲಿ ಆಕ್ಷೇಪ ವ್ಯಕ್ತಪಡಿಸದೇ ಇದ್ದುದರಿಂದ ಕುಡುಕರ ಈ ವರ್ತನೆಗೆ ಬೆಂಬಲ ನೀಡಿದಂತಾಗಿದೆ ಎನ್ನುವ ಮಾತುಗಳು ಸಾರ್ವಜನಿಕವಾಗಿ ಕೇಳಿ ಬಂದಿದೆ.
ಮದ್ಯ ಖರೀದಿಸಲು ಬಂದಿದ್ದ ಹಲವು ಗ್ರಾಹಕರು ಘಟನೆಗೆ ಸಾಕ್ಷಿಯಾಗಿದ್ದು,ಸದ್ಯ ವೀಡಿಯೋ ವೈರಲ್ ಆಗುತ್ತಿದ್ದಂತೆ ಸಂಬಂಧಪಟ್ಟವರು ಯಾವ ಕ್ರಮ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದುನೋಡಬೇಕಾಗಿದೆ.