ಮಳಲಿ ಮಸೀದಿ ವಿವಾದ : ಎಸ್.ಡಿ.ಪಿ.ಐ ಗೆ ಖಡಕ್ ವಾರ್ನಿಂಗ್ ಮಾಡಿದ ಜಮಾತ್ ಕಮಿಟಿ ?

ಮಂಗಳೂರಿನ ಮಳಲಿ ಮಸೀದಿ ವಿಚಾರಕ್ಕೆ ಸಂಬಂಧಿಸಿದಂತೆ ಎಸ್ಡಿಪಿಐ ‌ಪಕ್ಷಕ್ಕೆ ಅಲ್ಲಿನ ಜಮಾಅತ್ ಖಡಕ್ ಸಂದೇಶ ರವಾನಿಸಿದೆ. ಮಸೀದಿಯಲ್ಲಿ ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿದಂತೆ ಎಸ್ಡಿಪಿಐ ಪಕ್ಷದ ಸಭೆಯಲ್ಲಿ ಮಾತನಾಡುತ್ತಿರುವ ತೆ ಹಿನ್ನಲೆಯಲ್ಲಿ ಮಸೀದಿಯ ಮುಖಂಡರು ಪಕ್ಷದ ಮುಖಂಡರಿಗೆ ಸಂದೇಶ ರವಾನಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಷಯ ಹರಿದಾಡುತ್ತಿದೆ.

 

“ಮಳಲಿ ಮಸೀದಿಯ ವಿಷಯದಲ್ಲಿ ಕೆಲವು ಸೋಕಾಲ್ಡ್ ಸಮುದಾಯ ರಕ್ಷಕರು, ಬಾಯಿ ಬಡುಕರು , ಸಮುದಾಯಕ್ಕೆ ಬೆಂಕಿ ಹಚ್ಚುವವರು ನಮ್ಮ ಜಮಾತ್ ಕಮೀಟಿ ಮೇಲೆ ಇಲ್ಲ ಸಲ್ಲದ ಆರೋಪ ಮಾಡಲಿಕ್ಕೆ ಹೊರಟಿದ್ದಾರೆ. ನಾವು ಯಾವ ಸಂಘಟಣಿಯವರಿಗೂ ಇಲ್ಲಿಗೆ ಬಂದು ಮಸೀದಿಯ ಬಗ್ಗೆ ಮಾತನಾಡಲು ಅವಕಾಶ ನೀಡಲಿಲ್ಲ ನಮ್ಮ ಮಸೀದಿಯ ಸಮಸ್ಯೆಯನ್ನು ನಾವೇ ಬಗೆಹರಿಸುತ್ತೇವೆ . ನಾವೆಲ್ಲರೂ ಇಲ್ಲಿ ಮಸೀದಿಯ ವಿಷಯದಲ್ಲಿ ಪಕ್ಷ ಭೇದ ಮರೆತು ಒಂದಾಗಿದ್ದೇವೆ , ನಿಮಗೆ ರಾಜಕೀಯ ಮಾಡಲು ಇದ್ದರೆ ಮಾಡಿ ಆದರೆ ನಮ್ಮ ಮಸೀದಿ ಹಾಗು ಸಮುದಾಯದ ಹೆಸರಿನಲ್ಲಿ ಮಾಡಬೇಡಿ, ಯಾಕೆಂದರೆ ನೀವು ಹೋದಲ್ಲೆಲ್ಲ ಸಮುದಾಯಕ್ಕೆ ತೊಂದರೆ ಆಗಿದ್ದು ಬಿಟ್ಟರೆ ಒಳ್ಲೆದಂತೂ ಆಗಲೇ ಇಲ್ಲ, ಹೇಗಿರುವಾಗ ನಿಮ್ಮ ಅವಶ್ಯಕತೆಯೂ ನಮಗಿಲ್ಲ. ನಮ್ನ ಜಮಾತ್ ಗೆ 900 ವರ್ಷದ ಇತಿಹಾಸ ಇದೆ. ನಿಮ್ಮಿಂದ ನಮಗೆ ಕಲಿಯಲು ಏನೂ ಇಲ್ಲ ,ನಮಗೆ ಮಾರ್ಗದರ್ಶನ ನೀಡಲು ಉಲೇಮಾಗಳು ಉಸ್ತಾದ್ ಗಳಿದ್ದಾರೆ .ರಾಜಕೀಯ ಮಾಡಲು ನಮ್ಮ ಜಮಾತಿಗೆ ಬರಬೇಡಿ” ಎಂದು ಹೇಳಿದ್ದಾರೆ ಎನ್ನಲಾದ ಸಂದೇಶ ಹರಿದಾಡುತ್ತಿದೆ. ಈ ಕುರಿತಂತೆ ಹಮೀದ್ ಕೈಕಂಬ ಅವರು ಸ್ಪಷ್ಟನೆ ನೀಡಿದ್ದಾರೆ.

