ವೈರಲ್ ಆಗಲು ಕಾರು ಡ್ರೈವ್ ಮಾಡುತ್ತಾ ರಸ್ತೆಯುದ್ದಕ್ಕೂ ನೋಟುಗಳನ್ನು ಎಸೆದ ಯುವಕನ ಬಂಧನ

ಈ ದಿನಗಳಲ್ಲಿ ಬಹಳಷ್ಟು ಮಂದಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಬೇಕೆಂಬ ಹುಚ್ಚಿನಿಂದ ಚಿತ್ರ-ವಿಚಿತ್ರ ಹುಚ್ಚಾಟಗಳನ್ನು ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ಇಂಟರ್ನೆಟ್‌ನಲ್ಲಿ ವೈರಲ್ ಆಗಿಬಿಟ್ಟರೆ ಏನೋ ಒಂದು ಮಹಾ ಸಾಧನೆ ಮಾಡಿದಂತೆ ಎಂಬ ಭ್ರಮೆಯಲ್ಲಿ ಇರುವ ಮಂದಿ ಮಾಡುವ ಅತಿರೇಕದ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹೇರಳವಾಗಿರುವುದನ್ನು ನಾವು ಕಾಣಬಹುದು.

 

ಸಾಮಾಜಿಕ ಜಾಲತಾಣದಲ್ಲೊಂದು ಹಾಕಲಾದ ವಿಡಿಯೋದಲ್ಲಿ ಭೂಪನೊಬ್ಬ ಥಾರ್ ವಾಹನಗಳನ್ನು ಚಲಾಯಿಸುತ್ತಾ, ದಾರಿಯುದ್ದಕ್ಕೂ ನೋಟುಗಳನ್ನು ಎಸೆಯುತ್ತಾ ಸಾಗುವುದನ್ನು ಕಾಣಬಹುದು. ಈ ಘಟನೆ ನಡೆದಿರುವುದು ನೋಯ್ಡಾದಲ್ಲಿ, ಆ ಯುವಕ ಮಹೀಂದ್ರಾ ಥಾರ್ ವಾಹನಗಳನ್ನು ಚಲಾಯಿಸುತ್ತಾ, ವಾಹನದಿಂದ ಹೊರಕ್ಕೆ ಸಾರ್ವಜನಿಕ ರಸ್ತೆಯಲ್ಲಿ ನೋಟುಗಳನ್ನು ಎಸೆಯುತ್ತಿರುವ ದೃಶ್ಯವನ್ನು, ಆ ವಾಹನ ಪಕ್ಕದಲ್ಲಿ ಇನ್ನೊಂದು ವಾಹನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಚಿತ್ರೀಕರಿಸಿದ್ದಾರೆ.

ಅಲ್ಲದೆ ವಾಹನವನ್ನು ಚಲಾಯಿಸುತ್ತಾ ಡ್ರೈವರ್ ಸೈರನ್ ಹಾಕಿರುವುದು ಕಾಣಬಹುದು. ಭಾರತದ ಕಾನೂನಿನ ಪ್ರಕಾರ, ವಾಹನಗಳಲ್ಲಿ ಹೂಟರ್ ಮತ್ತು ಸೈರನ್ ಹಾಕುವುದನ್ನು ನಿಷೇಧಿಸಲಾಗಿದೆ. ಇದೀಗ ಪೊಲೀಸರು ಆ ವಾಹನವನ್ನು ಜಪ್ತಿ ಮಾಡಿದ್ದಾರೆ. ಚಲಿಸುತ್ತಿರುವ ವಾಹನದಲ್ಲಿ ಕರೆನ್ಸಿ ಎಸೆಯುತ್ತಿದ್ದ ಮತ್ತು ತನ್ನ ವಾಹನದಲ್ಲಿ ಹೂಟರನ್ನು ಹಾಕಿದ್ದ ಆ ವ್ಯಕ್ತಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.

Leave A Reply

Your email address will not be published.