ಸ್ಪಷ್ಟೀಕರಣ.

ಎಸ್ಡಿಪಿಐ ಗೆ ನೇರ ಎಚ್ಚರಿಕೆ ಎಂಬ ತಲೆ ಬರಹದಲ್ಲಿ ಮಳಲಿ ಮಸ್ಜಿದ್ ವಿವಾದಕ್ಕೆ ಸಂಬಂಧ ಪಟ್ಟಂತೆ ಎಸ್ಡಿಪಿಐ ವಿರುದ್ಧ ಜಮಾತಿಗನ ಹೆಸರಲ್ಲಿ ಲೇಖನವೊಂದು ಹರಿದಾಡುತ್ತಿದೆ, ಆ ಲೇಖನಕ್ಕೂ ಮಳಲಿ ಜಮಾತ್ ಕಮಿಟಿಗೂ ಯಾವುದೇ ಸಂಬಂಧ ಇಲ್ಲ…ಎಂದು ಹಮೀದ್ ಬಿನ್ ಅಬ್ಬಾಸ್ ಕೈಕಂಬ ಎಂಬವರು ತಿಳಿಸಿದ್ದಾರೆ.

ದಯವಿಟ್ಟು ತಮ್ಮ ರಾಜಕೀಯ ವಿರೋಧಕ್ಕಾಗಿ ಒಂದು ರಾಜಕೀಯ ಪಕ್ಷವನ್ನು ನಮ್ಮ ವಿರುದ್ಧ ಎತ್ತಿಕಟ್ಟಬೇಡಿ. ನಾವುಗಳು ಆದಷ್ಟು ಶಾಂತಿ ಮತ್ತು ಸೌಹಾರ್ದತವಾಗಿ ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನ ಪಡುತ್ತಿರುವಾಗ ಕೆಲವೊಂದು ಕುತ್ಸಿತ ಮನಸ್ಥಿತಿಯ ವಿಘ್ನ ಸಂತೋಷಿಗಳು ತಮ್ಮ ರಾಜಕೀಯ ವಿರೋಧವನ್ನು ತೀರಿಸಲು ಈ ಸಂಧರ್ಭವನ್ನು ಬಳಸಿಕೊಳ್ಳುತ್ತಿರುವುದು ನಿಜಕ್ಕೂ ಖಂಡನೀಯ. ಇನ್ನೂ ಮುಂದಕ್ಕೆ ಮಳಲಿ ಮಸೀದಿಯ ವಿಚಾರದಲ್ಲಿ ಯಾರಾದರೂ ನಿರ್ದಿಷ್ಟ ರಾಜಕೀಯ ಪಕ್ಷವನ್ನು ಗುರಿಪಡಿಸಿ ಲೇಖನಗಳನ್ನು ಹರಿಯಬಿಟ್ಟಲ್ಲಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ದಯವಿಟ್ಟು ನಮ್ಮ ಈ ಸಂಕಷ್ಟದ ಸಮಯದಲ್ಲಿ ನಮ್ಮೊಂದಿಗೆ ನಿಂತು ಈ ವಿವಾದ ಅಂತ್ಯವಾಡಲು ಸಹಕರಿಸಿ ಎಂದು ವಿನಂತಿಸಿಕೊಂಡಿದ್ದಾರೆ.

Leave A Reply

Your email address will not be published.